ನವದೆಹಲಿ(ಏ.21): ದೇಶಾದ್ಯಂತ ಕೊರೋನಾ ಪ್ರಕರಣಗಳು ಏರುತ್ತಿರುವ ನಡುವೆ ನೆಮ್ಮದಿಯ ವಿಚಾರವೊಂದು ಬಯಲಾಗಿದೆ. ಇಂಡಿಯನ್‌ ಕೌನ್ಸಿಲ್ ಆಫ್‌ ಮೆಡಿಕಲ್ ರಿಸರ್ಚ್(ICMR) ಅಧ್ಯಯನದಲ್ಲಿ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್, ರೂಪಾಂತರಗೊಳ್ಳುತ್ತಿರುವ ಕೊರೋನಾ ವೈರಸ್‌ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂಬುವುದು ಸಾಬಬೀತಾಗಿದೆ.

ICMR ಅನ್ವಯ ಈ ಲಸಿಕೆ ಕೊರೋನಾದ ಬ್ರಿಟನ್, ಬ್ರೆಜಿಲ್, ಹಾಗೂ ಆಫ್ರಿಕನ್ ವೇರಿಯಂಟ್‌ ಮಣಿಸುವಲ್ಲಿ ಪರಿಣಾಮಕಾರಿಯಾಗಿದೆ.  ಅಲ್ಲದೆ ಡಬಲ್ ರೂಪಾಂತರಿ ಕೊರೋನಾ ಅಪಾಯವನ್ನೂ ದೂರ ಮಾಡುತ್ತದೆ.

ಒಂದು ವರ್ಷದಲ್ಲಿ 70 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದೆ ಬಯೋಟೆಕ್

ಇನ್ನು ಭಾರತ್‌ ಬಯೋಟೆಕ್ ಲಸಿಕೆ ಉತ್ಪಾದನೆ ಕುರಿತು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಇದು ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿದೆ ಎಂದಿದೆ. ಕಂಪನಿಯನ್ವಯ ಒಂದು ವರ್ಷದಲ್ಲಿ ಇದು ಒಂದು ವರ್ಷದಲ್ಲಿ 70 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದೆ.

ಭಾರತದಲ್ಲಿ ಈವರೆಗೂ 13 ಕೋಟಿ ಮಂದಿಗೆ ಲಸಿಕೆ

ಭಾರತದಲ್ಲಿ ಈವರೆಗೆ ಒಟ್ಟು 13 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನು ಭಾರತ ಕೇವಲ 95 ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಿದೆ ಎಂಬುವುದು ಮತ್ತೊಂದು ಗಮನಾರ್ಹ ವಿಚಾರ. ಅಮೆರಿಕದಲ್ಲಿ 13 ಡೋಸ್ ಲಸಿಕೆ ನೀಡಲು 101 ದಿನಗಳು ತಗುಲಿತ್ತು. ಚೀನಾದಲ್ಲಿ 109 ದಿನಗಳು ತಗುಲಿತ್ತು. 

ಕೊರೋನಾ ವೈರಸ್‌ ಅಂಕಿ ಅಂಶ, ಲಸಿಕೆ ಅಭಿಯಾನ ಹಾಗೂ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ