Asianet Suvarna News Asianet Suvarna News

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ಗೆ ಕೇಂದ್ರ ಸಚಿವರ ಭೇಟಿ, ರಾಜೀವ್‌ ಚಂದ್ರಶೇಖರ್‌ಗೆ ಗರಿಮೆ!

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ನಾಗಾಲ್ಯಾಂಡ್‌ಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌,  ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದ್ದಲ್ಲದೆ ಮತ್ತು ಜುನ್ಹೆಬೋಟೊ ಮತ್ತು ವೋಖಾ ಜಿಲ್ಲೆಗಳಲ್ಲಿ ಫಲಾನುಭವಿಗಳನ್ನು ಭೇಟಿ ಮಾಡಿದ್ದಾರೆ.

In a first in four decades an Union Minister Rajeev Chandrasekhar visits Zunheboto a Nagaland District san
Author
First Published Sep 26, 2022, 6:57 PM IST

ಕೋಹಿಮಾ (ಸೆ. 26): ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಸೋಮವಾರ ನಾಗಾಲ್ಯಾಂಡ್‌ನ ಸಣ್ಣ ಜಿಲ್ಲೆಯಾದ ಜುನ್ಹೆಬೋಟೊಗೆ ಭೇಟಿ ನೀಡಿದರು. ಆ ಮೂಲಕ ನಾಲ್ಕು ದಶಕಗಳ ಅವಧಿಯಲ್ಲಿ ನಾಗಾಲ್ಯಾಂಡ್‌ಗೆ ಭೇಟಿ ನೀಡಿದ ಮೊದಲ ಕೇಂದ್ರ ಸಚಿವ ಎನಿಸಿಕೊಂಡದರು. ನಾಗಾಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸದಲ್ಲಿರುವ ರಾಜೀವ್‌ ಚಂದ್ರಶೇಖರ್‌, ದಿಮಾಪುರದಿಂದ 9 ಗಂಟೆಗಳ ಗುಡ್ಡಗಾಡು ರಸ್ತೆಗಳ ಪ್ರಯಾಣದ ಮೂಲಕ  ಬೆಟ್ಟಗಳ ಮೇಲಿರುವ ಪಟ್ಟಣಕ್ಕೆ ತಲುಪಿದ್ದರು. ಅವರು ಜುನ್ಹೆಬೋಟೊ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿದರು ಮತ್ತು ಸ್ಥಳೀಯ ಆಕಾಂಕ್ಷೆಗಳನ್ನು ರೂಪು ಮಾಡುವ ಮತ್ತು ಉದ್ಯೋಗಗಳು ಮತ್ತು ಉದ್ಯಮಶೀಲತೆಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಅವರನ್ನು ಕೇಳಿದರು. "ನಮ್ಮ ಒತ್ತು ಸ್ಥಳೀಯ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಮತ್ತು ನಗರ ಕೇಂದ್ರಗಳಿಗೆ ವಲಸೆಯನ್ನು ಕಡಿಮೆ ಮಾಡಬೇಕು ಎನ್ನುವುದಾಗಿದೆ' ಎಂದು ಅವರು ಈ ವೇಳೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದ ಸಚಿವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಯೋಜನೆಯ ಲಾಭ ಕೊನೆಯ ವ್ಯಕ್ತಿಗೆ ತಲುಪುವವರೆಗೆ, ಪ್ರತಿಯೊಬ್ಬರ ಧ್ವನಿಯನ್ನು ಆಲಿಸುವವರೆಗೆ ಮತ್ತು ಪ್ರತಿ ಕುಂದುಕೊರತೆಗಳನ್ನು ಪರಿಹರಿಸುವವರೆಗೂ ಉತ್ಸಾಹದಿಂದ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಒತ್ತಾಯಿಸಿದರು.

ಅವರು ಜುನ್ಹೆಬೋಟೊ (Zunheboto)  ಮತ್ತು ವೊಖಾದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿದರು. ಈ ಯೋಜನೆಯಿಂದಾಗಿ ಅವರೆಲ್ಲರ ಜೀವನವು ಹೇಗೆ ರೂಪಾಂತರಗೊಂಡಿದೆ ಎನ್ನುವುದರ ಕುರಿತು ಮಾತನಾಡಿದರು. "ಇಂತಹ ಸಂದರ್ಭಗಳಲ್ಲಿ, ಮೋದಿ ಸರ್ಕಾರದಲ್ಲಿ ಮಂತ್ರಿಯಾಗಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇದೆ ಹಾಗೂ ಗರ್ವದಿಂದ ಮಾತನಾಡುತ್ತೇನೆ. ಜೀವನವನ್ನು ಪರಿವರ್ತಿಸುವ ಅವರ ದೃಷ್ಟಿಯಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಬ್ಕಾ ಸಾಥ್‌ ಸಬ್ಕಾ ವಿಶ್ವಾಸ" ಎಂದು ಸಚಿವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಶತಮಾನ ಭಾರತದ್ದು: ರಾಜೀವ್‌ ಚಂದ್ರಶೇಖರ್‌

ರಾಜೀವ್‌ ಚಂದ್ರಶೇಖರ್ ಅವರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿದರು ಮತ್ತು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್‌ ಆಧಾರಿತ ನವ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಅವರೊಂದಿಗೆ ಹಂಚಿಕೊಂಡರು.

ನವ ಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಚಂದ್ರಶೇಖರ್ ನಂತರ ಏಷ್ಯಾದ ಅತಿದೊಡ್ಡ ಬ್ಯಾಪ್ಟಿಸ್ಟ್ ಚರ್ಚ್ ಎಂದು ಕರೆಯಲ್ಪಡುವ ಜುನ್ಹೆಬೋಟೊದಲ್ಲಿರುವ ಸುಮಿ ಬ್ಯಾಪ್ಟಿಸ್ಟ್ ಚರ್ಚ್‌ಗೆ ಭೇಟಿ ನೀಡಿದರು ಮತ್ತು ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಿದರು. ಮಧ್ಯಾಹ್ನದ ನಂತರ, ಅವರು ವೋಖಾಗೆ ತೆರಳಿದರು, ಅಲ್ಲಿ ಅವರು ಲಾಂಗ್ಸಾ ಕೌನ್ಸಿಲ್ ಹಾಲ್‌ನ ಹಿರಿಯರು ಮತ್ತು ಲೋಥಾ ಹೋಹೋ ಮತ್ತು ಎಲೋ ಹೋಹೋ ಸಂಘಟನೆಗಳ ಪದಾಧಿಕಾರಿಗಳನ್ನು ಹೊರತುಪಡಿಸಿ ಜಿಲ್ಲೆಯ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವ್ಯಾಪಾರ ಸಮುದಾಯದ ಪ್ರತಿನಿಧಿಗಳೊಂದಿಗೆ ಸರಣಿ ಸಭೆಗಳಲ್ಲಿ ಭಾಗವಹಿಸಿದರು. ನಾಳೆ ಸಂಜೆ ಅವರು ದೆಹಲಿಗೆ ಮರಳಲಿದ್ದಾರೆ.
 

Follow Us:
Download App:
  • android
  • ios