Asianet Suvarna News Asianet Suvarna News

ದೇಶದ ಅರ್ಧ ಬರಗಾಲಕ್ಕೆ ಉತ್ತರ ಅಟ್ಲಾಂಟಿಕ್‌ ಕಾರಣ!

ದೇಶದ ಅರ್ಧ ಬರಗಳಿಗೆ ಉ.ಅಟ್ಲಾಂಟಿಕ್‌ ಕಾರಣ!|  ಎಲ್‌ ನಿನೋ ಇಲ್ಲದಿದ್ದರೂ 10 ಬರ| ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳ ಅಧ್ಯಯನ

IISc Study Reveals Droughts in India influenced by North Atlantic air currents pod
Author
Bangalore, First Published Dec 12, 2020, 7:49 AM IST

ಬೆಂಗಳೂರು(ಡಿ.12): ಕಳೆದ 1 ಶತಮಾನದಲ್ಲಿ ಭಾರತ ಕಂಡ ಅರ್ಧದಷ್ಟುಬರಗಾಲಗಳಿಗೆ ಉತ್ತರ ಅಟ್ಲಾಂಟಿಕ್‌ ಪ್ರದೇಶದಲ್ಲಿನ ವಾತಾವರಣದ ಏರುಪೇರು ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ವಾತಾವರಣ-ಸಮುದ್ರ ವಿಜ್ಞಾನ ಕೇಂದ್ರ (ಸಿಎಒಎಸ್‌) ವಿಜ್ಞಾನಿಗಳ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ನೀಲಗಿರಿ, ಅಕೇಶಿಯಾ ತೆಗೆದರೆ ಸಾಕೇ? ಬಯಲುಸೀಮೆಯ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

ಮುಂಗಾರಿನ ಮೇಲೆ 130 ಕೋಟಿ ಜನರು ಅವಲಂಬಿತರಾಗಿದ್ದಾರೆ. ಇದು ವಿಫಲವಾದರೆ ದೇಶದ ಜನ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದಕ್ಕೆ ಬಹುವಾಗಿ ಎಲ್‌ ನಿನೋ ಪ್ರಭಾವವೇ ಕಾರಣ ಆಗಿರುತ್ತದೆ.

ಆದರೆ ಕಳೆದ ಶತಮಾನದ 23 ಬರಗಾಲಗಳಲ್ಲಿ 10 ಬರಗಾಲಗಳು ಎನ್‌ ನಿನೋ ಪ್ರಭಾವದಿಂದ ಉಂಟಾಗಿಲ್ಲ ಎಂದು ಅಧ್ಯಯನ ನಡೆಸಿದಾಗ ಗೊತ್ತಾಯಿತು. ಹಾಗಿದ್ದರೆ ಎಲ್‌ ನಿನೋ ಅಲ್ಲದಿದ್ದರೆ ಇನ್ನಾವ ಕಾರಣದಿಂದ 10 ಬರಗಾಲಗಳು ಉಂಟಾದವು ಎಂದು ಕಾರಣ ಹುಡುಕ ಹೊರಟಾಗ ತಿಳಿದುಬಂದಿದ್ದೇ ‘ಉತ್ತರ ಅಟ್ಲಾಂಟಿಕ್‌’ ವಾತಾವರಣದಲ್ಲಿನ ಏರುಪೇರು. ಇದರಿಂದಲೇ ಈ 10 ಅವಧಿಯಲ್ಲಿ ಭಾರತದಲ್ಲಿ ಮುಂಗಾರು ವಿಫಲವಾಗಲು ಕಾರಣವಾಯಿತು ಎಂದು ತಿಳಿದುಬಂತು ಎಂದು ಸಂಶೋಧನೆ ಹೇಳಿದೆ. ಈ ಸಂಶೋಧನೆಯನ್ನು ವಿಜ್ಞಾನ ನಿಯತಕಾಲಿಕೆ ‘ಸೈನ್ಸ್‌’ನಲ್ಲಿ ಪ್ರಕಟಿಸಲಾಗಿದೆ.

ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

2 ರೀತಿಯ ಬರ:

ಸಾಮಾನ್ಯವಾಗಿ ಎಲ್‌ನಿನೋ ಪ್ರಭಾವ ಉಂಟಾದಾಗ ಜೂನ್‌ನಲ್ಲೇ ಮಳೆ ಕಡಿಮೆ ಆಗುತ್ತದೆ. ಆಗಸ್ಟ್‌ ಮಧ್ಯಭಾಗದಲ್ಲಿ ಇಡೀ ದೇಶಾದ್ಯಂತ ಮಳೆಯ ಕೊರತೆ ಆವರಿಸುತ್ತದೆ. ಮುಂಗಾರು ಮುಗಿದರೂ ಬರಗಾಲ ಅಂತ್ಯಗೊಳ್ಳುವುದೇ ಇಲ್ಲ.

ಆದರೆ ಎಲ್‌ ನಿನೋ ಪ್ರಭಾವ ಇಲ್ಲದೇ ಇದ್ದಾಗ, ಆಗಸ್ಟ್‌ ಮಧ್ಯಭಾಗದಲ್ಲಿ ಮಳೆ ಸುರಿಯಲು ಆರಂಭಿಸಿ ಬರ ನೀಗಿಸುವ ಸುಳಿವು ನೀಡುತ್ತದೆ. ಆದರೆ ಆಗಸ್ಟ್‌ 3ನೇ ವಾರ ಏಕಾಏಕಿ ಮಳೆ ನಿಲ್ಲುತ್ತದೆ. ಇದೇ ಸ್ಥಿತಿ ಮುಂಗಾರು ಮುಗಿವವರೆಗೆ ಇರುತ್ತದೆ.

ಬರ, ನೆರೆ : ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ

ಹಾಗಿದ್ದಾಗ ಎಲ್‌ ನಿನೋ ಇಲ್ಲದೇ ಇದ್ದಾಗ ಈ ರೀತಿ ಏಕೆ ಆಗುತ್ತದೆ ಎಂಬ ಸಂಶೋಧನೆ ನಡೆಸಿದಾಗ, ಉತ್ತರ ಅಟ್ಲಾಂಟಿಕ್‌ ಪ್ರದೇಶದಲ್ಲಿನ ವಾತಾವರಣದ ಏರುಪೇರು ಬರಗಾಲಕ್ಕೆ ನಾಂದಿ ಹಾಡುತ್ತಿದೆ ಎಂದು ತಿಳಿದುಬಂತು ಎಂದು ಸಂಶೋಧಕರು ವಿವರಿಸಿದ್ದಾರೆ.

Follow Us:
Download App:
  • android
  • ios