ಗೋವಾದ ಮೊರ್ಜಿಮ್‌ನಲ್ಲಿರುವ ತಮ್ಮ ವಿಲ್ಲಾವನ್ನು ಅಧಿಕೃತವಾಗಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಮ್‌ ಸ್ಟೇ ಆಗಿ ಪರಿವರ್ತಿಸಿದ್ದಕ್ಕೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ನೋಟಿಸ್‌ ಕಳುಹಿಸಿದೆ.

ಪಣಜಿ: ಗೋವಾದ ಮೊರ್ಜಿಮ್‌ನಲ್ಲಿರುವ ತಮ್ಮ ವಿಲ್ಲಾವನ್ನು ಅಧಿಕೃತವಾಗಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಮ್‌ ಸ್ಟೇ ಆಗಿ ಪರಿವರ್ತಿಸಿದ್ದಕ್ಕೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ನೋಟಿಸ್‌ ಕಳುಹಿಸಿದೆ. ವಿಚಾರಣೆಗೆ ಡಿ.8ರಂದು ಮುಂಜಾನೆ 11 ಗಂಟೆಗೆ ಹಾಜರಾಗುವಂತೆ ತಿಳಿಸಿದೆ. ಗೋವಾ ಪ್ರವಾಸೋದ್ಯಮ ನೋಂದಣಿ ಕಾಯ್ದೆಯ (Goa Tourism Registration Act) 1982ರ ಪ್ರಕಾರ ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಮ್‌ಸ್ಟೇಗಳನ್ನು (Homestay) ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಯುವರಾಜ್‌ಗೆ ಸೇರಿದ ‘ಕಾಸಾ ಸಿಂಗ್‌’ ಎನ್ನುವ ವಿಲ್ಲಾ ಅನ್ನು ಅನುಮತಿ ಪಡೆಯದೇ ಅಕ್ರಮವಾಗಿ ಹೋಮ್‌ಸ್ಟೇ ಆಗಿ ಪರಿವರ್ತಿಸಲಾಗಿದೆ. ಆನ್‌ಲೈನ್‌ ವೇದಿಕೆಗಳಲ್ಲಿ ಅದು ಲಭ್ಯವಿದೆ. ಇದಕ್ಕಾಗಿ ಅವರಿಗೆ 1 ಲಕ್ಷ ರು. ದಂಡ ವಿಧಿಸಬಹುದಾಗಿದೆ’ ಎಂದು ಇಲಾಖೆ ಯುವರಾಜ್‌ಗೆ ನೋಟಿಸ್‌ ಜಾರಿ ಮಾಡಿದೆ.