ಎರಡನೇ ಡೋಸ್ ವ್ಯಾಕ್ಸೀನ್ ಮಿಸ್ ಮಾಡಿದ್ರೆ ಏನಾಗುತ್ತೆ ?
ಒಂದನೇ ಡೋಸ್ ಕೊರೋನಾ ವ್ಯಾಕ್ಸಿನ್ ಹಾಕಿಸ್ಕೊಂಡಾಯ್ತಾ ? ಎರಡನೇ ಡೋಸ್ ಹಾಕಿಸಿಕೊಳ್ಳದಿದ್ರೆ ಏನು ಸಮಸ್ಯೆ ?
ರಾಜ್ಯಗಳಲ್ಲಿ COVID-19 ಲಸಿಕೆಯ ಕೊರತೆಯ ಬಗ್ಗೆ ಸುದ್ದಿ ಕೇಳಿದಾಗಿನಿಂದ ಮೊದಲ ಲಸಿಕೆ ತೆಗೆದುಕೊಂಡವರಲ್ಲಿ ಎರಡನೇ ಲಸಿಕೆ ಸಿಗದಿದ್ದರೆ ಎಂಬ ಭಯ ಶುರುವಾಗಿದೆ. ಇದು ಸಹಜವಾದದ್ದು.
ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಎರಡು ಲಸಿಕೆಗಳು - ಭಾರತ್ ಬಯೋಟೆಕ್ ತಯಾರಿಸಿದ ಕೋವಾಕ್ಸಿನ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ - ವಿಭಿನ್ನ ಡೋಸೇಜ್ ಮಧ್ಯಂತರಗಳನ್ನು ಹೊಂದಿವೆ. ಕೊವಾಕ್ಸಿನ್‌ಗೆ ಮೊದಲ ಮತ್ತು ಎರಡನೆಯ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾದರೆ, ಕೋವಿಶೀಲ್ಡ್‌ನ ಎರಡನೆಯ ಲಸಿಕೆಯನ್ನು ಮೊದಲ ನಂತರ ನಾಲ್ಕರಿಂದ ಎಂಟು ವಾರಗಳ ಅಂತದಲ್ಲಿ ತೆಗೆದುಕೊಳ್ಳಬೇಕೆಂದು ಹೇಳಲಾಗಿದೆ.
ಲ್ಯಾನ್ಸೆಟ್ ಎಂಬ ವೈದ್ಯಕೀಯ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಹೆಚ್ಚಿನ ಪರಿಣಾಮಕಾರಿಯಾಗಿದೆ. ಇದನ್ನು ಭಾರತದಲ್ಲಿ ಕೋವಿಶೀಲ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. 2 ವಾರಗಳ ಅಂತರದ ನಂತರ ಎರಡನೇ ಡೋಸ್ ನೀಡಲಾಗುತ್ತದೆ. ಈ ವಿಸ್ತೃತ ಅವಧಿಯನ್ನು ಮೀರಿ ನಿಮ್ಮ ಎರಡನೆಯ ಡೋಸ್ ಹೆಚ್ಚಿನ ಕಾಲ ತಪ್ಪಿಸಿಕೊಂಡರೆ ಏನಾಗುತ್ತದೆ?
ಎರಡನೆಯ ಡೋಸ್ ಮಿಸ್ ಮಾಡಿದರೆ ಇದು ನಿಮ್ಮನ್ನು ಕೊರೋನಾದಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ವೈರಾಲಜಿಸ್ಟ್ ಡಾ. ಜಾಕೋಬ್ ಜಾನ್ ಹೇಳಿದ್ದಾರೆ. ಇವರು ಈ ಹಿಂದೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಮುಖ್ಯಸ್ಥರಾಗಿದ್ದರು. ಒಂದನೇ ಡೋಸ್ ಔಷಧಿ ಪಡೆದು ಎರಡನೇ ಡೋಸ್ ಪಡೆಯದೆ ಸೋಂಕಿತರಾದರೆ ಇದು ಗಂಭೀರ ಪರಿಣಾಮ ಬೀರಬಹುದು ಎನ್ನಲಾಗಿದೆ.
ಸೂಕ್ತ ಚಿಕಿತ್ಸೆ ಸಿಗದೇ ಕೊರೋನಾಗೆ ಬಿಜೆಪಿ ಶಾಸಕ ಬಲಿ: ಪತ್ನಿ, ಪುತ್ರನ ಸ್ಥಿತಿ ಗಂಭೀರ
ಅದರ ಹಂತ 3 ಪ್ರಯೋಗಗಳ ಮಧ್ಯಂತರ ವಿಶ್ಲೇಷಣೆಯ ಪ್ರಕಾರ, ಕೊವಾಕ್ಸಿನ್ 78% ರಷ್ಟು ಪರಿಣಾಮಕಾರಿ ಆಗಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡರೆ ಭಾರತ್ ಬಯೋಟೆಕ್ ತೀವ್ರವಾದ COVID-19 ರೋಗದ ವಿರುದ್ಧದ ಪರಿಣಾಮಕಾರಿತ್ವವು 100% ಎಂದು ಹೇಳಿಕೊಂಡಿದೆ. ಕೋವಿಶೀಲ್ಡ್ ಕೊರೋನಾ ತೀವ್ರತೆ, ಸಾವಿನ ವಿರುದ್ಧ 100% ರಕ್ಷಣೆ ನೀಡುತ್ತದೆ ಎಂದಿದೆ. ಗಮನಿಸಬೇಕಾದ ವಿಚಾರ, ಇದು ಎರಡು ಡೋಸ್‌ಗಳ ನಂತರ ಪರಿಣಾಮಕಾರಿ.
ಸಿಂಗಲ್ ಡೋಸ್ ಬಲವಾದ ರೋಗನಿರೋಧಕ ಶಕ್ತಿಯನ್ನು ಉಂಟುಮಾಡುವುದಿಲ್ಲ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಮೊದಲ ಡೋಸ್ 30% ಜನರಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಿದರೆ, ಉಳಿದರವಲ್ಲಿ ದೊಡ್ಡ ಬದಲಾವಣೆ ತರುವುದಿಲ್ಲ ಎಂದು ಡಾ ಜಾಕೋಬ್ ಹೇಳಿದ್ದಾರೆ.
ಮುಟ್ಟಾಗಿದ್ದಾಗ ವ್ಯಾಕ್ಸೀನ್ ತಗೊಳ್ಬೋದಾ ?
ನಾವು ಛಾನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ, ನೀವು ಸರಿಯಾದ ಅಂತರದಲ್ಲಿ ಎರಡು ಡೋಸ್ ತೆಗೆದುಕೊಂಡಿರದಿದ್ದರೆ, ಮೊದಲ ಡೋಸ್ ಕಡೆಗಣಿಸಿ ಮತ್ತೆ ಮೊದಲ ಡೋಸ್ ಮತ್ತು ಎರಡನೇ ಡೋಸ್ ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ಇವರು.