Asianet Suvarna News Asianet Suvarna News

'ಪೋಟೋ ಶೂಟ್‌ಗಾಗಿ ಮೋದಿ ವೈಮಾನಿಕ ಸಮೀಕ್ಷೆ'

* ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ಟೀಕಿಸಿದ ಮಹಾ ಸಿಎಂ
* ಪೋಟೋ ಶೂಟ್   ಗಾಗಿ ಸಮೀಕ್ಷೆ ನಡೆಸಿದಂತೆ ಇದೆ
* ಮಹಾರಾಷ್ಟ್ರ ಸಿಎಂ ಪ್ರವಾಸವನ್ನು ಬಿಜೆಪಿ ಟೀಕಿಸಿತ್ತು
* ನಾನು ಸ್ಥಳಕ್ಕೆ ಯತೆರಳಿ ಪರಿಸ್ಥಿತಿ ಅರಿಯುವ ಯತ್ನ ಮಾಡಿದ್ದೇನೆ

In A Helicopter For A Photo Session Uddhav Thackeray s Jibe At PM Modi mah
Author
Bengaluru, First Published May 22, 2021, 5:37 PM IST

ಮುಂಬೈ (ಮೇ 22)  ತೌಕ್ಟೆ  ಚಂಡಮಾರುತದಿಂದ ಹಾನಿಯಾದ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಇದನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟೀಕೆ ಮಾಡಿದ್ದಾರೆ. ಫೋಟೋ ಶೂಟ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಠಾಕ್ರೆ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಭೇಟಿ  ನೀಡಿ ಅಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಿದ್ದರು.  ನಾನು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಗಮನಿಸಿದ್ದೇನೆ, ಹೆಲಿಕಾಪ್ಟರ್‌ನಲ್ಲಿ ಕೂತು ವೈಮಾನಿಕ ಸಮೀಕ್ಷೆ ನಡೆಸಿಲ್ಲ ಎಂದಿದ್ದಾರೆ.

ನೆಹರು-ಗಾಂಧಿ ಕುಟುಂಬಗಳು ರೂಪಿಸಿದ ಯೋಜನೆ ಭಾರತ ಕಾಪಾಡುತ್ತಿದೆ

ಉದ್ದವ್‌ ಠಾಕ್ರೆ ತೌಕ್ಟೆ ಚಂಡಮಾರುತದ ಪರಿಣಾಮದ  ಅರಿಯಲು ಕೊಂಕಣದ ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಭೇಟಿ ನೀಡಿ, ನಷ್ಟದ ಬಗ್ಗೆ ಎರಡು ದಿನಗಳಲ್ಲಿ ಮೌಲ್ಯಮಾಪನ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.  ಆದರೆ, ಮಹಾರಾಷ್ಟ್ರದ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉದ್ಧವ್‌ ಠಾಕ್ರೆ ಕೇವಲ ಮೂರು ಗಂಟೆಗಳ ಕಾಲ ಸ್ಥಳದಲ್ಲಿ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲರು ಎನ್ನುವುದು ಅಚ್ಚರಿ ತಂದಿದೆ ಎಂದು ಟೀಕಿಸಿದ್ದರು. ಈಗ ಬಿಜೆಪಿಗೆ ಠಾಕ್ರೆ ತಿರುಗೇಟು ಕೊಟ್ಟಿದ್ದಾರೆ.

ಈ ಟೀಕೆಗೆ ತಿರುಗೇಟು ನೀಡಿರುವ ಉದ್ದವ್‌ ಠಾಕ್ರೆ, ನಾನು ನಾಲ್ಕು ಗಂಟೆಗಳ ಕಾಲ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರೆ ಪರವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಹಿನ್ನೆಲೆ ನಾನು ಕನಿಷ್ಠ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಪೋಟೋ ಶೂಟ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿಲ್ಲ. ನಾನೇ ನನಗೆ ಛಾಯಾಗ್ರಾಹಕ ಎಂದು ಪರೋಕ್ಷವಾಗಿ ಮೋದಿಗೆ ಟಾಂಗ್‌ ನೀಡಿದ್ದಾರೆ.

ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಲು ಇಲ್ಲಿಗೆ ಬಂದಿಲ್ಲ. ಈ ಸಂದರ್ಭದಲ್ಲಿ ಜನರ ಜತೆ ನಿಲ್ಲುವುದು ಮುಖ್ಯ ಎಂದು ಠಾಕ್ರೆ ಹೇಳಿದ್ದರು.  ತೌಕ್ಟೆ ಚಂಡಮಾರುತದಿಂದ ಹಾನಿಯಾದ ಗುಜರಾತ್‌ಗೆ ಪ್ರಧಾನಿ ತಕ್ಷಣವೇ  1000 ಕೋಟಿ ರೂ, ನೆರವು ಘೋಷಿಸಿದ್ದರು.

Follow Us:
Download App:
  • android
  • ios