Asianet Suvarna News Asianet Suvarna News

ಸಾಮಾನ್ಯನಾದ ನಾನು ಪ್ರಧಾನಿಯಾಗಿದ್ದರೆ, ದೇಶದ 130 ಕೋಟಿ ಜನತೆಗೂ ಸಾಧ್ಯ; ಭಾರತದ ಸಾಮರ್ಥ್ಯ ಶ್ಲಾಘಿಸಿದ ಮೋದಿ!

  • ಸಾಮಾನ್ಯರಲ್ಲಿ ಸಾಮಾನ್ಯನಾದ ನನಗೆ ಜನರು ಪ್ರಧಾನಿ ಜವಾಬ್ದಾರಿ ನೀಡಿದ್ದಾರೆ
  • 130 ಕೋಟಿ ಜನತೆಯಲ್ಲಿ ವಿಶೇಷ ಸಾಮರ್ಥ್ಯವಿದೆ, ಅವರಿಗೂ ಪ್ರಧಾನಿಯಾಗುವ ಅವಕಾಶವಿದೆ
  • ಭಾರತದ ಪ್ರಜಾಪ್ರಭುತ್ವದ ವಿಶೇಷತೆ ಇದು ಎಂದ ಪ್ರಧಾನಿ ನರೇಂದ್ರ ಮೋದಿ
If I can anyone can PM modi praise 130 crore people capabilities and strength of our democracy ckm
Author
Bengaluru, First Published Oct 2, 2021, 6:30 PM IST
  • Facebook
  • Twitter
  • Whatsapp

ನವದೆಹಲಿ(ಅ.02): ಬಡ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಾನು ಇಂದು ದೇಶದ ಪ್ರಧಾನಿಯಾಗಿದ್ದೇನೆ(Prime minister) ಎಂದರೆ ಈ ದೇಶದ 130 ಕೋಟಿ ಜನತೆಗೂ  ಆ ಸಾಮರ್ಥ್ಯವಿದೆ. ನನಗೆ ಸಾಧ್ಯವಾಗಿದೆ ಎಂದರೆ ಯಾರೂ ಈ ಸಾಧನೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳ ದೊಡ್ಡ ಭರವಸೆ, ಗೆದ್ದ ಬಳಿಕ ಯೂಟರ್ನ್: ಮೋದಿ ಸಂದರ್ಶನ!

 ಒಪನ್‌ದಿ ಮ್ಯಾಗಜೀನ್‌ಗೆ ನಿಯತಕಾಲಿಕೆಗೆ ನೀಡಿದ ಸಂದರ್ಶದಲ್ಲಿ ಪ್ರಧಾನಿ ಮೋದಿ ದೇಶದ ಪ್ರಜಾಪ್ರಭುತ್ವದ ಶಕ್ತಿ(Power of democracy), ಯುವಕರಿಗೆ ಅವಕಾಶ(Youths opportunity) ಸೇರಿದಂತೆ ಹಲವು ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ನನ್ನ ಪಯಣ ಗಾಬರಿಯಾಗಿಲ್ಲ. ಈ ದೇಶದ ಯುವ ಜನತೆಯಲ್ಲಿರುವ ಶಕ್ತಿ ಸಾಮರ್ಥ್ಯ ನನ್ನನ್ನು ಬೆರಗಾಗಿಸಿದೆ. ಸಾಮಾನ್ಯ ಬಾಲಕನಾಗಿದ್ದ ನಾನು ಇಂದು ಪ್ರಧಾನಿಯಾಗಿದ್ದೇನೆ ಎಂದರೆ ಈ ದೇಶದ ಪ್ರಜಾಪ್ರಭುತ್ವದ ಶಕ್ತಿ ಇದು. ಈ ದೇಶದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಅತೀ ದೊಡ್ಡ ಜವಾಬ್ದಾರಿ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿಸಿದ ಪ್ರಧಾನಿ ಮೋದಿ

ನಾನು ಹೇಗಿದ್ದೆ, ಈಗ ಯಾವ ಸ್ಥಾನದಲ್ಲಿದ್ದೇನೆ,  ನನ್ನ ಅನುಭವ ಮುಖ್ಯವಲ್ಲ. ಇಲ್ಲಿ ಮುಖ್ಯವೇನೆಂದರೆ ಈ ದೇಶದ ಯಾರೂ ಕೂಡ ಈ ಸಾಧನೆ ಮಾಡಬಹುದು ಅನ್ನೋದು ಮುಖ್ಯ. ಯುವಕರು ಸ್ವಾವಲಂಬಿಯಾಗಲು ಪಡೆದ ನೆರವು ಅಥವಾ ಸಹಾಯವನ್ನು ನಾನು ಉಲ್ಲೇಖಿಸುವುದಿಲ್ಲ. ಆದರೆ ಅದೇ ಯುವಕರಿಗೆ ಅವಕಾಶಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

'ಚಾಕೋಲೆಟ್ ಸಿಪ್ಪೆ ಜೇಬಲ್ಲಿಟ್ಟುಕೊಳ್ಳಿ' ಮೋದಿ ಕರೆ ಹಿಂದಿನ ಉದ್ದೇಶ

ಕೊರೋನಾ(Coronavirus) ನಮಗೆ ಹಲವು ಪಾಠ ಕಲಿಸಿದೆ. ಅದರಲ್ಲೂ ಭಾರತ ಕೊರೋನಾದಿಂದ ನಾವು ಒಗ್ಗಾಟ್ಟಾಗಿ ಹೋರಾಡುವ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದ್ದೇವೆ.  ಕೊರೋನಾ ವಕ್ಕರಿಸಿದಾಗ ನಾವು ಪಿಪಿಇ ಕಿಟ್(PPE Kit) ಆಮದು ಮಾಡಿಕೊಳ್ಳುತ್ತಿದ್ದೇವು. ಕೊರೋನಾದಿಂದ ನಾವು ಸ್ವಾಲಂಬಿಯಾಗಿದ್ದೇವೆ. ಇದೀಗ ಜಗತ್ತಿನಲ್ಲಿ ಅತೀ ಹೆಚ್ಚು ಪಿಪಿಇ ಕಿಟ್ ಉತ್ಪಾದನೆ ಮಾಡುವ ದೇಶವಾಗಿ ಹೊರಹೊಮ್ಮಿದ್ದೇವೆ. ಹಲವು ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಗೆಹ್ಲೋಟ್‌ಗೆ ಮೋದಿ ಪ್ರಶಂಸೆ.. ಇದೆ ಅಲ್ಲವೇ ಪ್ರಜಾಪ್ರಭುತ್ವದ ಗೆಲುವು!

ಭಾರತ ಡಿಜಿಟಲೀಕರಣ(Digital India) ಕುರಿತು ಮೋದಿ ಮಾತನಾಡಿದ್ದಾರೆ. ದೇಶದ ಜನ ಡಿಜಿಟಲೀಕರಣಕ್ಕೆ ಕಾಯುತ್ತಿದ್ದರು. ಇದೀಗ ಸಣ್ಣ ಕಿರಾಣಿ ಅಂಗಡಿ, ರಸ್ತೆ ಬದಿ ವ್ಯಾಪಾರಿ, ಸಮೋಸಾ, ಚಾಯ್‌ವಾಲಾ, ದಿನಸಿ ಸೇರಿದಂತೆ ಎಲ್ಲೆಡೆ ಹಣ ಪಾವತಿ ಡಿಜಿಟಲ್ ರೂಪದಲ್ಲಿ ಆಗುತ್ತಿದೆ. ಜನರ ಶಕ್ತಿಯಿಂದ ಭಾರತದ ಡಿಜಿಟಲೀಕರಣ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದರು.
 

Follow Us:
Download App:
  • android
  • ios