'ಶಾರುಖ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಪೌಡರ್ ಇರೋದು ಶುಗರ್ ಪೌಡರ್ ಆಗುತ್ತೆ'
* ಡ್ರಗ್ಸ್ ಪ್ರಕರಣಕ್ಕೂ ಬಿಜೆಪಿಗೂ ಲಿಂಕ್ ಮಾಡಿದ ಮಹಾ ಸಚಿವ
* ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗುತ್ತದೆ
* ಎನ್ ಸಿಬಿ ಮೇಲೆಯೂ ವಾಗ್ದಾಳಿ ನಡೆಸಿದ ಸಚಿವ
* ಮಹಾ ಸಿಎಂ ಉದ್ಧವ್ ಠಾಕ್ರೆ ಸಹ ಟೀಕೆ ಮಾಡಿದ್ದರು
ಮುಂಬೈ(ಅ. 24) ಕ್ರೂಸ್ ಶಿಪ್ ಡ್ರಗ್ಸ್ (Drugs) ದಂಧೆ ಪ್ರಕರಣದಲ್ಲಿ ಬಾಲಿವುಡ್ (Bollywood) ನಟ ಶಾರುಖ್ ಖಾನ್ (Shahrukh khan) ಪುತ್ರನ ಆರ್ಯನ್ ಖಾನ್ (Aryan Khan) ಬಂಧನವಾಗಿದೆ. ಇದೆ ಪ್ರಕರಣಕ್ಕೆ ಸಂಬಂಧಿಸಿ ಲೇವಡಿ ಮಾಡುತ್ತ ಮಹಾರಾಷ್ಟ್ರದ (Maharashtra) ಸಚಿವ ಛಗನ್ ಭುಜಬಲ್ (Chhagan Bhujbal) ನೀಡಿರುವ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ.
ಒಂದು ವೇಳೆ ಶಾರುಖ್ ಖಾನ್ ಬಿಜೆಪಿಗೆ ಸೇರಿದರೆ ಡ್ರಗ್ಸ್ ಪೌಡರ್ ಇರುವುದು ಶುಗರ್ ಪೌಡರ್ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಈ ಪ್ರಕರಣವನ್ನು ತನಿಖೆ ಮಾಡುವ ಬದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದಿದ್ದಾರೆ.
ಸಮತಾ ಪರಿಷತ್-ಎನ್‌ಸಿಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹಾರಾಷ್ಟ್ರದ ಸಚಿವ ಮಹಾ ಸರ್ಕಾರವು ಒಬಿಸಿ ಕೋಟಾದಲ್ಲಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ, ಆದರೆ ಬಿಜೆಪಿ ಕಾರ್ಯಕಾರಿಯೊಬ್ಬರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಮುದಾಯಕ್ಕೆ ಅನ್ಯಾಯ ಮಾಡುವ ಕೆಲಸ ಮಡುತ್ತಿದೆ ಎಂದು ಆರೋಪಿಸಿದ್ದಾರೆ.
ಜೈಲಿನಲ್ಲಿ ಸೀತೆ ರಾಮರ ಕತೆ ಓದುತ್ತಿರುವ ಆರ್ಯನ್ ಖಾನ್
ಮಹಾರಾಷ್ಟ್ರ (Maharashtra)ಸಿಎಂ ಉದ್ಧವ್ ಠಾಕ್ರೆ (Uddhav Thackeray ) ಸಹ ಎನ್ ಸಿಬಿ (Narcotics Control Bureau) ಮೇಲೆ ಟೀಕಾ ಪ್ರಹಾರ ಮಾಡಿದ್ದರು. ಮುಂಬೈ ಪೊಲೀಸರು (Mumbai Police) ವಶಪಡಿಸಿಕೊಂಡಿರುವುದು 25 ಕೋಟಿ ರೂ. ಮೊತ್ತದ ಹೆರಾಯಿನ್.. ಹೀರೋಇನ್ (Bollywoo) ಅಲ್ಲ ಗೊತ್ತಿರಲಿ ಎಂದಿದ್ದರು.
ಎನ್ ಸಿಬಿ ಸೆಲೆಬ್ರಿಟಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಈ ಹಿಂದೆ ಠಾಕ್ರೆ ಹೇಳಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ದೊಡ್ಡ ಚರ್ಚೆಗೆ ಕಾರಣವಾಗಿಯೇ ಇದೆ. ಬಾಲಿವುಡ್ ಮತ್ತರು ಡ್ರಗ್ಸ್ ಪ್ರಕರಣಕ್ಕೂ ಲಿಂಕ್ ಇದ್ದೇ ಇದೆ. ಸುಶಾಂತ್ ಸಿಂಗ್ ಸಾವಿನ ನಂತರ ಹುಟ್ಟಿಕೊಂಡ ವಿಚಾರ ಅನೇಕ ತಿರುವುಗಳನ್ನು ಪಡೆದುಕೊಂಡಿತು.. ರಿಯಾ ಚಕ್ರವರ್ತಿಯಿಂದ ಹಿಡಿದು ಇದೀಗ ಅನನ್ಯಾ ಪಾಂಡೆ ವರೆಗೆ ವಿಚಾರಣೆ ನಡೆಸಲಾಗಿದೆ.