ಆಕ್ಸಿಜನ್ ಸಪ್ಲೈಗೆ ಅಡ್ಡಿ ಮಾಡಿದ್ರೆ ನೇಣಿಗೆ ಹಾಕ್ತೀವಿ | ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ

ದೆಹಲಿ(ಏ.24): ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಯಾವುದೇ ಅಧಿಕಾರಿ ಆಮ್ಲಜನಕವನ್ನು ತೆಗೆದುಕೊಳ್ಳುವಲ್ಲಿ ಅಥವಾ ಸರಬರಾಜಿನಲ್ಲಿ ಅಡ್ಡಿ ಮಾಡಿದರೆ ನಾವು ಆ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ನ್ಯಾ.ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠದ, ಮಹಾರಾಜ ಅಗ್ರಸೆನ್ ಆಸ್ಪತ್ರೆಯಲ್ಲಿ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ಸಿಒವಿಐಡಿ ರೋಗಿಗಳಿಗೆ ಆಮ್ಲಜನಕದ ಕೊರತೆಯ ಕುರಿತು ಸಲ್ಲಿಕೆಯಾಗಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ರೀತಿ ಹೇಳಿದೆ.

ಎರಡನೇ ಡೋಸ್ ವ್ಯಾಕ್ಸೀನ್ ಮಿಸ್ ಮಾಡಿದ್ರೆ ಏನಾಗುತ್ತೆ ?

ಆಮ್ಲಜನಕ ಸರಬರಾಜಿಗೆ ಯಾರು ಅಡ್ಡಿಯಾಗಿದ್ದಾರೆ ಎಂಬುದನ್ನು ಹೇಳಿ. ನಾವು ಆ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ, ಆಮ್ಲಜನಕ ಸರಬಾರಜಿಗೆ ಅಡ್ಡಿ ಪಡಿಸಿದರೆ ನಾವು ಯಾರನ್ನೂ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಆಕ್ಸಿಜನ್ ತುಂಬಿ ಬರುತ್ತಿದ್ದ ಟ್ಯಾಂಕರ್ ಹಾಡಹಗಲೇ ಕಳ್ಳತನ

ಸ್ಥಳೀಯ ಆಡಳಿತದ ಅಂತಹ ಅಧಿಕಾರಿಗಳ ಬಗ್ಗೆ ಕೇಂದ್ರಕ್ಕೆ ತಿಳಿಸುವಂತೆ ನ್ಯಾಯಾಲಯ ದೆಹಲಿ ಸರ್ಕಾರಕ್ಕೆ ತಿಳಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ.