ಮಣಿಪುರ ವಿಮಾನ ನಿಲ್ಧಾಣದಲ್ಲಿ ಹೈಅಲರ್ಟ್ ಘೋಷಣೆ, 4 ಗಂಟೆ ಎಲ್ಲಾ ಫ್ಲೈಟ್ ರದ್ದು!
ಮಣಿಪುರದ ಇಂಫಾಲ ವಿಮಾನ ನಿಲ್ದಾಣ ಬಳಿ ಅಜ್ಞಾತ ಹಾರುವ ವಸ್ತುವೊಂದು ಪತ್ತೆಯಾದ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸತತ 4 ಗಂಟೆ ಎಲ್ಲಾ ವಿಮಾನ ಹಾರಾಟ ರದ್ದು ಮಾಡಲಾಗಿತ್ತು. ಇದೀಗ ವಿಮಾನ ನಿಲ್ದಾಣ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಇಂಫಾಲ್(ನ.19) ಜನಾಂಗಿಯ ಸಂಘರ್ಷದಲ್ಲಿ ಬೆಂದು ಹೋದ ಮಣಿಪುರ ಇನ್ನು ಸಹಜ ಸ್ಥಿತಿಗೆ ಮರಳಿಲ್ಲ. ಆಕ್ರೋಶ, ದಾಳಿ ನಡೆಯುತ್ತಲೇ ಇದೆ. ಈ ಬೆಳವಣಿಗೆ ನಡುವೆ ಇಂದು ಮಣಿಪುರದ ಇಂಫಾಲದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ವಿಮಾನ ನಿಲ್ದಾಣ ಬಳಿ ಹಾರುವ ವಸ್ತುವೊಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಭದ್ರತಾ ಸಿಬ್ಬಂದಿಗಳು ಸಂಪೂರ್ಣ ವಿಮಾನ ನಿಲ್ದಾಣ ಸುತ್ತುವರೆದು ಹೈ ಅಲರ್ಟ್ ಘೋಷಣೆ ಮಾಡಿತ್ತು. 4 ಗಂಟೆ ಇಂಫಾಲ್ ವಿಮಾನ ನಿಲ್ದಾಣ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಎಲ್ಲಾ ವಿಮಾನ ಹಾರಟ ಬಂದ್ ಮಾಡಲಾಗಿತ್ತು. ಇದರಿದಂ ಸುಮಾರು 500ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಯಿತು.
ಇಂಫಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಭಾರಿ ಭದ್ರತೆ ನಿಯೋಜಿಸಿ, ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 2.30ರ ವೇಳೆಗೆ ವಿಮಾನ ನಿಲ್ದಾಣದ ಆಕಾಶದಲ್ಲಿ ಅಜ್ಞಾತ ಹಾರುವ ವಸ್ತುವೊಂದು ಪತ್ತೆಯಾಗಿದೆ. CISF ಭದ್ರತಾ ಸಿಬ್ಬಂದಿ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್(ATC) ಸಿಬ್ಬಂದಿ ಹಾರುವ ವಸ್ತು ಪತ್ತೆ ಹಚ್ಚಿ ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿ ರಾಂಚಿ ಭೇಟಿಯಲ್ಲಿ ಭದ್ರತಾ ಲೋಪ,ವಾಹನಕ್ಕೆ ಅಡ್ಡ ಬಂದ ಮಹಿಳೆ ವಶಕ್ಕೆ !
ಇಂಫಾಲ್ ವಿಮಾನ ನಿಲ್ದಾಣದಿಂದ ಅಗರ್ತಲಾ, ಗುವ್ಹಾಟಿ, ಕೋಲ್ಕತಾ ಸೇರಿದಂತೆ ಹಲವು ನಗರಗಳಿಗೆ ಹಾರಲು ಸಜ್ಜಾಗಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಇನ್ನು ಇಂಫಾಲದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸತತ 4 ಗಂಟೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆಕಾಶದಲ್ಲಿ ಪತ್ತೆಯಾದ ಹಾರುವ ವಸ್ತು ಏನು? ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆರಂಭದಲ್ಲಿ ಡ್ರೋನ್ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದೇ ಸ್ಪಷ್ಟತೆ ಲಭ್ಯವಾಗಿಲ್ಲ. ವಾಯು ನಿಯಂತ್ರಿದ ಸ್ಥಳದಲ್ಲಿ ಪತ್ತೆಯಾದ ಈ ವಸ್ತು ತಕ್ಷಣವೇ ಮಾಯವಾಗಿದೆ. ತಕ್ಷಣವೇ ಭಾರತೀಯ ವಾಯು ಸೇನೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ರಾಮ ಮಂದಿರ ಮೇಲೆ ಪಾಕ್ ಭಯೋತ್ಪಾದಕರ ದಾಳಿ ಸಂಚು ಬಹಿರಂಗ, ಆಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ!
ವಾಯುಸೇನೆ ಅನುಮತಿ ಬಳಿಕ ಸಂಜೆ 6.50ರಿಂದ ವಿಮಾನ ಹಾರಾಟ ಪುನರ್ ಆರಂಭಿಸಲಾಗಿದೆ. ಭಾರತೀಯ ನಾಗರೀಕ ವಿಮಾಯಾನ ಸಚಿವಾಲಯ ಹಾಗೂ ಭಾರತೀಯ ವಾಯುಸೇನೆ ಜಂಟಿಯಾಗಿ ತನಿಖೆ ಆರಂಭಿಸಿದೆ.