Asianet Suvarna News Asianet Suvarna News

'ಅಲೋಪಥಿ ಸರಿ ಇಲ್ಲ ಎಂದ  ರಾಮ್‌ದೇವ್ ಮೇಲೆ ಕೇಸ್ ಹಾಕಿ'

* ಬಾಬಾ ರಾಮ್ ದೇವ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹ
* ರಾಮ್ ದೇವ್ ಹೇಳಿಕೆಗಳ ಮುಖೇನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ
* ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು

IMA asks Centre to take action against Ramdev for remarks against allopathy mah
Author
Bengaluru, First Published May 22, 2021, 10:15 PM IST

ನವದೆಹಲಿ (ಮೇ 22) ಅಲೋಪತಿ ವೈದ್ಯ ಪದ್ಧತಿಯ ಬಗ್ಗೆ ತಿಳಿವಳಿಕೆ ಇಲ್ಲದೇ ಹೇಳಿಕೆ ನೀಡುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ  ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ)  ಒತ್ತಾಯಿಸಿದೆ.

ಬಾಬಾ ರಾಮ್ ದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು, ಬಾಬಾ ರಾಮ್ ದೇವ್ ಅಲೋಪತಿ ಬಗ್ಗೆ ತಿಳಿವಳಿಕೆ ಇಲ್ಲದೇ ನೀಡುತ್ತಿರುವ ಹೇಳಿಕೆಗಳು ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಸಂಘ ಹೇಳಿದೆ.

ಸಖತ್ ಸ್ಟೆಪ್ ಹಾಕಿದ ಬಾಬಾ ರಾಮ್ ದೇವ್

ಬಾಬಾ ರಾಮ್ ದೇವ್  ಅಲೋಪತಿ ಪದ್ಧತಿಯ ಕುರಿತಾಗಿ ಮಾತನಾಡಿರುವ ವಿಡಿಯೋ ಒಂದನ್ನು ಉಲ್ಲೇಖಿಸಿ ರಾಮ್ ದೇವ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದೆ.

ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ, ಡಿಸಿಜೈ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ ಎಂಬ ಅರ್ಥದಲ್ಲಿ  ಯೋಗಗುರು ಮಾತನಾಡಿದ್ದರು.

ಸ್ವತಃ ವೈದ್ಯರಾಗಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್  ಹಾಗಾದರೆ  ಆಧುನಿಕ ವೈದ್ಯಕೀಯ ವ್ಯವಸ್ಥೆ ಬೇಡ ಎನ್ನಲಿ ಅಥವಾ ಬಾಬಾ ರಾಮ್ ದೇವ್ ಅವರ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ಕಟುವಾಗಿಯೇ ಕೇಳಿಕೊಂಡಿದೆ.

ರಾಮ್ ದೇವ್ ಮಾಡುತ್ತಿರುವ ಆರೋಪಗಳಿಗೆ ಆಧಾರ  ಇಲ್ಲ. ವಿಡಿಯೋ ಮೂಲಕ ಈ ರೀತಿ ಜನರನ್ನು ದಿಕ್ಕು ತಪ್ಪಿಸುವುದು ಸರಿ ಅಲ್ಲ. ಕೇಂದ್ರ ಸರ್ಕಾರ ಇಂಥ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು  ಎಂದು ಕೇಳಿಕೊಂಡಿದೆ. 

Follow Us:
Download App:
  • android
  • ios