ಕಂದಹಾರ್ ವಿಮಾನ ಅಪಹರಣದ ಚಿತ್ರದಲ್ಲಿ ಉಗ್ರರಿಗೆ ಮುಸ್ಲಿಂ ಹೆಸರಿಗೆ ಬದಲು ಹಿಂದೂ ಹೆಸರು ವಿವಾದ

1999ರಲ್ಲಿ ತಾಲಿಬಾನ್‌ ಉಗ್ರರು ನಡೆಸಿದ್ದಏರಿಂಡಿಯಾ ವಿಮಾನ ಅಪಹರಣದ ಕಥಾಹಂದರ ಹೊಂದಿರುವ ಇತ್ತೀಚೆಗೆ ನೆಟ್‌ಪ್ಲಿಕ್ಸ್ ನಲ್ಲಿ ಬಿಡುಗಡೆಯಾದ 'ಐಸಿ 814' ಚಿತ್ರವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

IC814 the Kandahar Hijack movie Controversy Hindu name to terrorist instead of Muslim Name akb

ನವದೆಹಲಿ: 1999ರಲ್ಲಿ ತಾಲಿಬಾನ್‌ ಉಗ್ರರು ನಡೆಸಿದ್ದಏರಿಂಡಿಯಾ ವಿಮಾನ ಅಪಹರಣದ ಕಥಾಹಂದರ ಹೊಂದಿರುವ ಇತ್ತೀಚೆಗೆ ನೆಟ್‌ಪ್ಲಿಕ್ಸ್ ನಲ್ಲಿ ಬಿಡುಗಡೆಯಾದ 'ಐಸಿ 814' ಚಿತ್ರವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಮಾನ ಅಪಹರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಉಗ್ರರ ಹೆಸರನ್ನು ಚಿತ್ರದಲ್ಲಿ ಹಿಂದೂಗಳ ಹೆಸರಿಗೆ ಬದಲಾಯಿಸಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಚಿತ್ರವನ್ನು ಬಹಿಷ್ಕರಿಸಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ.

ಏನಿದು ವಿವಾದ?: ಭಾರತದಲ್ಲಿ ಜೈಲಿನ ಬಂಧಿತನಾಗಿರುವ ತಮ್ಮ ಸಹಚರರ ಬಿಡುಗಡೆಗಾಗಿ ತಾಲಿಬಾನ್ ಉಗ್ರರು ಕಾಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ 154 ಜನರಿದ್ದ 'ಐಸಿ IC814 ವಿಮಾನವನ್ನು ಆಫ್ಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದರು. ಈ ಕೃತ್ಯದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌, ಸನ್ನಿ ಅಹ್ಮದ್‌ ಖಾಜಿ, ಜಹೂರ್ ಮಿಸ್ತ್ರಿ ಮತ್ತು ಶಾಖೀ‌ರ್ ಭಾಗಿಯಾಗಿದ್ದರು. ಬಳಿಕ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆಮಾಡಿ, ಅಪಹೃತರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲಾಗಿತ್ತು.

ಪಾಕ್‌ನಲ್ಲಿ ಕಂದಹಾರ್‌ ವಿಮಾನ ಹೈಜಾಕ್‌ ರೂವಾರಿ, ಉಗ್ರ ಮಸೂದ್ ಅಜರ್ ಹತ್ಯೆ: ದಟ್ಟ ವದಂತಿ

ಇದೇಕಥೆ ಆಧರಿಸಿ ಅನುಭವ್‌ ಸಿನ್ಹಾ 'ಐಸಿ 814 ' ಎಂಬ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ 814' ಉಗ್ರರ ಹೆಸರನ್ನು ಭೋಲಾ, ಶಂಕರ್, ಡಾಕ್ಟರ್, ಬರ್ಗರ್, ಚೀಫ್ ಎಂದು ಹೆಸರಿಸಲಾಗಿದೆ. ಇದು ಮುಸ್ಲಿಂ ಉಗ್ರರಿಗೆ ಕ್ಲೀನ್‌ಚಿಟ್ ನೀಡುವ ಯತ್ನ. ಹೀಗಾಗಿ ಚಿತ್ರ ಬಹಿಷ್ಕರಿಸಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ. ಆದರೆ ಚಿತ್ರತಂಡ ಮಾತ್ರ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಉಗ್ರರು ತಮ್ಮ ತಮ್ಮ ನಡುವೆ ಸಂಭಾಷಣೆಗಾಗಿ ಈ ಹಿಂದೂ ಹೆಸರುಗಳನ್ನು ಕೋಡ್ ನೇಮ್ ಆಗಿ ಬಳಸುತ್ತಿದ್ದರು ಎಂದು ಸ್ಪಷ್ಟನೆ ನೀಡಿದೆ.

ಶ್ರೀಮಂತ ಹಿನ್ನೆಲೆಯಿಂದ ಬಂದ್ರು ತಿನ್ನಲು ದುಡ್ಡಿಲ್ಲದ ಸ್ಥಿತಿ ತಲುಪಿದ್ದು ಹೇಗೆ: ಕಷ್ಟದ ದಿನಗಳ ನೆನೆದ ವಿಜಯ್ ವರ್ಮಾ

Latest Videos
Follow Us:
Download App:
  • android
  • ios