ಆರೋಗ್ಯವಂತ ವ್ಯಕ್ತಿಗಳು ಅತ್ಯವಶ್ಯ ಕಾರ್ಯಗಳಿಗಾಗಿ ಅಂತಾರಾಜ್ಯ ಪ್ರಯಾಣ| ಆರೋಗ್ಯವಂತರಿಗೆ ಅಂತಾರಾಜ್ಯ ಪ್ರಯಾಣದ ವೇಳೆ ಆರ್‌ಟಿಪಿಸಿಆರ್‌ ಕಡ್ಡಾಯ ಬೇಡ

ನವದೆಹಲಿ(ಮೇ.05): ಆರೋಗ್ಯವಂತ ವ್ಯಕ್ತಿಗಳು ಅತ್ಯವಶ್ಯ ಕಾರ್ಯಗಳಿಗಾಗಿ ಅಂತಾರಾಜ್ಯ ಪ್ರಯಾಣ ಮಾಡುವ ವೇಳೆ ಅವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯ ಮಾಡುವುದು ಬೇಡ ಎಂದು ಕೇಂದ್ರ ಸರ್ಕಾರ ಹೊಸ ಕೊರೋನಾ ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ, ಪ್ರಯೋಗಾಲಯಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಹೊಸ ಮಾರ್ಗಸೂಚಿಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

"

ಹೊಸ ಮಾರ್ಗಸೂಚಿ ಅನ್ವಯ

- ಈ ಹಿಂದೆ ಕೋವಿಡ್‌ ಸೋಂಕಿತರಾಗಿದ್ದವರಿಗೆ ಮರಳಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯ ಬೇಡ

- ಆರೋಗ್ಯವಂತರು ಅಂತಾರಾಜ್ಯ ಪ್ರಯಾಣ ಕೈಗೊಂಡಾಗ ಅವರಿಗೆ ಆರ್‌ಟಿ-ಪಿಸಿಆರ್‌ ಕಡ್ಡಾಯ ಬೇಡ

- ಸೋಂಕಿನ ಲಕ್ಷಣ ಹೊಂದಿದವವರು ತೀರಾ ಅಗತ್ಯವಿಲ್ಲದ ಹೊರತೂ ಅಂತಾರಾಜ್ಯ ಪ್ರಯಾಣ ಮಾಡಬಾರದು

- ಸೋಂಕಿನ ಲಕ್ಷಣ ಹೊಂದಿಲ್ಲದೇ ಇರುವವರು ಅಗತ್ಯ ಸೇವೆಗಾಗಿ ಪ್ರಯಾಣ ಕೈಗೊಂಡರೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona