Asianet Suvarna News Asianet Suvarna News

ಗಡಿ ಒಪ್ಪಂದ ಮುರಿದರೆ ಮೈತ್ರಿ ಭಂಗ: ಚೀನಾಕ್ಕೆ ರಾಜ್‌ನಾಥ್‌ ಖಡಕ್‌ ಎಚ್ಚರಿಕೆ

2020ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ನಡೆದಿದ್ದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆ ಬಳಿಕ ಇದೇ ಮೊದಲ ಬಾರಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಗಡಿ ಸಂಘರ್ಷ ವಿಚಾರದಲ್ಲಿ ಚೀನಾಕ್ಕೆ ರಾಜ್‌ನಾಥ್‌ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

If the border agreement is broken the alliance will be broken Defence Minister Rajnath singh warns China Akb
Author
First Published Apr 28, 2023, 10:43 AM IST

ನವದೆಹಲಿ: 2020ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ನಡೆದಿದ್ದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆ ಬಳಿಕ ಇದೇ ಮೊದಲ ಬಾರಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಗಡಿ ಸಂಘರ್ಷ ವಿಚಾರದಲ್ಲಿ ಚೀನಾಕ್ಕೆ ರಾಜ್‌ನಾಥ್‌ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

ಶಾಂಘೈ ಸಹಕಾರ ಸಂಸ್ಥೆ(SCO)ಗಳ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿದ್ದ ಶಾಂಗ್‌ಫು (Shangfu), ಅದಕ್ಕೂ ಮುನ್ನ ರಾಜ್‌ನಾಥ್‌ರನ್ನು ಭೇಟಿಯಾಗಿ ಉಭಯ ದೇಶಗಳ ಗಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸಿಂಗ್‌, ‘ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಮುರಿದು ಗಡಿ ನಿಯಮಗಳನ್ನು ಉಲ್ಲಂಘಿಸುವುದರಿಂದ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ (India-China Bilateral Relations) ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಗಡಿ ನಿಯಂತ್ರಣ ರೇಖೆಯ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತಕತೆ ಹಾಗೂ ಬದ್ಧತೆಯಿಂದ ಪರಿಹರಿಸಬೇಕಾದ ಅಗತ್ಯವಿದೆ’ ಎಂದಿದ್ದಾರೆ. ಅಲ್ಲದೇ, ಭಾರತ-ಚೀನಾ ನಡುವಿನ ಸಂಬಂಧ ಸರಿ ಇರಲು ಗಡಿಯಲ್ಲಿ ಶಾಂತಿ, ದ್ವಿಪಕ್ಷೀಯ ಒಪ್ಪಂದಗಳ ಪಾಲನೆ ಅತ್ಯಗತ್ಯ ಎಂದು ಸಂದೇಶ ರವಾನಿಸಿದ್ದಾರೆ.

ದೇಶದ ಬತ್ತಳಿಕೆಗೆ ಕ್ಷಿಪಣಿ ನಾಶಕ ಯುದ್ಧನೌಕೆ ಮರ್ಮುಗೋವಾ: ರಕ್ಷಣಾ ಸಚಿವರಿಂದ ದೇಶಕ್ಕೆ ಸಮರ್ಪಣೆ

ಏ.23ರಂದು ಕೋರ್‌ ಕಮಾಂಡರ್‌ಗಳ ಮಾತುಕತೆಯಲ್ಲಿ, ಪೂರ್ವ ಲಡಾಖ್‌ನ (East Ladakh) ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳು ನಿಕಟ ಸಂಪರ್ಕದಲ್ಲಿರಲು ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳುವ ಬಗ್ಗೆ ಒಪ್ಪಂದವಾಗಿತ್ತು.

ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

Follow Us:
Download App:
  • android
  • ios