ಈಗ ಲೋಕಸಭಾ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸೀಟ್? ಅಚ್ಚರಿ ಸಮೀಕ್ಷೆ ಬಹಿರಂಗ
ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದ ನೇಷನ್ ಸಮೀಕ್ಷೆಯ ಪ್ರಕಾರ, ಸದ್ಯ ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ ಎಂಬುದನ್ನು ಹೇಳಿದೆ.

ನವದೆಹಲಿ: ಪ್ರಸಕ್ತ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 188 ಸ್ಥಾನ ಪಡೆಯಲಿದೆ ಎಂದು ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದ ನೇಷನ್ ಸಮೀಕ್ಷೆ ಹೇಳಿದೆ.
2024ರ ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನ ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ ಈಗ ಚುನಾವಣೆ ನಡೆದರೆ ಭರ್ಜರಿ 343 ಸ್ಥಾನ ಗೆಲ್ಲಲಿದೆ. ಅಂದರೆ ಅದರ ಸ್ಥಾನಬಲ 51 ಸ್ಥಾನ ಹೆಚ್ಚಾಗಲಿದೆ. ಬಿಜೆಪಿ ಬಲ 240ರಿಂದ 281ಕ್ಕೆ ಏರಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನ ಗೆದ್ದಿದ್ದ ಇಂಡಿಯಾ ಕೂಟದ ಬಲ 188ಕ್ಕೆ ಇಳಿಯಲಿದೆ. ಅದೇ ರಿತಿ ಕಾಂಗ್ರೆಸ್ ಬಲ 99ರಿಂದ 78ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.
ಅಲ್ಲದೆ ಬಿಜೆಪಿಯ ಮತಪ್ರಮಾಣವು ಶೇ.41ರಷ್ಟು ವೃದ್ಧಿಯಾದರೆ ಕಾಂಗ್ರೆಸ್‌ದು ಶೇ.20ರಷ್ಟು ಕುಸಿತವಾಗಲಿದೆ. ಇಂಡಿಯಾ ಕೂಟದ ಒಳಜಗಳವು ಮತ ಪ್ರಮಾಣಕ್ಕೆ ಕುಸಿತವಾಗಿರಲಿದೆ ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ಉಚಿತ ಸ್ಕೀಂಗಳಿಂದ ಜನರಿಗೆ ದುಡಿವ ಮನಸ್ಸೇ ಇಲ್ಲ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಚಾಟಿ
ಫ್ರಾನ್ಸ್‌ಗೆ ಭಾರತದ ಪಿನಾಕಾ ರಾಕೆಟ್ ಆಫರ್ ಕೊಟ್ಟ ಮೋದಿ
ರಕ್ಷಣಾ ಮಾತುಕತೆ ಸೇರಿ ವಿವಿಧ ವಿಷಯಗಳ ಚರ್ಚೆಗಾಗಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ವೇಳೆ ಭಾರತದ ಪಿನಾಕಾ ರಾಕೆಟ್ ಸಿಸ್ಟಂ ಅನ್ನು ಫ್ರಾನ್ಸ್‌ಗೆ ಪೂರೈಸುವ ಆಫರ್ ಅನ್ನು ಫ್ರಾನ್ಸ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಫ್ರಾನ್ಸ್ ಭೇಟಿ ವೇಳೆ 26 ನೌಕೆ ಆವೃತ್ತಿಯ ರಫೇಲ್ ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಆಫರ್ ಮುಂದಿಟ್ಟಿದ್ದಾರೆ. ಏಕಕಾಲಕ್ಕೆ ಹಲವು ರಾಕೆಟ್‌ಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯವನ್ನು ಪಿನಾಕಾ ರಾಕೆಟ್ ಸಿಸ್ಟಂ ಹೊಂದಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ವಿರುದ್ಧ ಹೈಕೋರ್ಟ್ ಮೊರೆ ಹೋದ ನಿವೃತ್ತ ಜಡ್ಜ್!