Tamil Nadu: ಸ್ಟಾಲಿನ್ ಉದ್ಘಾಟಿಸಿದ ಒಂದೇ ಸ್ನಾನಗೃಹದಲ್ಲಿ 2 ಕಮೋಡ್!
ಸೋಮವಾರ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಇತರ ಯೋಜನೆಗಳೊಂದಿಗೆ ಈ ಕಟ್ಟಡವನ್ನು ಉದ್ಘಾಟಿಸಿದರು. ಈಗ ಒಂದೇ ಸ್ನಾನಗೃಹದಲ್ಲಿ 2 ಕಮೋಡ್‌ಗಳನ್ನು ಹೊಂದಿರುವ ಯೋಜನಾ ಕಚೇರಿ ಕಟ್ಟಡ ನಿರ್ಮಾಣಕ್ಕೆ 1.80 ಕೋಟಿ ರೂ. ಬಜೆಟ್ ಹಂಚಿಕೆಯಾಗಿತ್ತು ಎಂದು ತಿಳಿದುಬಂದಿದೆ.
ತಮಿಳುನಾಡಿನ (Tamil Nadu) ಶ್ರೀಪೆರಂಬದೂರಿನ (Sriperumbudur) ಕಚೇರಿಯೊಂದರಲ್ಲಿ (Office) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K.Stalin) ಉದ್ಘಾಟಿಸಿದ ಕಚೇರಿಯ ಒಂದೇ ಬಾತ್‌ರೂಮಿನಲ್ಲಿ (Bathroom) 2 ಕಮೋಡ್‌ಗಳಿರುವ (Commode) ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 1.80 ಕೋಟಿ ರೂ. ವೆಚ್ಚದಲ್ಲಿ ಶ್ರೀಪೆರಂಬದೂರಿನಲ್ಲಿ ತಮಿಳುನಾಡು ರಾಜ್ಯ ಕೈಗಾರಿಕಾ ಉತ್ತೇಜನ ನಿಗಮದ ನೂತನ ಕಟ್ಟಡ ನಿರ್ಮಿಸಲಾಗಿತ್ತು. ಈ ಕಚೇರಿಯನ್ನು ಸೋಮವಾರ ಸ್ಟಾಲಿನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ಆದರೆ ಒಂದೇ ಬಾತ್‌ರೂಮಿನಲ್ಲಿ 2 ಕಮೋಡ್‌ಗಳಿದ್ದ ಫೋಟೋ ವೈರಲ್ ಆಗಿದ್ದು, ಕಚೇರಿ ನಿರ್ಮಾಣದ ಕಾಮಗಾರಿ ಬಗ್ಗೆ ನೆಟ್ಟಿಗರು ಚಟಾಕಿ ಹಾರಿಸಿದ್ದಾರೆ.
1 ಸ್ನಾನಗೃಹದಲ್ಲಿ 2 ಕಮೋಡ್‌ಗಳು
ಹೌದು.. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸೋಮವಾರ ಶ್ರೀಪೆರಂಬದೂರಿನಲ್ಲಿ ಕಚೇರಿ ಕಟ್ಟಡವನ್ನು ಉದ್ಘಾಟಿಸಿದರು. ಈ ಕಟ್ಟಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಕೆ ಇಷ್ಟೊಂದು ವೈರಲ್ ಆಗುತ್ತಿದೆ ಅಂದರೆ, ಈ ಕಟ್ಟಡದ ಒಂದೇ ಸ್ನಾನಗೃಹದಲ್ಲಿ ಎರಡು ಕಮೋಡ್‌ಗಳನ್ನು ನಿರ್ಮಿಸಲಾಗಿದೆ. ಇದೀಗ ಒಂದೇ ಬಾತ್ ರೂಂನಲ್ಲಿ ಎರಡು ಕಮೋಡ್‌ಗಳನ್ನು ನಿರ್ಮಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇದನ್ನು ಓದಿ: ಯುಪಿ ನವ ದಂಪತಿಗಳಿಗೆ ಕಮೋಡ್ ಉಡುಗೊರೆ!
ಘಟನೆಯ ವಿವರ..
ಶ್ರೀಪೆರಂಬದೂರಿನಲ್ಲಿ ತಮಿಳುನಾಡು ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ (State Industries Promotion Corporation of Tamil Nadu) (SIPCOT) 1.80 ಕೋಟಿ ರೂಪಾಯಿ ಬಜೆಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡವು ಒಂದೇ ಸ್ನಾನಗೃಹದೊಳಗೆ ನಿರ್ಮಿಸಲಾದ ಎರಡು ಕಮೋಡ್‌ಗಳ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಮಾರ್ಪಟ್ಟಿದೆ. ಸೋಮವಾರ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಇತರ ಯೋಜನೆಗಳೊಂದಿಗೆ ಈ ಕಟ್ಟಡವನ್ನು ಉದ್ಘಾಟಿಸಿದರು. ಈಗ ಒಂದೇ ಸ್ನಾನಗೃಹದಲ್ಲಿ 2 ಕಮೋಡ್‌ಗಳನ್ನು ಹೊಂದಿರುವ ಯೋಜನಾ ಕಚೇರಿ ಕಟ್ಟಡ ನಿರ್ಮಾಣಕ್ಕೆ 1.80 ಕೋಟಿ ರೂ. ಬಜೆಟ್ ಹಂಚಿಕೆಯಾಗಿತ್ತು ಎಂದು ತಿಳಿದುಬಂದಿದೆ.
ಈ ದೃಶ್ಯಗಳಲ್ಲಿ ಅಪೂರ್ಣ ಛಾವಣಿಗಳು, ಕಳಪೆ ಸಿಮೆಂಟ್ ಕಾರ್ಯ ಮತ್ತು ರಾಶಿ ಹಾಕಲಾದ ಪೀಠೋಪಕರಣಗಳನ್ನು ತೋರಿಸಲಾಗಿದೆ. ಇದರಿಂದ ಗಡುವು ಮುಗಿದು ಕಾಮಗಾರಿ ಮುಗಿದಿದೆ ಎಂದು ತೋರಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಸಹ ಮೂಡಿದೆ.
ಇದನ್ನೂ ಓದಿ: ಕಚೇರಿ ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟ ಬಾಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೀಕ್!
ಕೆಲಸ ಪೂರ್ಣಗೊಳ್ಳದೆ ಉದ್ಘಾಟನೆ..!
ಇನ್ನು, ಒಂದೇ ಬಾತ್‌ರೂಂನಲ್ಲಿ 2 ಕಮೋಡ್‌ಗಳಿರುವ ಫೋಟೋ ವೈರಲ್ ಆಗಿರುವ ಬಗ್ಗೆ ಉಸ್ತುವಾರಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಮಗಾರಿ ಇನ್ನೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶೌಚಾಲಯ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಎರಡೂ ಕಮೋಡ್‌ಗಳ ಮಧ್ಯದಲ್ಲಿ ಇನ್ನೂ ಗೋಡೆ ಅಳವಡಿಸಬೇಕಿದ್ದು, ಅದಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.