Asianet Suvarna News Asianet Suvarna News

ವಿಶ್ವಕಪ್‌ ಸೆಮಿಫೈನಲ್‌ ಎಫೆಕ್ಟ್‌: ಮಧ್ಯಾಹ್ನದ ನಂತ್ರ ಕೋರ್ಟ್‌ ಕಲಾಪವೇ ಬಂದ್‌!

ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯ ಕುತೂಹಲ ಮೂಡಿಸಿದೆ. ಇಂಗ್ಲೆಂಡ್‌ ಗೆಲುವಿಗೆ 169 ರನ್‌ಗಳ ಟಾರ್ಗೆಟ್‌ ನೀಡಿದೆ ಭಾರತ. ಭಾರತದಲ್ಲಿ ಸೆಮಿಫೈನಲ್‌ ಜೋಶ್‌ ಎಷ್ಟರ ಮಟ್ಟಿಗೆ ಇದೆ ಎಂದರೆ, ಮಧ್ಯಾಹ್ನದ ನಂತರ ಪಂದ್ಯ ವೀಕ್ಷಣೆಗಾಗಿ ಕೋರ್ಟ್‌ ಕಲಾಪವನ್ನೇ ಬಂದ್‌ ಮಾಡಲಾಗಿದೆ.

ICC T20 World Cup India England Semifinal effect Patiala District Bar Association observe No work after Lunch san
Author
First Published Nov 10, 2022, 3:27 PM IST

ಪಟಿಯಾಲ (ನ.10): ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಕ್ರೇಜ್‌ ಬಹುಶಃ ಮತ್ತೆ ಯಾವುದೇ ಕ್ರೀಡೆಗೂ ಸಿಗೋದಿಲ್ಲ. ಸಿಗೋಕೆ ಸಾಧ್ಯವೂ ಇಲ್ಲ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯದ ಸೂಪರ್‌ ಆಗಿ ನಡೆಯುತ್ತಿದೆ. ಆದರೆ, ಪಟಿಯಾಲಾದಲ್ಲಿ ಸೆಮಿಫೈನಲ್‌ ಪಂದ್ಯ ನೋಡುವ ಸಲುವಾಗಿಯೇ ಮಧ್ಯಾಹ್ನದ ನಂತರದ ಕೋರ್ಟ್‌ ಕಲಾಪಗಳನ್ನೇ ರದ್ದು ಮಾಡಲಾಗಿದೆ. ಪಟಿಯಾಲಾದ ಜಿಲ್ಲಾ ವಕೀಲರ ಸಂಘವು (ಡಿಬಿಎ) ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್‌ನ ಸೆಮಿಫೈನಲ್ ಕ್ರಿಕೆಟ್ ಪಂದ್ಯದ ದೃಷ್ಟಿಯಿಂದ ಪಟಿಯಾಲಾದ ಜಿಲ್ಲಾ ನ್ಯಾಯಾಲಯದಲ್ಲಿ ಮಧ್ಯಾಹ್ನ 1.30ರ ನಂತರ ನೋ ವರ್ಕ್‌ ಆಫ್ಟರ್‌ ಲಂಚ್‌ ಅಂದರೆ ಭೋಜನದ ಬಳಿಕ ಕೆಲಸವಿಲ್ಲ ಎನ್ನುವ ನಿರ್ಣಯವನ್ನು ಅಂಗೀಕರಿಸಿತು.

"ಇಂದು ಕಾರ್ಯಕಾರಿಣಿಯ ತುರ್ತು ಸಭೆಯನ್ನು ಕರೆಯಲಾಯಿತು ಮತ್ತು ಅಡ್ವೋಕೇಟ್‌ ಜತೀಂದರ್ ಪಾಲ್ ಸಿಂಗ್ ಘುಮಾನ್ ಅವರ ಅಧ್ಯಕ್ಷತೆಯಲ್ಲಿ ಇದನ್ನು ನಡೆಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ನಡುವಿನ T20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಇಂದು ಅಂದರೆ 10/11/2022 ರಂದು ಸುಮಾರು 1:30 PM ಕ್ಕೆ ನಡೆಯಲಿದೆ. ಆದ್ದರಿಂದ ಪಟಿಯಾಲದ ಜಿಲ್ಲಾ ನ್ಯಾಯಾಲಯಗಳಲ್ಲಿ ಮಧ್ಯಾಹ್ನದ ಊಟದ ನಂತರ, ಪಟಿಯಾಲಾದ ಜಿಲ್ಲಾ ವಕೀಲರ ಸಂಘ ಯಾವುದೇ ಕೆಲಸವನ್ನು ಮಾಡೋದಿಲ್ಲ ಎಂದು ನಿರ್ಧರಿಸಲಾಗಿದೆ," ಎಂದು ಡಿಬಿಎ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದ್ದರಿಂದ, ಇಂದು ಪಟ್ಟಿ ಮಾಡಲಾದ ವಿಷಯಗಳನ್ನು ಇತರ ಕೆಲವು ದಿನಾಂಕಗಳಿಗೆ ಮುಂದೂಡಲು ಎಲ್ಲಾ ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ವಕೀಲರ ಸಂಘ ವಿನಂತಿ ಮಾಡಿದೆ.

T20 WORLD CUP ಕೊಹ್ಲಿ-ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್, ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಭಾರತ..!

"ಎಲ್ಲಾ ಗೌರವಾನ್ವಿತ ನ್ಯಾಯಾಂಗ ಅಧಿಕಾರಿಗಳು, ಕಂದಾಯ ನ್ಯಾಯಾಲಯಗಳು, ನ್ಯಾಯಮಂಡಳಿಗಳ ಅಧ್ಯಕ್ಷರು, ಕಮಿಷನರ್ ನ್ಯಾಯಾಲಯಗಳು ಇಂದು ಪಟ್ಟಿ ಮಾಡಲಾದ ವಿಷಯಗಳನ್ನು ಇತರ ಕೆಲವು ದಿನಾಂಕಗಳಿಗೆ ಮುಂದೂಡಲು ವಿನಂತಿಸಲಾಗಿದೆ" ಎಂದು ನೋಟಿಸ್ ತಿಳಿಸಿದೆ.

Virat Kohli, Suryakumar Yadav ಇಬ್ಬರಿಗೂ ಇಲ್ಲ ರಿಷಬ್‌ ಪಂತ್‌ ಡ್ರೀಮ್‌ ಟಿ20 ತಂಡದಲ್ಲಿ ಸ್ಥಾನ

ದಾಖಲೆ ಬರೆದ ವಿರಾಟ್‌ ಕೊಹ್ಲಿ: ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 4,000 ರನ್ ಪೂರೈಸಿದ ಇತಿಹಾಸದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಪಾತ್ರರಾಗಿದ್ದಾರೆ. ಪುರುಷರ T20 ವಿಶ್ವಕಪ್‌ಗಳಲ್ಲಿ ಭರ್ಜರಿಯಾ ಮಿಂಚಿರುವ ವಿರಾಟ್‌ ಕೊಹ್ಲಿಗೆ 4 ಸಾವಿರ ಟಿ20 ಅಂತಾರಾಷ್ಟ್ರೀಯ ರನ್‌ ಪೂರೈಸಲು 42 ರನ್‌ ಬೇಕಿತ್ತು. ಭಾರತದ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಅವರು 2014 ಮತ್ತು 2016 ರ ಟಿ20 ವಿಶ್ವಕಪ್‌ಗಳಲ್ಲಿ ಟೂರ್ನಮೆಂಟ್‌ನ ಶ್ರೇಷ್ಠ ಆಟಗಾರ ಎಂದು ಗುರುತಿಸಲ್ಪಟ್ಟಿದ್ದರು. ಟಿ20ಯಲ್ಲಿ ಪ್ರಸ್ತುತ ವಿರಾಟ್‌ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ 140 ಇದ್ದು, 50ಕ್ಕೂ ಅಧಿಕ ಸರಾಸರಿ ಹೊಂದಿದ್ದಾರೆ.

Follow Us:
Download App:
  • android
  • ios