5 ತಿಂಗಳಲ್ಲಿ ದೇಶದ ಎಲ್ಲರಿಗೂ ಲಸಿಕೆ : 216 ಕೊಟಿ ಡೋಸ್ ಉತ್ಪಾದನೆ
- 5 ತಿಂಗಳಿನಲ್ಲಿ ದೇಶದಲ್ಲಿ 200 ಕೋಟಿ ಡೋಸ್‌ಗೂ ಅಧಿಕ ಲಸಿಕೆ ಲಭ್ಯ
- ದೇಶದ ಎಲ್ಲರಿಗೂ ಸಾಕಾಗುವಷ್ಟುಲಸಿಕೆ ದೊರೆಯಲಿದೆ
- ಆಗಸ್ಟ್‌ನಿಂದ ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್ ಲಸಿಕೆ ಭಾರತದಲ್ಲಿ ಉತ್ಪಾದನೆ
ನವದೆಹಲಿ (ಮೇ.14): ಮುಂದಿನ 5 ತಿಂಗಳಿನಲ್ಲಿ ದೇಶದಲ್ಲಿ 200 ಕೋಟಿ ಡೋಸ್‌ಗೂ ಅಧಿಕ ಲಸಿಕೆ ಲಭ್ಯವಾಗಲಿದ್ದು, ದೇಶದ ಎಲ್ಲರಿಗೂ ಸಾಕಾಗುವಷ್ಟುಲಸಿಕೆ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಆಗಸ್ಟ್‌ನಿಂದ ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್ ಲಸಿಕೆ ಭಾರತದಲ್ಲಿ ಉತ್ಪಾದನೆ ಆಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ 300 ಕೋಟಿ ಡೋಸ್‌ನಷ್ಟುಲಸಿಕೆ ಉತ್ಪಾದನೆ ಆಗಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶೀಘ್ರ ಇನ್ನೂ 3 ಹೊಸ ಲಸಿಕೆ ಮಾರುಕಟ್ಟೆಗೆ : ಮುಂದಿನವಾರ ಬರಲಿದೆ ಸ್ಪುಟ್ನಿಕ್ ...
ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ 75 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಅದೇ ರೀತಿ 55 ಕೋಟಿ ಡೋಸ್ ಕೋವ್ಯಾಕ್ಸಿನ್ ಕೂಡ ಉತ್ಪಾದನೆ ಆಗಲಿದೆ. ಬಯೋಲಾಜಿಕಲ್ ಇ 30 ಕೋಟಿ ಡೋಸ್, ಝೈಡಸ್ 5 ಕೋಟಿ ಡೋಸ್, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸ್ವದೇಶಿ ನಿರ್ಮಿತ ನೊವಾವ್ಯಾಕ್ಸ್‌ನ 20 ಕೋಟಿ ಡೋಸ್, ಭಾರತ್ ಬಯೋಟೆಕ್ 10 ಕೋಟಿ ನೇಸಲ್ ವ್ಯಾಕ್ಸಿನ್ ಹಾಗೂ ಗೆನ್ನೋವಾದ 6 ಕೋಟಿ ಡೋಸ್ ಹಾಗೂ ಸ್ಪುಟ್ನಿಕ್-5 ಸಂಸ್ಥೆಯ 15.6 ಕೋಟಿ ಡೋಸ್‌ಗಳು ಉತ್ಪಾದನೆ ಆಗಲಿದೆ ಎಂದು ಪೌಲ್ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona