ಐಐಟಿ ರೋಪಾರ್‌ನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಪ್ರೊಫೆಸರ್‌ಗೆ ಸನ್‌ಗ್ಲಾಸ್‌ ಹಾಕಿಸಿರುವ ವಿಡಿಯೋ ವೈರಲ್‌ ಆಗಿದೆ. ಈ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿ ಮತ್ತು ಪ್ರೊಫೆಸರ್‌ ನಡುವಿನ ಆರೋಗ್ಯಕರ ಬಾಂಧವ್ಯವನ್ನು ಈ ವಿಡಿಯೋ ತೋರಿಸುತ್ತದೆ.

ಐಟಿ ರೋಪಾರ್‌ನ ಘಟಿಕೋತ್ಸವ ಸಮಾರಂಭದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಅದಕ್ಕೆ ಕಾರಣ ವಿಡಿಯೋದಲ್ಲಿರೋ ಅಂಶ. ಹೃದಯಸ್ಪರ್ಶಿ ವಿಡಿಯೋ ನೋಡಿದ ಎಲ್ಲರೂ, ಅಲ್ಲಿನ ಪ್ರೊಫೆಸರ್‌ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪೋಸ್ಟ್‌ ಆದ ದಿನದಿಂದ ಇಲ್ಲಿಯವರೆಗೂ 27 ಮಿಲಿಯನ್‌ ವೀವ್ಸ್‌ ಅನ್ನು ಇದು ಕಂಡಿದ. ವಿದ್ಯಾರ್ಥಿ ಹಾಗೂ ಪ್ರೊಫೆಸರ್‌ ನಡುವಿನ ಆರೋಗ್ಯಕರ ಹಾಗೂ ಹೃದಯಸ್ಪರ್ಶಿ ಕ್ಷಣವನ್ನು ವಿಡಿಯೋ ಸೆರೆ ಹಿಡಿದಿದೆ.

ವಿಡಿಯೋದಲ್ಲಿ ಕಾರ್ತಿಕ್‌ ಹೆಸರಿನ ವಿದ್ಯಾರ್ಥಿ, ತಮ್ಮ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳಲು ವೇದಿಕೆಗೆ ಏರಲು ಮುಂದಾಗುತ್ತಾರೆ. ಪ್ರೊಫೆಸರ್‌ ಬಳಿ ಹೋಗಿ ಪದವಿ ಪ್ರಮಾಣಪತ್ರ ಪಡೆಯಲು ಮುಂದಾಗುತ್ತಾರೆ. ಫೋಟೋ ತಗೆಯುವ ಮುನ್ನ ಪ್ರೊಫೆಸರ್‌ ಬಳಿ ನಾನು ಸನ್‌ ಗ್ಲಾಸ್‌ ಹಾಕಿಕೊಳ್ಳಬಹುದೇ ಎಂದು ಕೇಳುತ್ತಾರೆ. ಪ್ರೊಫೆಸರ್‌ ನಕ್ಕಾಗ ವಿದ್ಯಾರ್ಥಿಗೆ ಉತ್ತರ ಸಿಕ್ಕಂತೆ ಎನಿಸಿ ತಮ್ಮಲ್ಲಿದ್ದ ಸನ್‌ ಗ್ಲಾಸ್‌ಅನ್ನು ಕಣ್ಣಿಗೆ ಏರಿಸಿಕೊಳ್ಳುತ್ತಾರೆ.

View post on Instagram

ಈ ವೇಳೆ ವಿದ್ಯಾರ್ಥಿ ಕಾರ್ತಿಕ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರೊಫೆಸರ್‌ಗೆ ನೀವೂ ಕೂಡ ಒಂದನ್ನು ಧರಿಸಿಕೊಳ್ಳಿ ಎನ್ನುತ್ತಾರೆ. ಯಾವುದೇ ಇಂಜರಿಕೆ ಇಲ್ಲದೆ, ಪ್ರೊಫೆಸರ್‌ ಹಾಗಾದರೆ ಕೊಡು ಎಂದು ಹೇಳುವಂತೆ ಕಂಡಿದೆ. ಈ ಹಂತದಲ್ಲಿ ತಾವು ಧರಿಸಿದ್ದ ರೆಗ್ಯುಲರ್‌ ಗ್ಲಾಸ್‌ಅನ್ನು ತೆಗೆದು. ವಿದ್ಯಾರ್ಥಿ ನೀಡಿದ ಸನ್‌ಗ್ಲಾಸ್‌ಅನ್ನು ಕಣ್ಣಿಗೆ ಏರಿಸಿಕೊಳ್ಳುತ್ತಾರೆ. ಇದರ ಬೆನ್ನಲ್ಲಿಯೇ ವಿದ್ಯಾರ್ಥಿ ವರ್ಗದಿಂದ ಭಾರೀ ಕರತಾಡನ ವ್ಯಕ್ತವಾಗುತ್ತದೆ.ಪ್ರೊಫೆಸರ್‌ ಹಾಗೂ ವಿದ್ಯಾರ್ಥಿ ಇಬ್ಬರ ಕೂಲ್‌ ನಡೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಇಂಟರ್ನೆಟ್‌ ಪ್ರೊಫೆಸರ್‌ನ ವ್ಯಕ್ತಿತ್ವವನ್ನು ಬಹಳ ಇಷ್ಟಪಟ್ಟಿದ್ದು, ಯೂಸರ್‌ಗಳು ಅವರನ್ನು ಕೂಲೆಸ್ಟ್‌ ಪ್ರೊಫೆಸರ್‌ ಎಂದು ಕರೆದಿದ್ದಾರೆ. 'ಇವರು ನಿಜವಾದ ಪೂಕಿ ಪ್ರೊಫೆಸರ್‌ಗೆ ಕೂಲ್ ಪ್ರೊಫೆಸರ್" ಎಂದು ಯೂಸರ್‌ ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು "ಐಸಾ ಪ್ರೊಫೆಸರ್ ಸಬ್ಕೊ ಮೈಲ್ (ಎಲ್ಲರಿಗೂ ಇಂತಹ ಪ್ರಾಧ್ಯಾಪಕರು ಸಿಗಬೇಕು)" ಎಂದು ಬರೆದಿದ್ದಾರೆ.

ಇನ್ನೂ ಕೆಲವರು, ಕಾರ್ತಿಕ್‌ ವೇದಿಕೆ ಏರಿದಾಗ ಸನ್‌ಗ್ಲಾಸ್‌ ಧರಿಸಲು ಪ್ರೊಫೆಸರ್‌ ಒಪ್ಪಿಗೆ ಪಡೆದುಕೊಂಡ ರೀತಿಯನ್ನು ಮೆಚ್ಚಿದ್ದಾರೆ. 'ಸುಮ್ಮನೆ ತಾನು ಅಂದುಕೊಂಡಿದ್ದನ್ನು ಮಾಡಿ ಸೀನ್‌ ಸೃಷ್ಟಿಸುವುದಕ್ಕಿಂತ ವೇದಿಕೆ ಏರಿದಾಗ ವಿದ್ಯಾರ್ಥಿ, ತನಗೆ ಅನಿಸಿದ್ದನ್ನು ಮಾಡಲು ಪ್ರೊಫೆಸರ್‌ ಅನುಮತಿ ಕೇಳಿದ್ದ ರೀತಿ ನನಗೆ ಇಷ್ಟವಾಯಿತು' ಎಂದಿದ್ದಾರೆ.

'ಇದು ಕೂಲೆಸ್ಟ್‌ ಫ್ರೊಫೆಸರ್‌ ಹಾಗೂ ಸ್ಟೂಡೆಂಟ್‌ ಕಾಂಬಿನೇಷನ್‌' ಎಂದು ಮಾಡಿರುವ ಕಾಮೆಂಟ್‌ಗೆ 60 ಸಾವಿರ ಲೈಕ್‌ಗಳ ಬಂದಿವೆ. ಇದು ಪ್ರೊಫೆಸರ್‌ ಮೇಲೆ ವಿದ್ಯಾರ್ಥಿ ಇಟ್ಟಿರುವ ಗೌರವ ಹಾಗೂ ಪ್ರೊಫೆಸರ್‌ನ ತಣ್ಣಗಿನ ಸ್ವಭಾವ ಎರಡನ್ನೂ ಮೆಚ್ಚಿಕೊಳ್ಳಬೇಕು ಎಂದಿದ್ದಾರೆ.

'ರಾಜೀವ್‌ ಅಹುಜಾ ಸರ್‌ ನಿಜಕ್ಕೂ ಉತ್ತಮ ವ್ಯಕ್ತಿ' ಎನ್ನುವ ಕಾಮೆಂಟ್‌ಗೆ 11 ಸಾವಿರ ಲೈಕ್‌ಗಳು ಬಂದಿವೆ.

ಈ ವೀಡಿಯೊ ತಮ್ಮ ವಿದ್ಯಾರ್ಥಿಗಳೊಂದಿಗೆ ನಿರಾಳ ಮತ್ತು ಗೌರವಯುತ ರೀತಿಯಲ್ಲಿ ಸಂಪರ್ಕ ಸಾಧಿಸುವ ಪ್ರಾಧ್ಯಾಪಕರು ಹೆಚ್ಚಾಗಿ ಅತ್ಯಂತ ಪ್ರೀತಿಯ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ನೆನಪಿಸುತ್ತದೆ - ಪದವಿ ಪಡೆದ ನಂತರವೂ ವಿದ್ಯಾರ್ಥಿಗಳು ಇಂಥವರನ್ನು ಬಹಳ ಕಾಲ ನೆನಪಿಸಿಕೊಳ್ಳುತ್ತಾರೆ.