Asianet Suvarna News Asianet Suvarna News

ಸಂನ್ಯಾಸಿಯ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್!

ಸ್ವಾಮೀಜಿಯ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದ ಸಬ್ ಇನ್ಸ್ ಪೆಕ್ಟರ್ ಅನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಅಮಾನತುಗೊಳಿಸಿದ್ದು, ಅವರ ವಿರುದ್ಧ ಹೆಚ್ಚಿನ ತನಿಖೆ ಮಾಡುವಂತೆ ಸೂಚನೆ ನೀಡಿದ ಘಟನೆ ಭಾನುವಾರ ನಡೆದಿದೆ.

in Bulandshahr Police Sub Inspector suspended allegedly misbehaving with a seer san
Author
Bengaluru, First Published Apr 24, 2022, 10:18 PM IST

ಲಕ್ನೋ (ಏ.24): ಬುಲಂದ್ ಶಹರ್ (Bulandshahr ) ಜಿಲ್ಲೆಯಲ್ಲಿ ಸ್ವಾಮೀಜಿಯ (Seer) ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಸ್ ಐ)  ಅನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಟ್ವಿಟರ್ ಪೋಸ್ಟ್ ಮೂಲಕ ಭಾನುವಾರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ, ನಂತರ ಸಿಕಂದರಾಬಾದ್ ಸರ್ಕಲ್ ಆಫೀಸರ್ (ಸಿಒ) ಅವರನ್ನು ಈ ವಿಷಯದ ಬಗ್ಗೆ ಪರಿಶೀಲಿಸುವಂತೆ ಕೇಳಲಾಗಿದೆ.

ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಎಸ್‌ಐ ಪವನ್ ಕುಮಾರ್ (SI Pawan Kumar) ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಎಸ್‌ಎಸ್‌ಪಿ (SSP) ತಿಳಿಸಿದ್ದಾರೆ. ವಿನಾಕಾರಣ ವ್ಯಕ್ತಿಯ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪವನ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಕೋಡ್ ಪೊಲೀಸ್ ಠಾಣಾ (Kakod Police Station) ವ್ಯಾಪ್ತಿಯ ಕಮಲಾಪುರ ಗ್ರಾಮದ  (Kamalapur Village) ದೇವಸ್ಥಾನದಲ್ಲಿ ವಾಸವಾಗಿರುವ ಶ್ರೀಗಳನ್ನು ಉಲ್ಲೇಖಿಸಿದ ಎಸ್‌ಎಸ್‌ಪಿ, ಕೆಲವು ದಿನಗಳ ಹಿಂದೆ ಸೈಕಲ್‌ನಲ್ಲಿ ಯಾವುದೋ ಸ್ಥಳಕ್ಕೆ ಹೋಗುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ.

ಈ ವೇಳೆ ಪೊಲೀಸರು ಸ್ವಾಮೀಜಿಗೆ ಅವರ ಗುರುತಿನ ಚೀಟಿಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ್ದ ಸ್ವಾಮೀಜಿ ಸದ್ಯ ಯಾವುದೇ ಕಾರ್ಡ್ ಗಳನ್ನು ನಾನು ತೆಗೆದುಕೊಂಡು ಬಂದಿಲ್ಲ ಎಂದು ಹೇಳಿದ್ದಾರೆ. ಇದ ಬೆನ್ನಲ್ಲಿಯೇ ಅವರನ್ನು ಸಮೀಪದ ಕಟ್ಟಡಕ್ಕೆ ಕರೆದೊಯ್ಡ ಪವನ್ ಕುಮಾರ್, ಅವರ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳ ಹಿಂದೆ, ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವಾಹನ ತಪಾಸಣೆ ವೇಳೆ ಬಿಜೆಪಿ ಕಾರ್ಯಕರ್ತನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬರನ್ನು ಅಮಾನತುಗೊಳಿಸಲಾಗಿತ್ತು. ವಾಹನ ತಪಾಸಣೆಗಾಗಿ ಮಸೂದಾಬಾದ್ ಕ್ರಾಸಿಂಗ್‌ನಲ್ಲಿ ನಿಯೋಜಿಸಲಾದ ಪೊಲೀಸರು ಶನಿವಾರ ನಗರ ಬಿಜೆಪಿ ಸಮಿತಿಯ ಬೂತ್ ಸಮಿತಿ ಅಧ್ಯಕ್ಷ ತನಿಷ್ಕ್ ಮಿತ್ತಲ್ ಅವರಿಂದ ದಾಖಲೆಗಳನ್ನು ಕೇಳಿದ್ದರು.

Law And Order ಯೋಗಿ ನಾಡಲ್ಲಿ ಅನುಮತಿ ಇಲ್ಲದೆ ಧರ್ಮದ ಮೆರವಣಿಗೆ ಇಲ್ಲ, ಧ್ವನಿವರ್ಧಕಕ್ಕೂ ಹೊಸ ನಿಯಮ!

ಮಿತ್ತಲ್ ಪರಿಶೀಲನೆಯ ಸಮಯದಲ್ಲಿ ವಾಹನದ ಮಾನ್ಯ ದಾಖಲೆಗಳನ್ನು ಹೊಂದಿರದಿರುವುದು ಕಂಡುಬಂದಿದೆ. ಮಿತ್ತಲ್ ಮತ್ತು ಪೊಲೀಸರ ನಡುವೆ ಈ ಕುರಿತಾಗಿ ವಾಗ್ವಾದ ನಡೆಯಿತು, ನಂತರ ಬಿಜೆಪಿ ಕಾರ್ಯಕರ್ತನನ್ನು ಬನ್ನಾದೇವಿ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಹೆಚ್ಚಿನ ಜನರು ಜಮಾಯಿಸಿ ಗಲಾಟೆ ಮಾಡಿದ್ದರು. ವಾಹನ ತಪಾಸಣೆ ವೇಳೆ ಯುವಕನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದ್ದರೆ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು.ಮಿತ್ತಲ್ ಅವರ ಬೆಂಬಲಕ್ಕೆ ಬಂದ ನಗರ ಬಿಜೆಪಿ ಶಾಸಕ ಸಂಜೀವ್ ರಾಜಾ, ಪಕ್ಷದ ಕಾರ್ಯಕರ್ತ ತಾನು ದಾಖಲೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆತಿದ್ದೇನೆ ಮತ್ತು ಅವರ ಮನೆಯಿಂದ ಅವುಗಳನ್ನು ಪಡೆಯುತ್ತೇನೆ ಎಂದು ಪೊಲೀಸರಿಗೆ ವಿವರಿಸಿದರು, ಆದರೆ ಅವರು ಅವರೊಂದಿಗೆ "ಅನುಚಿತವಾಗಿ ವರ್ತಿಸಲು" ಪ್ರಾರಂಭಿಸಿದರು.

UP MLC Election:ಬಿಜೆಪಿಗೆ ಪ್ರಚಂಡ ಗೆಲುವು, ಖಾತೆ ತೆರೆಯದ SP!

ಟ್ರಾಫಿಕ್ ಕಾನೂನು ( Trafic Rules ) ಉಲ್ಲಂಘನೆಗಳನ್ನು ಪರಿಶೀಲಿಸಲು ಅವರಿಗೆ ಅಧಿಕಾರವಿದೆ, ಆದರೆ ಇದು ಜವಾಬ್ದಾರಿಯುತ ನಾಗರಿಕರಿಗೆ ಮತ್ತು ಸಾಮಾನ್ಯ ಜನರಿಗೆ ಕಿರುಕುಳ ನೀಡುವ ಹಕ್ಕನ್ನು ನೀಡುವುದಿಲ್ಲ ಎಂದು ರಾಜಾ ಹೇಳಿದರು. "ಎಸ್‌ಎಸ್‌ಪಿ ತನ್ನ ಬಲವನ್ನು ಶಿಸ್ತುಬದ್ಧಗೊಳಿಸಲು ಸಾಧ್ಯವಾಗದಿದ್ದರೆ, ಅಂತಹ ತಪ್ಪಿತಸ್ಥ ಪೊಲೀಸರನ್ನು ಹೇಗೆ ಎದುರಿಸಬೇಕೆಂದು ನಮ್ಮ ಪಕ್ಷಕ್ಕೆ ತಿಳಿದಿದೆ" ಎಂದು ಶಾಸಕರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

Follow Us:
Download App:
  • android
  • ios