ಜುಲೈ 3 ವಿಶ್ವದಲ್ಲಿಯೆ ಅತ್ಯಂತ ಬಿಸಿಯಾದ ದಿನ ಎಂದು ಅಮೆರಿಕ ಸಂಸ್ಥೆ ಹೇಳಿದೆ. ಜಾಗತಿಕ ತಾಪಮಾನ ಏರಿಕೆಯಾಗಿರುವುದು, ಎಲ್ ನಿನೋ ಮತ್ತು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಏರಿಕೆಯಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ನವದೆಹಲಿ (ಜು.5): ಜುಲೈ 3 ವಿಶ್ವದಲ್ಲೇ ಅತ್ಯಂತ ಬಿಸಿಯಾದ ದಿನವಾಗಿದೆ. ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಸೆಂಟರ್ಸ್ ಫಾರ್ ಎನ್ವಿರಾನ್ಮೆಂಟಲ್ ಪ್ರಿಡಿಕ್ಷನ್ ಪ್ರಕಾರ, ಜುಲೈ 3 ರಂದು, ಸರಾಸರಿ ಜಾಗತಿಕ ತಾಪಮಾನವು 17 °C ಅನ್ನು ಮೀರಿದೆ, ಇದು ಆಗಸ್ಟ್ 2016 ರಲ್ಲಿ ದಾಖಲಾದ ಅತ್ಯಂತ ಬಿಸಿಯಾದ ದಿನಕ್ಕಿಂತ (16.92 °C) ಹೆಚ್ಚಾಗಿದೆ. ವಿಜ್ಞಾನಿಗಳು ಇದನ್ನು ಎಲ್-ನಿನೊ ಮತ್ತು ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಆಕ್ಸೈಡ್ (CO2) ಕಾರಣವೆಂದು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ ತಾಪಮಾನ ಹೆಚ್ಚಾಗಲು ಮಾನವ ಚಟುವಟಿಕೆಗಳೂ ಪ್ರಮುಖ ಕಾರಣ. ಪಳೆಯುಳಿಕೆ ಇಂಧನಗಳ ದಹನವು ಪ್ರತಿ ವರ್ಷ 40 ಶತಕೋಟಿ ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ, ಜೂನ್ ವಿಶ್ವದಲ್ಲೇ ಅತ್ಯಂತ ಬಿಸಿಯಾದ ಜೂನ್ ತಿಂಗಳಾಗಿದೆ.
ಶೀಘ್ರದಲ್ಲಿ ಈ ದಾಖಲೆ ಕೂಡ ಮುರಿಯಲಿದೆ: ಗ್ರಂಥಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಚೇಂಜ್ ಅಂಡ್ ಎನ್ವಿರಾನ್ಮೆಂಟ್‌ನ ವಿಜ್ಞಾನಿ ಫ್ರೆಡ್ರಿಕ್ ಒಟ್ಟೊ ಪ್ರಕಾರ, ನಾವು ಅಂತಹ ಯಾವುದೇ ಮೈಲಿಗಲ್ಲನ್ನು ದಾಟಿಲ್ಲ, ಅದನ್ನು ಆಚರಣೆ ಮಾಡಬೇಕಿದೆ. ಇದು ಪರಿಸರ ವ್ಯವಸ್ಥೆಗೆ ಮರಣದಂಡನೆಯಂತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಶೀಘ್ರದಲ್ಲೇ ಈ ದಾಖಲೆಯೂ ಮುರಿಯಲಿದೆ ಎಂದು ಹೇಳಿದರು. ಈ ವರ್ಷದ ಆರಂಭದಿಂದಲೂ, ಸಂಶೋಧಕರು ಭೂಮಿ ಮತ್ತು ಸಾಗರದಲ್ಲಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಪೇನ್ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ವಸಂತ ಋತುವಿನಲ್ಲಿ ದಾಖಲೆಯ ಶಾಖದ ನಂತರ, ಉತ್ತರ ಸಮುದ್ರದಂತಹ ಅನೇಕ ಸ್ಥಳಗಳಲ್ಲಿ ಉಷ್ಣ ಅಲೆಗಳು ದಾಖಲಾಗಿದೆ. ಇಲ್ಲಿ ಸಾಮಾನ್ಯವಾಗಿ ಬಿಸಿಯಾಗಿರುವುದಿಲ್ಲ. ಈ ವಾರ, ಚೀನಾ ಕೂಡ ಉಷ್ಣ ಅಲೆಯನ್ನು ಎದುರಿಸಿತು. ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ನ ದಾಖಲೆಯನ್ನು ತಲುಪಿದೆ. ದಕ್ಷಿಣ ಅಮೆರಿಕಾದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗಿದೆ.
1979ರಿಂದ ಜಾಗತಿಕ ತಾಪಮಾನದ ದಾಖಲೆ: ಮಂಜುಗಡ್ಡೆಯಿಂದ ಸುತ್ತುವರೆದಿರುವ ಅಂಟಾರ್ಕ್ಟಿಕಾದಂತಹ ತಂಪಾದ ಖಂಡದಲ್ಲಿಯೂ ಸಹ, ಚಳಿಗಾಲದಲ್ಲಿ ತಾಪಮಾನವು 8.7 ° C ತಲುಪುತ್ತದೆ. ಉತ್ತರ ಆಫ್ರಿಕಾದಲ್ಲಿ ತಾಪಮಾನವು 50 ಡಿಗ್ರಿ ತಲುಪಿದೆ. ಉಪಗ್ರಹದ ಮೂಲಕ ಜಾಗತಿಕ ತಾಪಮಾನವನ್ನು ಮೇಲ್ವಿಚಾರಣೆ ಮಾಡುವ ಪ್ರಕ್ರಿಯೆಯು 1979 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಜುಲೈ 3 ರಂದು ಮಾತ್ರ ಅತ್ಯಂತ ಬಿಸಿಯಾದ ದಿನ ಎಂದು ಹೇಳಲಾಗಿದೆ.
ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ
ವಿಶ್ವ ಹವಾಮಾನ ಸಂಸ್ಥೆ (WMO), ಯುಎನ್‌ನಲ್ಲಿ ಹವಾಮಾನದ ಕುರಿತು ಕೆಲಸ ಮಾಡುವ ಸಂಸ್ಥೆಯು ಎಲ್ ನಿನೋ ಮರಳಿದೆ ಎಂದು ಮಂಗಳವಾರ ಹೇಳಿದೆ. ಕಳೆದ ಹಲವು ವಾರಗಳಿಂದ ಇದು ಊಹಾಪೋಹವಾಗಿದ್ದು, ಇದನ್ನು ಹವಾಮಾನ ಇಲಾಖೆ ದೃಢಪಡಿಸಿದೆ. WMO ಪ್ರಕಾರ, ಹಲವು ವರ್ಷಗಳಲ್ಲಿ ಮೊದಲ ಬಾರಿಗೆ, ಎಲ್ ನಿನೊ ಪರಿಣಾಮವು ಪೆಸಿಫಿಕ್ ಮಹಾಸಾಗರದಲ್ಲಿ ನಿರಂತರವಾಗಿದೆ.
ಏನಿದು ಎಲ್ ನಿನೋ: ಎಲ್ ನಿನೋ ಎಂಬುದು ಕೆಲವು ವರ್ಷಗಳಿಗೊಮ್ಮೆ ಸಂಭವಿಸುವ ಹವಾಮಾನ ಪ್ರವೃತ್ತಿಯಾಗಿದೆ. ಇದರಲ್ಲಿ, ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲಿನ ನೀರಿನ ಪದರವು ಬೆಚ್ಚಗಾಗುತ್ತದೆ. ಫೆಬ್ರವರಿಯಲ್ಲಿ 0.44 ಡಿಗ್ರಿ ಸೆಲ್ಸಿಯಸ್‌ನಿಂದ ಜೂನ್ ಮಧ್ಯದ ವೇಳೆಗೆ 0.9 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ ಎಂದು WMO ವರದಿ ಮಾಡಿದೆ. ಬ್ರಿಟಾನಿಕಾ ಪ್ರಕಾರ, ಎಲ್ ನಿನೊದ ಮೊದಲ ಘಟನೆಯು 1525 ರಲ್ಲಿ ಸಂಭವಿಸಿತು.
ದೇಶದ ಅರ್ಧ ಬರಗಾಲಕ್ಕೆ ಉತ್ತರ ಅಟ್ಲಾಂಟಿಕ್ ಕಾರಣ!
ಜೊತೆಗೆ, ಸುಮಾರು 1600 ಎಡಿಯಲ್ಲಿ, ಪೆರುವಿನ ಮೀನುಗಾರರು ಕರಾವಳಿಯ ನೀರು ಅಸಾಮಾನ್ಯವಾಗಿ ಬೆಚ್ಚಗಿರುತ್ತದೆ ಎಂದು ಹೇಳಿದ್ದರು. ಇದು ಎಲ್-ನಿನೊದಿಂದ ಸಂಭವಿಸಿತ್ತು ಎಂದು ನಂತರದ ಸಂಶೋಧಕರು ಹೇಳಿದ್ದಾರೆ. ಕಳೆದ 65 ವರ್ಷಗಳಲ್ಲಿ ಪೆಸಿಪಿಕ್ ಸಮುದ್ರದಲ್ಲಿ 14 ಬಾರಿ ಎಲ್ ನಿನೋ ದಾಖಲಾಗಿದೆ. ಇದರಲ್ಲಿ 9 ಬಾರಿ ಭಾರತದಲ್ಲಿ ದೊಡ್ಡ ಮಟ್ಟದ ಬರಗಾಲ ವ್ಯಾಪಿಸಿತ್ತು. ಇನ್ನೂ 5 ಬಾರಿ ಬರಗಾಲವಿದ್ದರೂ ಅದು ಕಡಿಮೆ ಪ್ರಮಾಣದಲ್ಲಿತ್ತು.
