Asianet Suvarna News Asianet Suvarna News

ಐಬಿ, ನೀತಿ ಆಯೋಗಕ್ಕೆ ಹೊಸ ಚೀಫ್, RAW ಕಾರ್ಯದರ್ಶಿ ಅವಧಿ ಇನ್ನೊಂದು ವರ್ಷ ವಿಸ್ತರಣೆ!

ದೇಶದ ಪ್ರಮುಖ ಆಂತರಿಕ ಭದ್ರತಾ ಸಂಸ್ಥೆಯಾದ ಐಬಿ, ಸರ್ಕಾರದ ನೀತಿ ನಿಯಮಾವಳಿ ರೂಪಿಸುವ ಸಂಸ್ಥೆಯಾದ ನೀತಿ ಆಯೋಗಕ್ಕೆ ಕೇಂದ್ರ ಸರ್ಕಾರ ಹೊಸ ಮುಖ್ಯಸ್ಥರನ್ನು ನೇಮಕ ಮಾಡಿದೆ. ಅದರೊಂದಿಗೆ ಭಾರತದ ವಿದೇಶಿ ಗುಪ್ತಚರ ವಿಭಾಗ, ರಾ (RAW) ಕಾರ್ಯದರ್ಶಿಯ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ.
 

IB and NITI Aayog gets New Chiefs RAW Secretary Samant Kumar Goel gets 1 year extension Parameswaran Iyer Tapan Deka san
Author
Bengaluru, First Published Jun 24, 2022, 5:05 PM IST

ನವದೆಹಲಿ (ಜೂನ್ 24): ಸೇವಾ ಹಿರಿತನಕ್ಕಿಂತ ಅರ್ಹತೆ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯದ ಮೇಲೆ ಹೆಚ್ಚಿನ ಗಮನ ನೀಡಿದ ನರೇಂದ್ರ ಮೋದಿ (PM Narendra Modi) ಸರ್ಕಾರ ತಪನ್ ದೇಕಾ (Tapan Deka) ಅವರನ್ನು ದೇಶದ ಆಂತರಿಕ ಗುಪ್ತಚರ ವಿಭಾಗ ಇಂಟಲಿಜೆನ್ಸ್ ಬ್ಯೂರೋದ (Intelligence Bureau ) ಹೊಸ ನಿರ್ದೇಶಕರನ್ನಾಗಿ (Director ) ನೇಮಕ ಮಾಡಿದೆ. ಅದರೊಂದಿಗೆ ವಿದೇಶದ ಗುಪ್ತಚರ ವಿಭಾಗ ರಾ (RAW) ಕಾರ್ಯದರ್ಶಿಯಾಗಿದ್ದ ಸಮಂತ್ ಕುಮಾರ್ ಗೋಯೆಲ್ (Samant Kumar Goel ) ಅವರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡಿದೆ.

ಇದರ ನಡುವೆ ಸರ್ಕಾರದ ನೀತಿ ನಿಯಮಾವಳಿಗಳನ್ನು ರೂಪಿಸುವ ಪ್ರಮುಖ ಸಂಸ್ಥೆಯಾಗಿರುವ ನೀತಿ ಆಯೋಗದ (NITI Ayog) ಮುಖ್ಯಸ್ಥರಾಗಿ ಪರಮೇಶ್ವರನ್ ಅಯ್ಯರ್‌ (Parameswaran Iyer) ಅವರನ್ನು ನೇಮಕ ಮಾಡಲಾಗಿದೆ. ಐಎಎಸ್ ಅಧಿಕಾರಿ ಪರಮೇಶ್ವರನ್ ಅಯ್ಯರ್ ಅವರನ್ನು ನೀತಿ ಆಯೋಗ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಶುಕ್ರವಾರ ನೇಮಿಸಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇವರ ನೇಮಕಾತಿಯನ್ನು ಪ್ರಕಟಿಸಿದೆ. ಅವರು ಎರಡು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿರುತ್ತಾರೆ. ಪ್ರಸ್ತುತ ಸಿಇಒ ಅಮಿತಾಭ್ ಕಾಂತ್ ಅವರ ಅಧಿಕಾರಾವಧಿಯು 2022ರ ಜೂನ್ 30 ರಂದು ಪೂರ್ಣಗೊಂಡ ನಂತರ ಅಯ್ಯರ್ ಅವರ ಅಧಿಕಾರಾವಧಿಯು ಪ್ರಾರಂಭವಾಗುತ್ತದೆ.

ಐಬಿಗೆ ತಪನ್‌ ದೇಕಾ ಚೀಫ್: ತಪನ್ ದೇಕಾ ಅವರು ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋದ ಆಪರೇಷನ್ ಡೆಸ್ಕ್‌ನ ಮುಖ್ಯಸ್ಥರಾಗಿದ್ದಾರೆ ಮತ್ತು ಕಳೆದ ಎರಡು ದಶಕಗಳಿಂದ ಭಯೋತ್ಪಾದಕರು ಮತ್ತು ಧಾರ್ಮಿಕ ಮೂಲಭೂತವಾದವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗಮನಾರ್ಹವಾದ ಕೆಲಸ ಮಾಡಿದ್ದಾರೆ. 1988 ರ ಬ್ಯಾಚ್‌ನ ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ ದೇಕಾ ಅವರು ಪ್ರಮುಖವಾಗಿ ಈಶಾನ್ಯ ರಾಜ್ಯಗಳ ವ್ಯವಹಾರಗಳಲ್ಲಿ ಪರಿಣಿತರಾಗಿದ್ದಾರೆ ಮತ್ತು 2019 ರಲ್ಲಿ ಸಿಎಎ ವಿರೋಧಿ ಹಿಂಸಾಚಾರ ಭುಗಿಲೆದ್ದ ನಂತರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂಗೆ ಕಳುಹಿಸಿದ್ದರು. ತಪನ್ ದೇಕಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಸರ್ಕಾರ ಗುಪ್ತಚರ ಸಂಸ್ಥೆಗೆ ಹೆಚ್ಚಿನ ಬಲವನ್ನು ಸೇರಿಸುವ ಸೇರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸೇವಾ ಹಿರಿತನದಲ್ಲಿ ನಾಲ್ವರು ಅಧಿಕಾರಿಗಳನ್ನು ಮೀರಿಸಿ ತಪನ್ ದೇಕಾ ಐಬಿ ಮುಖ್ಯಸ್ಥರಾಗಿದ್ದಾರೆ.

ಶಾಂತ ವ್ಯಕ್ತಿತ್ವದ ದೇಕಾ ಇಂಡಿಯನ್ ಮುಜಾಹಿದ್ದೀನ್ ಗುಂಪಿನ ಬೆನ್ನು ಮೂಳೆ ಮುರಿದ ವ್ಯಕ್ತಿ ಎನಿಸಿಕೊಂಡಿದ್ದಾರೆ ಅದರೊಂದಿಗೆ 26/11 ದಾಳಿಯ ತನಿಖೆ ನಡೆಸಿದ ವ್ಯಕ್ತಿಯಾಗಿದ್ದಾರೆ. ಅವರು ಕಳೆದ ಎರಡು ದಶಕಗಳಿಂದ ಇಸ್ಲಾಮಿಕ್ ಮೂಲಭೂತವಾದವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಹಾಗಿದ್ದರೂ ಇಂದಿಗೂ ಅಸ್ಸಾಂನಲ್ಲಿ ತಮ್ಮ ಲಿಂಕ್ ಹಾಗೂ ಮೂಲವನ್ನು ಬಲವಾಗಿ ಹೊಂದಿದ್ದಾರೆ.  ವಿನಮ್ರ ಹಿನ್ನೆಲೆಯಿಂದ ಬಂದಿರುವ ದೇಕಾ ಅವರು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಜಿಹಾದಿಗಳಿಂದ ಕೇರಳದ PFI ವರೆಗೆ ದೇಶದಲ್ಲಿ ಭಯೋತ್ಪಾದನೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದಾರೆ.

ರಾ ಚೀಫ್ ಅವಧಿ ವಿಸ್ತರಣೆ:   ಭಾರತದ ಬಾಹ್ಯ ಏಜೆನ್ಸಿಯ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಹೊಣೆಗಾರಿಕೆಯನ್ನು ನಿರ್ಮಿಸಲು ಶ್ರಮಿಸಿದ ಕಾರಣಕ್ಕಾಗಿ ಆರ್&ಎಡಬ್ಲ್ಯು ಅಥವಾ ಪ್ರಸಿದ್ಧವಾಗಿ ರಾ ಎಂದು ಕರೆಸಿಕೊಳ್ಳುವ ಸಂಸ್ಥೆಯ ಕಾರ್ಯದರ್ಶಿ ಸಮಂತ್ ಗೋಯೆಲ್ ಗೆ 2ನೇ ಬಾರಿಗೆ ವಿಸ್ತರಣೆ ನೀಡಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವ್ಯವಹಾರದ ನುರಿತರಾಗಿರುವ ಸಮಂತ್, ಪಂಜಾಬ್ ಕೆಡರ್ ಅಧಿಕಾರಿ. ಈವರೆಗೂ ಅವರು ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇಬ್ಬರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.

ನೀತಿ ಆಯೋಗದ ರಫ್ತು ಸನ್ನದ್ಧತೆ ಸೂಚ್ಯಂಕ ಬಿಡುಗಡೆ: ದೇಶಕ್ಕೇ ಕರ್ನಾಟಕ ನಂ.3

ಗೋಯೆಲ್ ಮತ್ತು ದೇಕಾ ಇಬ್ಬರೂ ಹಾರ್ಡ್‌ಕೋರ್ ಆಪರೇಷನ್ ವ್ಯಕ್ತಿಗಳಾಗಿರುವ ಕಾರಣ ಮೋದಿ ಸರ್ಕಾರವು ಎರಡು ಏಜೆನ್ಸಿಗಳು ಒಂದೇ ಪುಟದಲ್ಲಿ ಬರಲು ಮತ್ತು ಒಟ್ಟಾಗಿ ಕಾರ್ಯನಿರ್ವಹಿಸಲು ವೇದಿಕೆಯನ್ನು ಸಿದ್ಧಪಡಿಸಿದೆ ಏಕೆಂದರೆ ಭಾರತೀಯ ನೆರೆಹೊರೆಯು ಒಳಗೆ ವಿಧ್ವಂಸಕರೊಂದಿಗೆ ಎಂದಿಗೂ ಕೊನೆಗೊಳ್ಳದ ಸವಾಲಾಗಿದೆ.

ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಸಂಚು, ಗುಪ್ತಚರ ವಿಭಾಗದ ಎಚ್ಚರಿಕೆ!

ನೀತಿ ಆಯೋಗದ ಮೂರನೇ ಅಧ್ಯಕ್ಷ ಪರಮೇಶ್ವರನ್ ಅಯ್ಯರ್:
1981ರ ಯುಪಿ ಕೆಡರ್ ಐಎಎಸ್ ಅಧಿಕಾರಿಯಾಗಿರುವ ಪರಮೇಶ್ವರನ್ ಅಯ್ಯರ್, ನೀತಿ ಅಯೋಗದ ಮೂರನೇ ಸಿಇಓ ಆಗಲಿದ್ದಾರೆ.  ಶ್ರೀನಗರದಲ್ಲಿ ಜನಿಸಿದ ಅಯ್ಯರ್ ಅವರು ಡೆಹ್ರಾಡೂನ್‌ನ ಡೂನ್ ಶಾಲೆಯಲ್ಲಿ ಕಲಿತವರು, ನಂತರ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ಬಳಿಕ ಅವರು ಯುಎಸ್ಎಯ ಉತ್ತರ ಕೆರೊಲಿನಾದ ಡೇವಿಡ್ಸನ್ ಕಾಲೇಜಿನಲ್ಲಿ ಒಂದು ವರ್ಷದ ವಿದ್ಯಾರ್ಥಿ ವೇತನ ಪಡೆದು ಓದಿದ್ದರು. 1981ರಲ್ಲಿ ನಾಗರೀಕ ಸೇವೆಗಳಿಗೆ ಸೇರಿದ್ದ ಅಯ್ಯರ್, 2009ರಲ್ಲಿ  ವಿಶ್ವ ಬ್ಯಾಂಕ್‌ನಲ್ಲಿ ನೀರು ಮತ್ತು ನೈರ್ಮಲ್ಯ ಉಪಕ್ರಮ ಕಾರ್ಯಕ್ರಮಕ್ಕೆ ಸೇರಲು ಸ್ವಯಂ ನಿವೃತ್ತಿ ಪಡೆದಿದ್ದರು. 2016 ರಲ್ಲಿ, ಬಯಲು ಶೌಚವನ್ನು ತೊಡೆದುಹಾಕಲು ಮತ್ತು ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ದೇಶಾದ್ಯಂತ ಸ್ವಚ್ಛತಾ ಅಭಿಯಾನವಾದ ಸ್ವಚ್ಛ ಭಾರತ್ ಮಿಷನ್ ಅನ್ನು ಜಾರಿಗೆ ತರಲು ಅಯ್ಯರ್ ಅವರನ್ನು ಭಾರತ ಸರ್ಕಾರ ನೇಮಿಸಿತು. 2020 ರಲ್ಲಿ, ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಮತ್ತೆ ವಿಶ್ವ ಬ್ಯಾಂಕ್‌ಗೆ ಸೇರಲು ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿದ್ದರು.

Follow Us:
Download App:
  • android
  • ios