Asianet Suvarna News Asianet Suvarna News

Covid-19 Crisis: ಕೋವಿಡ್‌ ಸೋಂಕಿತರಿಗೆ ಸ್ಟಿರಾಯ್ಡ್‌ ಬೇಡ: ಕೇಂದ್ರ ಸರ್ಕಾರ

ಕೋವಿಡ್‌ ಸೋಂಕಿತರಲ್ಲಿ ಸುದೀರ್ಘ ಅವಧಿಗೆ ಕೆಮ್ಮು ಕಾಣಿಸಿಕೊಂಡಿದ್ದರೆ ಅವರಿಗೆ ಕ್ಷಯ ರೋಗ ಸೇರಿದಂತೆ ಇತರೆ ರೋಗಗಳ ಪತ್ತೆಗೆ ಸೂಚಿಸಬೇಕೇ ವಿನಹಃ, ಸ್ಟಿರಾಯ್ಡ್‌ ನೀಡಬಾರದು. ಐವರ್‌ಮೆಕ್ಟಿನ್‌ ಮಾತ್ರೆ ನೀಡಬಾರದು. ಇದು ಅವರಲ್ಲಿ ಬ್ಲ್ಯಾಕ್‌ ಫಂಗಸ್‌ ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

If cough persists Govt discourages steroid use for Covid treatment gvd
Author
Bangalore, First Published Jan 19, 2022, 2:00 AM IST

ನವದೆಹಲಿ (ಜ.19): ಕೋವಿಡ್‌ (Covid19) ಸೋಂಕಿತರಲ್ಲಿ ಸುದೀರ್ಘ ಅವಧಿಗೆ ಕೆಮ್ಮು (Cough) ಕಾಣಿಸಿಕೊಂಡಿದ್ದರೆ ಅವರಿಗೆ ಕ್ಷಯ ರೋಗ ಸೇರಿದಂತೆ ಇತರೆ ರೋಗಗಳ ಪತ್ತೆಗೆ ಸೂಚಿಸಬೇಕೇ ವಿನಹಃ, ಸ್ಟಿರಾಯ್ಡ್‌ (Steroid) ನೀಡಬಾರದು. ಐವರ್‌ಮೆಕ್ಟಿನ್‌ ಮಾತ್ರೆ ನೀಡಬಾರದು. ಇದು ಅವರಲ್ಲಿ ಬ್ಲ್ಯಾಕ್‌ ಫಂಗಸ್‌ (Black Fungus) ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಅಲ್ಲದೆ, ಇತ್ತೀಚೆಗೆ ಸೋಂಕಿತರಿಗೆ ಬಿಡುಗಡೆ ಆಗಿದ್ದ ಮೊಲ್ನುಪಿರಾವರ್‌ ಅನ್ನು ಮಾರ್ಗಸೂಚಿಯಿಂದ ಹೊರಗಿಡಲಾಗಿದೆ. 

ಕೋವಿಡ್‌ ಚಿಕಿತ್ಸೆ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸರ್ಕಾರ, ಸೋಂಕಿತರಲ್ಲಿ 2-3 ವಾರಕ್ಕಿಂತ ಹೆಚ್ಚು ಅವಧಿಗೆ ಕೆಮ್ಮು ಕಾಣಿಸಿಕೊಂಡರೆ ಅವರನ್ನು ಕ್ಷಯ ರೋಗ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು. ಅದನ್ನು ಬಿಟ್ಟು ಹೆಚ್ಚು ಡೋಸ್‌ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಅವಧಿಗೆ ಸೋಂಕಿತರಿಗೆ ಸ್ಟಿರಾಯ್ಡ್‌ ನೀಡಿದರೆ ಅದು ಅವರಲ್ಲಿ ಬ್ಲ್ಯಾಕ್‌ ಫಂಗಸ್‌ ಸೇರಿದಂತೆ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ನೀತಿ ಆಯೋಗದ ಸದಸ್ಯ ಮತ್ತು ಕೋವಿಡ್‌ ಕಾರ್ಯಪಡೆಯ ಮುಖ್ಯಸ್ಥ ಡಾ.ವಿ.ಕೆ.ಪೌಲ್‌ ಕೂಡಾ ಇತ್ತೀಚೆಗೆ ಸೋಂಕಿತರಿಗೆ ಕೋವಿಡ್‌ 2ನೇ ಅಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್‌ ನೀಡಿದ್ದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಸ್ಟಿರಾಯ್ಡ್‌ ಔಷಧಿ ತಂದಿಟ್ಟಿದ್ದ ಆಪತ್ತು: ಎರಡನೇ ಅಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಸ್ಟಿರಾಯ್ಡ್‌ ಔಷಧಿಗಳನ್ನು(Steroid Medicine) ಹೆಚ್ಚಿನ ಪ್ರಮಾಣದಲ್ಲಿ ನೀಡಿದ್ದು, ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣ. ಆದರೆ ಈ ಬಾರಿ ಸೋಂಕಿನ ಗಂಭೀರ ಪ್ರಕರಣಗಳು ಕಡಿಮೆ ಇರುವುದರಿಂದ ಸ್ಟಿರಾಯ್ಡ್‌ ಔಷಧಿಯ ಮೊರೆ ಹೋಗುವರ ಪ್ರಮಾಣವು ಕಡಿಮೆ ಇರಬಹುದು. ಆದರೆ ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್‌ ಔಷಧಿಯನ್ನು ಸೇವಿಸಬೇಡಿ ಎಂದು ಡಾ. ಅನೂಪ್‌ ನಾಯರ್‌ ಮನವಿ ಮಾಡುತ್ತಾರೆ.

120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಕೋವಿಡ್‌ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಬ್ಲ್ಯಾಕ್‌ ಫಂಗಸ್‌ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಮೇ 5, 2021ರಂದು ಬ್ಲ್ಯಾಕ್‌ ಫಂಗಸ್‌ ರೋಗಿಯು ಕಂಡು ಬಂದಿದ್ದು, ಸುಮಾರು 120ಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕೋವಿಡ್‌ ಸೋಂಕಿಗೆ ಒಳಗಾಗಿದ್ದ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದರು.

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಸ್ಟಿರಾಯ್ಡ್ ಬಳಕೆಯಿಂದ ರೋಗಿಗಳಲ್ಲಿ ಆಕ್ಸಿಜನ್ ಕುಸಿತ: ಸೌಮ್ಯ ರೋಗ ಲಕ್ಷಣ ಇರುವ ಕೊರೋನಾ ಸೋಂಕಿತರಲ್ಲೂ ಆಕ್ಸಿಜನ್‌ ಸ್ಯಾಚುರೇಷನ್‌ ಪ್ರಮಾಣ (ರಕ್ತದಲ್ಲಿನ ಆಮ್ಲಜನಕ) ಕುಸಿತವಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾಗುತ್ತಿರುವುದಕ್ಕೆ, ಅವರು ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್‌ಗಳನ್ನು ಸೇವಿಸುತ್ತಿರುವುದೂ ಕಾರಣವಾಗಿರಬಹುದು ಎಂದು ದೆಹಲಿಯ ಏಮ್ಸ್‌ ಆಸ್ಪತ್ರೆಯ ಮುಖ್ಯಸ್ಥ ರಣದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಕೊರೋನಾ ಸೋಂಕಿತರಿಗೆ ಸೂಕ್ತ ರೀತಿಯ ಔಷಧೋಪಚಾರದ ಬಗ್ಗೆ ಪ್ರತಿಪಾದಿಸಿರುವ ಗುಲೇರಿಯಾ, ಸ್ಟಿರಾಯ್ಡ್‌ ಬಳಕೆ ಮಾಡಿದ ರೋಗಿಗಳಲ್ಲಿ, ವೈರಸ್‌ ದ್ವಿಗುಣ ಪ್ರಮಾಣ ಹೆಚ್ಚಳವಿರುವ ಮತ್ತು ಅದರಿಂದಾಗಿ ಅವರ ದೇಹದಲ್ಲಿ ಆಮ್ಲಜನಕ ಮಟ್ಟಕುಸಿಯುತ್ತಿರುವ ಸಂಗತಿ ದೇಶದ ಹಲವು ಆಸ್ಪತ್ರೆಗಳಲ್ಲಿ ಕಂಡುಬಂದಿದೆ.

Follow Us:
Download App:
  • android
  • ios