2027ರಲ್ಲಿ ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜ್ಯಗಳೊಂದಿಗಿನ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಪಡಿಸಲಾಗುವುದು ಎಂದು ಶಿರೋಮಣಿ ಅಕಾಲಿ ದಳ ಹೇಳಿದೆ. 

ಚಂಡೀಗಢ: 2027ರಲ್ಲಿ ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜ್ಯಗಳೊಂದಿಗಿನ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಪಡಿಸಲಾಗುವುದು ಎಂದು ಶಿರೋಮಣಿ ಅಕಾಲಿ ದಳ ಹೇಳಿದೆ. ಜಲಂಧರ್‌ನಲ್ಲಿ (Jalandhar) ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅಕಾಲಿದಳ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ( ‘ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಇಂತಹ ಸಂಕಷ್ಟದಲ್ಲಿ ನಮ್ಮ ರಾಜ್ಯದ ಜನ, ಭೂಮಿ ಮತ್ತು ಜಾನುವಾರಗಳನ್ನು ರಕ್ಷಿಸುವ ಸಹಾಯವಾಗುವ ಉದ್ದೇಶದಿಂದ ನೆರೆಯ ಯಾವುದೇ ರಾಜ್ಯ ನಮ್ಮ ರಾಜ್ಯದಿಂದ ಹೆಚ್ಚುವರಿ ನೀರನ್ನು ಪಡೆಯಲು ಮುಂದೆ ಬರಲಿಲ್ಲ’ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ‘ನಾವು ಅಧಿಕಾರಕ್ಕೆ ಬಂದ ನಂತರ ಯಾವುದೇ ಸಮಯದಲ್ಲಿ ಯಾವುದೇ ರಾಜ್ಯದೊಂದಿಗೆ ಸರ್ಕಾರದ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಪಡಿಸುತ್ತೇವೆ. ನೆರೆಯ ರಾಜ್ಯಗಳಿಗೆ, ಅದರಲ್ಲೂ ರಾಜಸ್ಥಾನಕ್ಕೆ (Rajasthan) ಪಂಜಾಬ್‌ ನೀರಿನ ಮೇಲೆ ಯಾವುದೇ ಹಕ್ಕು ಇಲ್ಲ. ಅವರು ಅದು ನಮ್ಮಲ್ಲಿರುವ ಅರ್ಧದಷ್ಟುನೀರನ್ನು ಪಡೆಯುತ್ತಿರುವುದು ದುರದೃಷ್ಟಕರ’ ಎಂದಿದ್ದಾರೆ.

ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು ಬಿಡುಗಡೆ

ಪಂಜಾಬ್‌, ರಾಜಸ್ತಾನ ಮತ್ತು ಹರಾರ‍ಯಣ ರಾಜ್ಯಗಳು ‘ಸಟ್ಲೇಜ್‌ ಯಮುನಾ ಲಿಂಕ್‌’ ಕಾಲುವೆ (Sutlej Yamuna Link) ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಪಂಜಾಬ್‌ ಎರಡೂ ರಾಜ್ಯಗಳಿಗೆ ನೀರು ಒದಗಿಸುತ್ತದೆ. ಆದರೆ ಪಂಜಾಬ್‌ನಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದ ನದಿ ನೀರಿನ ಮಟ್ಟ ಹೆಚ್ಚಾಗಿದ್ದ ವೇಳೆ, ರಾಜಸ್ತಾನ ಮತ್ತು ಹರ್ಯಾಣ ಹೆಚ್ಚುವರಿ ನೀರು ಪಡೆಯಲು ನಿರಾಕರಿಸಿದ್ದವು. ಇದು ಪಂಜಾಬ್‌ ಆಕ್ರೋಶಕ್ಕೆ ಕಾರಣವಾಗಿದೆ.

ಮಹದಾಯಿ ನದಿ ನೀರು ಹಂಚಿಕೆ ವಿವಾದ, ಗೋವಾ ಮೇಲ್ಮನವಿಗೆ ರಾಜ್ಯ ಕಾಂಗ್ರೆಸ್‌ ವಿರೋಧ