ಅಹಮ್ಮದಾಬಾದ್(ಡಿ.25): ಬರೋಬ್ಬರಿ 60 ವರ್ಷಗಳ ಹಿಂದೆ ಕಟ್ಟಿದ ವಿದ್ಯಾರ್ಥಿ ನಿಲಯ. ವಿಶ್ವದ ಗೌರವಾನ್ವಿತ ವಾಸ್ತುಶಿಲ್ಪಿ ಅಮೆರಿಕದ ಲೂಯಿಸ್ ಕಾನ್ ವಾಸ್ತುಶಿಲ್ಪದ ಅಹಮ್ಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ನಿಲಯ ಇದೀಗ  ನೆಲಸಮ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ.

19 ವಿದ್ಯಾರ್ಥಿ ನಿಲಯಗಳಲ್ಲಿ 14 ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.  ಪಾರಂಪರಿಕ ಕಟ್ಟ ಕಳೆದ 6 ದಶಕಗಳಿಂದ ವಿದ್ಯಾರ್ಥಿಗಳಿಗೆ ಭವನಾಗಿದೆ. ಆದರೆ ಕೆಲ ವರ್ಷಗಳಿಂತ ತೀವ್ರ ಹಾನಿಗೊಳಗಾಗಿದೆ. ಹೀಗಾಗಿ 14 ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. 

ಬೆಸ್ಟ್ ಬಿ-ಸ್ಕೂಲ್ ಪಟ್ಟ ಉಳಿಸಿಕೊಂಡ ಐಐಎಂ-ಬೆಂಗಳೂರು
 
ಪಾರಂಪರಿಕ ಕಟ್ಟಡ 14 ವಿದ್ಯಾರ್ಥಿ ನಿಲಯ ಬಹುತೇಕ ಹಾನಿಯಾಗಿದೆ. ಇದರಲ್ಲಿ ನೆಲೆಸಲು ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಹೀಗಾಗಿ ನೆಲಸಮ ಮಾಡಲು ನಿರ್ಧರಿಸಿದೆ. ಆದರೆ ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡವು ನಿರ್ಧಾರ ತೆಗೆದುಕೊಳ್ಳುವು ತುಂಬಾ ಕಠಿಣವಾಗಿತ್ತು. ಕಾರಣ ಇದನ್ನು ಸಂರಕ್ಷಿಸಿಡುವುದು ಅಗತ್ಯವಾಗಿದೆ. ಆದರೆ ಸ್ಛಳದ ಕೊರತೆಯಿಂದ ನೆಲಸಮ ಅನಿವಾರ್ಯವಾಗಿದೆ ಎಂದು IIM ನಿರ್ದೇಶಕ ಎರೋಲ್ ಡಿಸೋಜಾ ಪತ್ರದಲ್ಲಿ ಹೇಳಿದ್ದಾರೆ.

ನಮ್ಮ ಜಾಗ, ಪಾಕಿಸ್ತಾನದ ಅತಿಕ್ರಮಣ, ಚೀನಾದ ಅಣೆಕಟ್ಟು, ಬೌದ್ಧ ಶಿಲ್ಪಗಳು ಅನಾಥ!..

ವಿದ್ಯಾರ್ಥಿ ನಿಲಯ ಕಟ್ಟಡ ಶಿಥಿಲಗೊಂಡಿದೆ. ಛಾವಣಿಗಳು ಕುಸಿಯುವ ಹಂತದಲ್ಲಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಪತ್ರದಲ್ಲಿ ಡಿಸೋಜಾ ಹೇಳಿದ್ದಾರೆ. ಇದೀಗ ಹೊಸ ಕಟ್ಟಡ ವಿನ್ಯಾಸಕ್ಕೆ ಸೂಕ್ತರಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟುವ ನಿಟ್ಟಿನಲ್ಲಿ ಹಾಗೂ ಆಧುನಿಕ ಸೌಲಭ್ಯದ ಕೊಠಡಿ ನಿರ್ಮಾಣವಾಗಲಿದೆ ಎಂದು ಡಿಸೋಜಾ ಹೇಳಿದ್ದಾರೆ.