ಒಂದು ತಿಂಗಳಲ್ಲಿ ಕೊರೋನಾ ನಿಯಂತ್ರಿಸಿದ IAS ಮಹಿಳಾ ಅಧಿಕಾರಿ ಪ್ರತಿ ದಿನ 6,000 ಕೇಸ್ ಇದೀಗ 100ಕ್ಕಿಂತಲೂ ಕಡಿಮೆ ಕೊರೋನಾ ಪ್ರಕರಣ 30 ದಿನದಲ್ಲಿ ನಗರದ ಚಿತ್ರಣ ಬದಲಾಯಿಸಿದ್ದು ಹೇಗೆ?

ಲಖನೌ(ಜೂ.05): ಕೊರೋನಾ 2ನೇ ಅಲೆ ಭಾರತದ ಬಹುತೇಕ ಎಲ್ಲಾ ನಗರ, ಪಟ್ಟಣ, ಹಳ್ಳಿಗಳಲ್ಲಿ ಅಬ್ಬರಿಸಿದೆ. ಇದರಲ್ಲಿ ಕೆಲ ರಾಜ್ಯ ಹಾಗೂ ಕೆಲ ಜಿಲ್ಲೆ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಲಖನೌ ಕೂಡ ಈ ಸಾಲಿಗೆ ಸೇರುತ್ತಿದೆ. ಇದಕ್ಕೆ ಮುಖ್ಯ ಕಾರಣ IAS ಮಹಿಳಾ ಅಧಿಕಾರಿ ರೋಶನ್ ಜಾಕೋಬ್.

ಮೈಸೂರಲ್ಲಿ IAS ಸಮರ : ಖರ್ಚಾದ CSR ಫಂಡ್ ಲೆಕ್ಕ ಕೇಳಿದ್ರಂತೆ ರೋಹಿಣಿ

ಲಖನೌ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್‌ಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಅಭಿಷೇಕ್ ಚಿಕಿತ್ಸೆಗಾಗಿ ತೆರಳಿದರು ಅಭಿಷೇಕ್ ಅನುಪಸ್ಥಿತಿಯಲ್ಲಿ IAS ಮಹಿಳಾ ಅಧಿಕಾರಿ ರೋಶನ್ ಜಾಕೋಬ್‌ಗೆ ಎಪ್ರಿಲ್ 17 ರಂದು ಜಿಲ್ಲಾಧಿಕಾರಿ ಜವಾಬ್ದಾರಿ ನೀಡಲಾಯಿತು. 

ಎಪ್ರಿಲ್ 2 ಹಾಗೂ ಮೂರನೇ ವಾರ ಲಖನೌದಲ್ಲಿ ಪ್ರತಿ ದಿನ 6,000 ಕೊರೋನಾ ಪ್ರಕರಣ ಸಂಖ್ಯೆ ಪತ್ತೆಯಾಗುತ್ತಿತ್ತು. ಇನ್ನು ಪಾಸಿಟಿವಿಟಿ ರೇಟ್ ಶೇಕಡಾ 50. ಆಸ್ಪತ್ರೆ ಭರ್ತಿ, ಆಕ್ಸಿಜನ್ ಸಮಸ್ಸೆ, ಬೆಡ್, ವೆಂಟಿಲೇಟರ್, ಔಷಧಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ತಲೋದಿರಿತ್ತು.

ಸಂಧಾನ ಸಕ್ಸಸ್: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಾಪಸ್

ರೋಶನ್ ಜಾಕೋಬ್ ಪ್ರತಿ ಘಟಕದ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮುಂದಿನ ಕಾರ್ಯಚರಣೆ ಕುರಿತು ಮಾಹಿತಿ ನೀಡಿದರು. ಕೋವಿಡ್ ಸೆಂಟರ್‌, ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಹೆಚ್ಚಿನ ಸೌಲಭ್ಯ ಕಲ್ಪಿಸಿದರು. ಪ್ರತಿ ವಲಯಕ್ಕೆ ತೆರಳು ಜನರ ಮನ ಒಲಿಸಿ ಕೋವಿಡ್ ಪರೀಕ್ಷೆ ಮಾಡಿಸಿದರು. 

ಕೋವಿಡ್ ಪಾಸಿಟೀವ್ ಕಂಡುಬಂದರೆ ಹೋಮ್ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಮಾಸ್ಕ್, ಸಾಮಾಜಿಕ ಅಂತರ ಪಾಲನೆಗೆ ಹೆಚ್ಚಿನ ಒತ್ತು ನೀಡಿದರು. ಲಾಕ್‌ಡೌನ್ ನಿಯಮ ಮತ್ತಷ್ಟು ಬಿಗಿಗೊಳಿಸಿದರು.

ರೋಶನ್ ನಿರಂತರ ಪ್ರಯತ್ನದ ಪಲದಿಂದ ಜೂನ್ 2ರ ವೇಳೆಗೆ ಲಖೌನ್ ಕೊರೋನಾ ಸೋಂಕಿತರ ಸಂಖ್ಯೆ 100ಕ್ಕಿಂತ ಕಡಿಮೆಯಾಯಿತು. ಇನ್ನು ಪಾಸಿಟಿವಿಟಿ ರೇಟ್ ಶೇಕಡಾ 1. ಇದರ ನಡುವೆ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಮತ್ತೆ ಸೇವೆ ಮರಳಿದರು. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದಲೇ ಭೇಷ್ ಎನಿಸಿಕೊಂಡ ರೋಶನ್ ಅವರಿಗೆ ಕೊರೋನಾ ಉಸ್ತುವಾರಿ ನೀಡಲಾಗಿದೆ.

ನೊಡೆಲ್ ಅಧಿಕಾರಿಗಳ ನೇಮಕ, ಹೋಮ್ ಐಸೋಲೇಶನ್ ಸೇರಿದಂತೆ ಕೋವಿಡ್ ಕೇರ್ ಸೆಂಟರ್‌ಗೆ ಖುದ್ದು ಬೇಟಿ ನೀಡುತ್ತಿದ್ದ ಜಾಕೋಬ್ ಇದೀಗ ಲಖನೌ ಜನರ ಪಾಲಿಗೆ ದೇವರಾಗಿದ್ದಾರೆ.