ಜನವರಿ 15 ರಂದು ಚಂದಾ ಕೊಚ್ಚರ್‌ ಅವರ ಪುತ್ರನ ವಿವಾಹ ನಿಗದಿಯಾಗಿದೆ. ಅದಕ್ಕೂ ಮುನ್ನವೇ ಅವರು ಜೈಲಿನಿಂದ ಹೊರಬಂದಿದ್ದಾರೆ. 

ನವದೆಹಲಿ (ಜ.10): ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚರ್‌ ಅವರ ಬಂಧನವನ್ನು ಕಾನೂನು ಬಾಹಿರ ಎಂದು ಬಾಂಬೈ ಹೈಕೋರ್ಟ್‌ ಆದೇಶ ನೀಡಿದ ಒಂದು ದಿನದ ಬಳಿಕ, ಚಂದಾ ಕೊಚ್ಚರ್‌ ಹಾಗೂ ಅವರ ಪತಿ ಮಂಗಳವಾರ ಜೈಲಿನಿಂದ ಹೊರಬಂದಿದ್ದಾರೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್‌ ಆಗಿರುವ ಐಸಿಐಸಿಐನ ಮುಖ್ಯಸ್ಥರಾಗಿದ್ದ ವೇಳೆ ವಿಡಿಯೋಕಾನ್‌ ಗ್ರೂಪ್‌ಗೆ ನೀಡಿದ 3 ಸಾವಿರ ಕೋಟಿ ರೂಪಾಯಿಯ ಸಾಲದಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ತನಿಖೆ ನಡೆಸಿದ್ದ ಸಿಬಿಐ ಡಿಸೆಂಬರ್‌ 23 ರಂದು ಚಂದಾ ಕೊಚ್ಚಾರ್‌ ಹಾಗೂ ಅವರ ಪತಿ ದೀಪಕ್‌ ಕೊಚ್ಚರ್‌ ಅವರನ್ನು ಬಂಧನ ಮಾಡಿತ್ತು. ಜನವರಿ 15ರಂದು ನಿಗದಿಯಾಗಿರುವ ಪುತ್ರನ ವಿವಾಹ ಸಮಾರಂಭಕ್ಕೂ ಮುನ್ನವೇ ಚಂದಾ ಕೊಚ್ಚರ್‌ ಹಾಗೂ ದೀಪಕ್‌ ಕೊಚ್ಚರ್‌ ಜೈಲಿನಿಂದ ಹೊರಬಂದು ನಿರಾಳರಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ನಾಲ್ಕು ವರ್ಷಗಳ ನಂತರ ದಂಪತಿಯನ್ನು ಬಂಧಿಸಲು ಕಾರಣವನ್ನು ಬಂಧನ ಮೆಮೊಗಳಲ್ಲಿ ಕಡ್ಡಾಯವಾಗಿ ನಮೂದಿಸಲಾಗಿಲ್ಲ ಎಂದು ನ್ಯಾಯಾಲಯ ಸೋಮವಾರ ಹೇಳಿತ್ತು "ಬಂಧನ ಮೆಮೊಗಳಲ್ಲಿ ಉಲ್ಲೇಖಿಸಲಾದ ಅರ್ಜಿದಾರರ ಬಂಧನಕ್ಕೆ ಆಧಾರವು ಕಡ್ಡಾಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಅದು ತಿಳಿಸಿತ್ತು. ‘ಆರೋಪಿ ತಪ್ಪೊಪ್ಪಿಕೊಳ್ಳದ ಮಾತ್ರಕ್ಕೆ ಆರೋಪಿಗಳು ತನಿಖೆಗೆ ಸಹಕರಿಸಿಲ್ಲ ಎಂದು ಹೇಳಲಾಗದು ಎಂದೂ ಹೈಕೋರ್ಟ್ ಹೇಳಿದೆ.

ICICI Bank Fraud Case: ಬಂಧಿತರಾಗಿದ್ದ ಚಂದಾ ಕೊಚ್ಚರ್‌, ಪತಿ ಬಿಡುಗಡೆಗೆ ಬಾಂಬೆ ಹೈ ಆದೇಶ

ಭ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಅವರ ಬಂಧನ ಕಾನೂನುಬಾಹಿರವಾಗಿದೆ, ತನಿಖೆಯನ್ನು ಪ್ರಾರಂಭಿಸಲು ಕಾಯಿದೆಯ ಸೆಕ್ಷನ್ 17 ಎ ಅಡಿಯಲ್ಲಿ ಅನುಮತಿ ಕಡ್ಡಾಯವಾಗಿದೆ ಮತ್ತು ಈ ತನಿಖೆಯನ್ನು ಪ್ರಾರಂಭಿಸಲು ಸಂಸ್ಥೆಯು ಅಂತಹ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಕೊಚ್ಚರ್‌ಗಳು ಈ ಹಿಂದೆ ನ್ಯಾಯಾಲಯದ ಮುಂದೆ ವಾದಿಸಿದ್ದರು.

ಸಾಲ ಹಗರಣ: ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯಸ್ಥೆ ಚಂದಾ ಕೋಚರ್‌, ಪತಿ ದೀಪಕ್‌ ಸೆರೆ

ಐಸಿಐಸಿಐ ಸಾಲ ಪ್ರಕರಣದಲ್ಲಿ ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರನ್ನೂ ಸಿಬಿಐ ಬಂಧಿಸಿತ್ತು. ಪ್ರಕರಣದ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಚಂದಾ ಕೊಚ್ಚರ್ ತಿರಸ್ಕರಿಸಿದ್ದಾರೆ.