ಬೆಂಗಳೂರು (ಅ. 30): ಶಿರಾ ಶಿಕಾರಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ರಾಜಾಹುಲಿ ಅಖಾಡಕ್ಕಿಳಿದಿದ್ದಾರೆ. ಇಂದು ಇಡೀ ದಿನ ಶಿರಾದಲ್ಲಿ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ವಿಜಯೇಂದ್ರ ಅಲ್ಲಿಯೇ ವಾಸ್ತವ್ಯ ಹೂಡಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. 

ರಾರಾ ಕ್ಷೇತ್ರ ರಂಗೇರುತ್ತಲೇ ಇದೆ. ಕಾಂಗ್ರೆಸ್ ಮುಖಂಡರಾಗಿದ್ದ ವೆಂಕಟರಾಮ್ ರೆಡ್ಡಿ, ಚಿತ್ರನಟ ವಿ ಬಾಲರಾಜ್ ಇಂದು ಬಿಜೆಪಿ ಸೇರಿದ್ದಾರೆ. ಈ ವೇಳೆ ಡಿಂಗ್ರಿ ನಾಗರಾಜ್ ಸೇರಿದಂತೆ ಕೆಲ ತಾರೆಯರು ಉಪಸ್ಥಿತರಿದ್ದರು. ಇನ್ನು ಮುನಿರತ್ನ ಪರ ದರ್ಶನ್ ಪ್ರಚಾರ ಮುಂದುವರೆದಿದೆ.