ಪೂಲಿಂಗ್‌ ಸ್ಟೇಷನ್‌ನಲ್ಲಿ ಮುಸ್ಲಿಂ ಮಹಿಳೆಯರ ಬುರ್ಕಾ ತೆಗೆಸಿ ಐಡಿ ಚೆಕ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈದರಾಬಾದ್‌ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಕೇಸ್‌ ದಾಖಲಾಗಿದೆ. 

ಹೈದರಾಬಾದ್‌ (ಮೇ.13): ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳಾ ಮತದಾರರ ಬುರ್ಕಾ ತೆಗೆಸಿ ಐಡಿ ಚೆಕ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಇದರ ಬೆನ್ನಲ್ಲಿಯೇ ವಿವಾದ ಸೃಷ್ಟಿಯಾಗಿದ್ದು ಮಾಧವಿ ಲತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗ ಕೂಡ ಮಾಧಲಿ ಲತಾ ವಿರುದ್ಧ ಕೇಸ್‌ ದಾಖಲು ಮಾಡಿದೆ. ವೈರಲ್ ಆದ ವೀಡಿಯೊದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರಿಗೆ ತಮ್ಮ 'ನಿಖಾಬ್' ಅಥವಾ ಮುಖದ ಮುಸುಕನ್ನು ತೆಗೆದುಹಾಕುವಂತೆ ನಿರ್ದಿಷ್ಟವಾಗಿ ಕೇಳುತ್ತಿದ್ದಾರೆ. ಇದನ್ನು ತೆಗೆಯಿರಿ ಎಂದು ಮಾಧವಿ ಲತಾ ಮಹಿಳೆಯರಿಗೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ಮೂಲಕ ಅವರ ಐಡಿ ಕಾರ್ಡ್‌ಗಳನ್ನು ಚೆಕ್‌ ಮಾಡುವ ಇಂಗಿತವನ್ನು ಮಾಧವಿ ಲತಾ ವ್ಯಕ್ತಪಡಿಸಿದ್ದಾರೆ.

ಈ ವೋಟರ್‌ ಕಾರ್ಡ್‌ ಮಾಡಿಸಿಕೊಂಡು ಎಷ್ಟು ವರ್ಷವಾಯಿತು ಎಂದು ಮಾಧವಿ ಲತಾ ಮಹಿಳೆಯರಿಗೆ ಕೇಳಿದ್ದಾರೆ. ಹೆಚ್ಚುವರಿ ಪರಿಶೀಲನೆಗಾಗಿ ಅವರು ತಮ್ಮ ಆಧಾರ್ ಕಾರ್ಡ್‌ಗಳನ್ನು ಕೇಳಿದ್ದಾರೆ. ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಮಾಧವಿ ಲತಾ, "ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ, ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಅಭ್ಯರ್ಥಿಗೆ ಇದೆ" ಎಂದು ಹೇಳಿದರು. ಮುಸ್ಲಿಂ ಮಹಿಳೆಯರು ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನೂ ಕೂಡ ಮಹಿಳೆಯೇ ಆಗಿದ್ದೇನೆ ಎಂದು ಅವರು ಹೇಳಿದ್ದಾರೆ.

“ನಾನು ಪುರುಷನಲ್ಲ, ನಾನು ಮಹಿಳೆ ಮತ್ತು ತುಂಬಾ ವಿನಮ್ರತೆಯಿಂದ, ನಾನು ಅವರಿಗೆ ವಿನಂತಿಸಿದ್ದೇನೆ - ದಯವಿಟ್ಟು ನಾನು ಐಡಿ ಕಾರ್ಡ್‌ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ. ಯಾರಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಲು ಬಯಸಿದರೆ, ಅವರು ಹೆದರುತ್ತಿದ್ದಾರೆ ಎಂದು ಅರ್ಥ' ಎಂದು ಅವರು ಹೇಳಿದರು.

ಈ ವಿಡಿಯೋ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ, ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದ್ನ ಜಿಲ್ಲಾಧಿಕಾರಿ ಕೂಡ ಚುನಾವಣಾ ಆಯೋಗದ ಪರವಾಗಿ ಕೇಸ್‌ ದಾಖಲು ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ ಬೆಂಕಿ ಚೆಂಡು, ಯಾರಿವರು ಮಾಧವಿ ಲತಾ ಕೊಂಪೆಲ್ಲಾ?

ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯತ್ತ ಬಾಣ ಬಿಡುವ ಸನ್ನೆ ಮಾಡಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ ಹಿನ್ನಡೆಯನ್ನು ಎದುರಿಸಿದ್ದ ಲತಾಗೆ ಈ ಘಟನೆಯು ಮತ್ತೊಂದು ವಿವಾದಕ್ಕೆ ಎಡೆ ಮಾಡಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳನ್ನು ತಿಳಿಸುವ 295ಎ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ಮಾಧವಿ ಲತಾ ಅವರು ಹೈದರಾಬಾದ್‌ನ ಹಾಲಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ಬಿಆರ್‌ಎಸ್ ನಾಯಕ ಗದ್ದಂ ಶ್ರೀನಿವಾಸ್ ಯಾದವ್ ವಿರುದ್ಧ ಹೈಪ್ರೊಫೈಲ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.

BJP Hyderabad Candidate: ಓವೈಸಿ ವಿರುದ್ಧ ಹೋರಾಟಕ್ಕೆ ಮಾಧವಿ ಲತಾಗೆ ಮುಸ್ಲಿಂ ಹೆಣ್ಮಕ್ಕಳ ಬೆಂಬಲ!

Scroll to load tweet…