ಅಮೇಥಿಗೆ ಆದ ಗತಿಯೇ ವಯನಾಡ್‌ಗೆ ಆಗಲಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಚ್ಚರಿಕೆ

ರಾಹುಲ್‌ ಗಾಂಧಿ ಕೇರಳದ ವಯನಾಡಿನಲ್ಲೇ ಲೋಕಸಭೆ ಸದಸ್ಯರಾಗಿ ಉಳಿದ್ರೆ ಉತ್ತರ ಪ್ರದೇಶದ ಅಮೇಥಿ ಸಂಸದರಾಗಿದ್ದಾಗ ಆ ಕ್ಷೇತ್ರಕ್ಕೆ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಚ್ಚರಿಕೆ ನೀಡಿದ್ದಾರೆ. 

if rahul gandhi remains in wayanad it will face same fate as amethi amriti irani reminder ash

ತಿರುವನಂತಪುರಂ (ಮೇ 23, 2023): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡಿನಲ್ಲೇ ಲೋಕಸಭೆ ಸದಸ್ಯರಾಗಿ ಉಳಿದ್ರೆ ಉತ್ತರ ಪ್ರದೇಶದ ಅಮೇಥಿ ಸಂಸದರಾಗಿದ್ದಾಗ ಆ ಕ್ಷೇತ್ರಕ್ಕೆ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಮೊದಲು ರಾಹುಲ್‌ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಸದ್ಯ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕ ಮನವಿ ಮಾಡಿದ್ದು, ಈ ಸಂಬಂಧದ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ.

ಕೇರಳದ ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಕೇಂದ್ರ ಸಚಿವೆ, ತಾನು ರಾಹುಲ್ ಗಾಂಧಿಯನ್ನು ಅಮೇಥಿಯಿಂದ ಸೋಲಿಸಿ ಕಳಿಸಿದ ಅದೃಷ್ಟ ಹೊಂದಿದ್ದೇನೆ ಎಂದು ಹೇಳಿದರು. ಅಲ್ಲದೆ, ಅದಕ್ಕೆ ಕಾರಣ ಅವರು ಅಮೇಥಿ ಸಂಸದರಾಗಿದ್ದಾಗ ಅಲ್ಲಿನ ಶೇ. 80ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಠಾಣೆ, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇರಲಿಲ್ಲ. ಹಾಗೂ, ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಅಥವಾ ಎಕ್ಸ್ ರೇ ಯಂತ್ರವೂ ಇರಲಿಲ್ಲ. ಆದರೆ, "ಅವರು ಹೋದ ನಂತರ, ಈ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಅಲ್ಲಿ ಸಾಧ್ಯವಾಯಿತು.

ಇದನ್ನು ಓದಿ: ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ

ಆದ್ದರಿಂದ, ಅವರು ವಯನಾಡಿನಲ್ಲಿ ಲೋಕಸಭೆ ಸದಸ್ಯರಾಗಿ ಉಳಿದುಕೊಂಡರೆ, ಅಮೇಥಿಯಂತೆಯೇ ಈ ಕ್ಷೇತ್ರ ಸಹ ಅನುಭವಿಸುತ್ತದೆ. ಆದ್ದರಿಂದ, ಅವರು ಇಲ್ಲಿ ಉಳಿಯುವುದಿಲ್ಲ ಎಂದು ನೀವು (ಜನರು) ಖಚಿತಪಡಿಸಿಕೊಳ್ಳಬೇಕು," ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಇನ್ನು, ತಾನು ದೆಹಲಿ ಅಥವಾ ಅಮೇಥಿಯಲ್ಲಿದ್ದರೂ ವಯನಾಡಿನ ಬಗ್ಗೆ ಹೆಚ್ಚು ಚಿಂತಿಸುತ್ತೇನೆ ಮತ್ತು ಆದ್ದರಿಂದ ಅಲ್ಲಿನ 250 ಅಂಗನವಾಡಿಗಳನ್ನು 'ಸಕ್ಷಮ್' (ಸಮರ್ಥ) ಅಂಗನವಾಡಿಗಳಾಗಿ ಪರಿವರ್ತಿಸಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವೆ ಹೇಳಿದರು. ಸಕ್ಷಮ್ ಅಂಗನವಾಡಿಯು ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಂಗನವಾಡಿಗಳು ಪೂರಕ ಪೋಷಣೆ, ಪೂರ್ವ ಶಾಲಾ ಅನೌಪಚಾರಿಕ ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ಶಿಕ್ಷಣ, ರೋಗನಿರೋಧಕ, ಆರೋಗ್ಯ ತಪಾಸಣೆ ಮತ್ತು ಉಲ್ಲೇಖಿತ ಸೇವೆಗಳು - ಹೀಗೆ ಆರು ಸೇವೆಗಳ ಪ್ಯಾಕೇಜ್ ಅನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಒದಗಿಸುತ್ತವೆ.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್‌ ತಡೆ

ಈ ಮಧ್ಯೆ, ಶ್ರೀಮತಿ ಸ್ಮೃತಿ ಇರಾನಿ ಅವರು ಮಹಿಳೆಯರ ಸುರಕ್ಷತೆ, ಜನರ ಆರ್ಥಿಕ ಭದ್ರತೆ ಮತ್ತು ರಾಜ್ಯದ ನಾಗರಿಕರ ಸಾಮಾಜಿಕ ಕಲ್ಯಾಣಕ್ಕಾಗಿ ಕೇರಳದಲ್ಲಿ ಜಾರಿಗೊಳಿಸಲಾದ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು, ಉಪಕ್ರಮಗಳು ಅಥವಾ ನೀತಿಗಳ ಬಗ್ಗೆಯೂ ಮಾತನಾಡಿದರು. ಹಾಗೆ, ಕೇರಳ ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಕೊರತೆಯಿದೆ ಎಂಬ ಆರೋಪದ ಕುರಿತು ಇತ್ತೀಚೆಗೆ ರಾಜ್ಯದ ತಾಲೂಕು ಆಸ್ಪತ್ರೆಯಲ್ಲಿ ಯುವ ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಚಿವರು, ಅಲ್ಲಿ ಪೊಲೀಸ್ ಅಧಿಕಾರಿಗಳು ಇದ್ದರೂ
ಇಂತಹ ಘಟನೆ ನಡೆದಿರುವುದು ಅಚ್ಚರಿ ತಂದಿದೆ ಎಂದರು. 

ಹಾಗೆ, ಸೈಬರ್ ಕ್ರೈಮ್ ಸಂತ್ರಸ್ತರಿಗೆ ಸಹಾಯ ಮಾಡಲು ಸಿಬ್ಬಂದಿ ತರಬೇತಿ, ಫೊರೆನ್ಸಿಕ್ ಕಿಟ್‌ಗಳನ್ನು ವಿತರಿಸುವುದು ಮತ್ತು ಹೆಚ್ಚಿನ ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ವಿವಿಧ ಉಪಕ್ರಮಗಳ ಹೊರತಾಗಿಯೂ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಹಣಕಾಸಿನ ನೆರವು ನೀಡುತ್ತಿರುವುದು ಏಕೆ ಎಂದೂ ಅವರು ಪ್ರಶ್ನಿಸಿದರು. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತ ಸರ್ಕಾರದ ಕಡೆಯಿಂದ "ಉದ್ದೇಶದ ಕೊರತೆ" ಇದೆ ಎಂದೂ ಆರೋಪಿಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್‌ ಕೋರ್ಟ್‌

Latest Videos
Follow Us:
Download App:
  • android
  • ios