ಲಖನೌ (ಅ.30): ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಸೋಲಿಸಲು ಮುಂಬರುವ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲು ತಾವು ಸಿದ್ಧ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಘೋಷಿಸಿದ್ದಾರೆ. 

ನ.9ರಂದು ರಾಜ್ಯದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಅದರ ಬೆನ್ನಲ್ಲೇ ಮಾಯಾವತಿ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯಸಭೆ ಪ್ರವೇಶಕ್ಕೆ ಬಿಎಸ್‌ಪಿಗೆ ಅಗತ್ಯವಿರುವಷ್ಟುಶಾಸಕರ ಸಂಖ್ಯಾಬಲವಿಲ್ಲ. ಆದಾಗ್ಯೂ, ಒಂದು ಸ್ಥಾನದ ಮೇಲೆ ಮಾಯಾವತಿ ಕಣ್ಣಿಟ್ಟಿದ್ದಾರೆ.

ಶಿರಾ ಅಖಾಡಕ್ಕೆ ರಾಜಾಹುಲಿ ಎಂಟ್ರಿ; ರಾರಾದಲ್ಲಿ ಕಮಲ ಪಾಳಯ ಸೇರಿದ ಕೈ ನಾಯಕ ...

 ಈ ನಡುವೆ ಪಕ್ಷದ ರಾಜ್ಯಸಭಾ ಅಭ್ಯರ್ಥಿ ವಿರುದ್ಧ ಬಂಡೆದಿದ್ದಿರುವ ಪಕ್ಷದ 9 ಶಾಸಕರನ್ನು ಮಾಯಾವತಿ ಅಮಾನತು ಮಾಡಿದ್ದಾರೆ. ಇವರೆಲ್ಲಾ ಎಸ್‌ಪಿ ಪರವಾಗಿ ಮತ ಚಲಾಯಿಸುವ ಭೀತಿ ಮಾಯಾರನ್ನು ಕಾಡುತ್ತಿದೆ.