40 ದಿನದಲ್ಲಿ ಪ್ರತಿ ಶನಿವಾರವೇ ಯುವಕನಿಗೆ 7 ಸಲ ಕಚ್ಚಿದ ಹಾವು; ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಶಾಕ್!
ಉತ್ತರ ಪ್ರದೇಶದ ಫತೇಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 24 ವರ್ಷದ ವಿಕಾಸ್ ದುಬೆ ಎನ್ನುವ ಯುವಕನೊಬ್ಬ, 40 ದಿನಗಳ ಅಂತರದಲ್ಲಿ ವಿಷಕಾರಿ ಹಾವಿನಿಂದ ಬರೋಬ್ಬರಿ 7 ಸಲ ಕಚ್ಚಿಸಿಕೊಂಡಿದ್ದಾನೆ. ಅಲ್ಲದೇ ಪ್ರತಿ ಶನಿವಾರವೇ ಯುವಕ ಹಾವಿನ ಕಡಿತಕ್ಕೆ ಒಳಗಾಗಿರುವ ಆಶ್ವರ್ಯಕಾರಿ ಸುದ್ದಿ ಹೊರ ಬಿದ್ದಿದೆ.
ಫತೇಪುರ (ಜು.15): ಉತ್ತರ ಪ್ರದೇಶದ ಫತೇಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 24 ವರ್ಷದ ವಿಕಾಸ್ ದುಬೆ ಎನ್ನುವ ಯುವಕನೊಬ್ಬ, 40 ದಿನಗಳ ಅಂತರದಲ್ಲಿ ವಿಷಕಾರಿ ಹಾವಿನಿಂದ ಬರೋಬ್ಬರಿ 7 ಸಲ ಕಚ್ಚಿಸಿಕೊಂಡಿದ್ದಾನೆ. ಅಲ್ಲದೇ ಪ್ರತಿ ಶನಿವಾರವೇ ಯುವಕ ಹಾವಿನ ಕಡಿತಕ್ಕೆ ಒಳಗಾಗಿರುವ ಆಶ್ವರ್ಯಕಾರಿ ಸುದ್ದಿ ಹೊರ ಬಿದ್ದಿದೆ.
ಪ್ರತಿ ಶನಿವಾರ ಹಾವಿನ ಕಡಿತಕ್ಕೆ ಒಳಗಾಗುವ ಯುವಕ ಒಂದೇ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ. ಅಲ್ಲದೇ ಆಸ್ಪತ್ರೆಗೆ ದಾಖಲಾದ ಒಂದೇ ದಿನದಲ್ಲಿ ಗುಣಮುಖನಾಗುತ್ತಿದ್ದ ಎನ್ನುವ ಅಂಶ ಬಯಲಾಗಿದೆ. ಹಾವು ಕಚ್ಚಿದ ಬಳಿಕ ಆತ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಹಣಕಾಸು ನೆರವನ್ನೂ ಕೇಳಿದ್ದ.
ಕೋಟ್ಯಂತರ ಭಾರತೀಯರ ಮೊಬೈಲ್‌ಗಳಿಗೆ ಹ್ಯಾಕಿಂಗ್ ಭೀತಿ! ಕೇಂದ್ರ ಸರ್ಕಾರ ಕೊಟ್ಟ ಎಚ್ಚರಿಕೆ ಏನು?
ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ್ ನಯನ್ ಗಿರಿ ಪ್ರತಿಕ್ರಿಯಿಸಿ, ‘ನಿಜವಾಗಿಯೂ ಹಾವು ಕಚ್ಚುತ್ತಿದೆಯೇ ಎಂಬುದನ್ನು ನಾವು ಲೆಕ್ಕಾಚಾರ ಮಾಡಬೇಕು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಸಾಮರ್ಥ್ಯವನ್ನು ನೋಡಬೇಕಿದೆ. ಪ್ರತಿ ಶನಿವಾರ ಒಬ್ಬ ವ್ಯಕ್ತಿಗೆ ಹಾವು ಕಚ್ಚುತ್ತದೆ. ಮತ್ತು ಅವನು ಒಂದೇ ಆಸ್ಪತ್ರೆಗೆ ದಾಖಲಾಗಿಸಲಾಗುತ್ತದೆ. ಒಂದೇ ದಿನದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಾನೆ. ಇದು ಆಶ್ವರ್ಯಕರ. ಹೀಗಾಗಿ ಹೆಚ್ಚಿನ ತನಿಖೆಗೆ ಮುಖ್ಯ ವೈದ್ಯಾಧಿಕಾರಿ ಮೂವರು ವೈದ್ಯರ ತಂಡ ರಚಿಸಲಾಗಿದೆ’ ಎಂದಿದ್ದಾರೆ.
ಅಲ್ಲದೆ, ಆತ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಹಣಕಾಸು ನೆರವು ಕೇಳಿದ್ದಕ್ಕೆ ಗಿರಿ ಪ್ರತಿಕ್ರಿಯಿಸಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಲಾಗಿದೆ’ ಎಂದಿದ್ದಾರೆ.
ಆರು ಬಾರಿ ಯುವಕನಿಗೆ ಏನೂ ಆಗಲಿಲ್ಲ. ಆದರೆ ಏಳನೇ ಬಾರಿಗೆ ಹಾವು ಕಚ್ಚಿದಾಗ ಯುವಕನ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ. ಯುವಕನಿಗೆ ಮೂರನೇ ಬಾರಿ ಹಾವು ಕಚ್ಚಿದಾಗ ಅವನಿಗೂ ಅದರ ಬಗ್ಗೆ ಕನಸು ಬಿದ್ದ ಬಗ್ಗೆಯೂ ಯುವಕ ಹೇಳಿದ್ದಾನೆ. ಕನಸಲ್ಲಿ, 'ನಾನು ನಿನ್ನನ್ನು 9 ಬಾರಿ ಕಚ್ಚುತ್ತೇನೆ' ಎಂದು ಹೇಳಿತಂತೆ! ಮುಂದುವರಿದು, ಎಂಟನೆಯ ಬಾರಿ ಕಚ್ಚಿದಾಗಲೂ ನೀನು ಸಾಯುವುದಿಲ್ಲ. ಆದರೆ ಒಂಬತ್ತನೇ ಬಾರಿಗೆ ಯಾವುದೇ ಶಕ್ತಿ, ಯಾವುದೇ ತಂತ್ರಿ ಅಥವಾ ವೈದ್ಯರು ನಿನ್ನನ್ನು ಉಳಿಸಲು ಸಾಧ್ಯವಿಲ್ಲ. ನಾನು ನಿನ್ನನ್ನು ನನ್ನೊಂದಿಗೆ ಕರೆದುಕೊಂಡು ಹೋಗುತ್ತೇನೆ. ಅಚ್ಚರಿ ಎಂದರೆ ಪ್ರತಿ ಬಾರಿ ಶನಿವಾರ ಮತ್ತು ಭಾನುವಾರ ದಿನದಂದೇ ಯುವಕ ಹಾವು ಕಚ್ಚಿಸಿಕೊಂಡಿದ್ದಾನೆ. ಈ ಬಾರಿ ಶನಿವಾರ ಬಾಲಾಜಿ ದೇವಸ್ಥಾನಕ್ಕೆ ಹೋಗುವ ಬಗ್ಗೆ ಚರ್ಚೆ ನಡೆದಿದೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ತಿಳಿಸಿದ್ದಾರೆ. ಆದರೆ ಗುರುವಾರ ರಾತ್ರಿಯೇ ಹಾವು 7ನೇ ಬಾರಿಗೆ ಕಚ್ಚಿದೆ. ಈ ಪ್ರಕರಣ ನೋಡಿ ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಅಚ್ಚರಿಗೊಂಡಿದ್ದಾರೆ.
ಆಧಾರ್-ಸಿಮ್ ಕಾರ್ಡ್ ಲಿಂಕ್ ಮಾಡೋಕೆ ಹೋಗಿ 80 ಲಕ್ಷ ಕಳೆದುಕೊಂಡ ಮಹಿಳೆ
ಮಾಲ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಸೌರಾ ಗ್ರಾಮದ ನಿವಾಸಿ 24 ವರ್ಷದ ಯುವಕನಾದ ವಿಕಾಸ್ ದ್ವಿವೇದಿ. 40 ದಿನಗಳಲ್ಲಿ ಬರೋಬ್ಬರಿ 7ನೇ ಬಾರಿ ಹಾವು ಕಚ್ಚಿದೆ. ಯುವಕರು ಮತ್ತು ಅವರ ಕುಟುಂಬ ಸದಸ್ಯರು ಹೇಳುವಂತೆ, ಪ್ರತಿ ಬಾರಿ ಹಾವು ಕಚ್ಚುವ ಮೊದಲು ಭಯವನ್ನು ಅನುಭವಿಸಿದ್ದಾನೆ. ಕೆಲವೊಮ್ಮೆ ಹಾವಿನ ಕೋಪದಿಂದ ತಪ್ಪಿಸಿಕೊಳ್ಳಲು ತನ್ನ ಚಿಕ್ಕಮ್ಮ ಅಥವಾ ಚಿಕ್ಕಪ್ಪನ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿಯೂ ಹಾವು ಕಚ್ಚಿದೆ. ಯುವಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದು ಹೇಗೆ ಸಾಧ್ಯ ಎಂದು ಅಲ್ಲಿನ ವೈದ್ಯರೂ ಆಶ್ಚರ್ಯ ಪಡುತ್ತಿದ್ದಾರೆ. ಇದೀಗ ವಿಕಾಸ್ ದುಬೆ ಕುಟುಂಬ ಸರ್ಕಾರ ಸಹಾಯ ಮಾಡುವಂತೆ ಮನವಿ ಮಾಡಿದೆ. 7ನೇ ಬಾರಿ ಈ ಘಟನೆ ನಡೆಯುತ್ತಿರುವುದರಿಂದ ಮನೆಯವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ಭಯದ ವಾತಾವರಣವಿದೆ. ಈಗಾಗಲೇ ಏಳು ಬಾರಿ ಹಾವು ಕಚ್ಚಿದೆ. ಒಂಭತ್ತನೇ ಬಾರಿ ಯಾರಿಂದಲೂ ಉಳಿಸಲು ಸಾಧ್ಯವಿಲ್ಲ ಎಂದಿರುವ ಹಾವು. ಇಂತಹ ಸನ್ನಿವೇಶದಲ್ಲಿ ಇದು ನಿಜವಾದರೆ? ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ.