* ನಾಯಿ ಜತೆ ವಾಕಿಂಗ್ ಮಾಡಲು ಕ್ರೀಡಾಪಟುಗಳನ್ನೇ ಹೊರಗಟ್ಟಿದ ಅಧಿಕಾರಿ* ಅಧಿಕಾರಿಯ ದರ್ಪ, ವರ್ಗಾವಣೆಯ ಶಿಕ್ಷೆ* ಇತ್ತ ವೈರಲ್ ಆಗ್ತಿದೆ ಮಹಿಳಾ ಐಎಎಸ್ ಅಧಿಕಾರಿಯ ಮಾನವೀಯ ನಡೆಯ ಘಟನೆ
ನವದೆಹಲಿ(ಮೇ.27): ಐಎಎಸ್ ಸಂಜೀವ್ ಖಿರ್ವಾರ್ ಮತ್ತು ಪತ್ನಿ ಐಎಎಸ್ ರಿಂಕು ದುಗ್ಗಾ ಅವರ ಹೆಸರು ಸದ್ಯ ಸಾಮಾಝಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ದಿಲ್ಲಿಯ ತ್ಯಾಗರಾಜ್ ಸ್ಟೇಡಿಯಂ ಖಾಲಿ ಮಾಡಿಸಿ ಆಟಗಾರರನ್ನು ಹೊರಗಟ್ಟಿ ನಾಯಿ ವಾಕ್ ಮಾಡುವಂತೆ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಇದರ ಬೆನ್ನಲ್ಲೇ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಂಜೀವ್ ಅವರನ್ನು ಲಡಾಖ್‌ಗೆ ಕಳುಹಿಸಿದರೆ, ಅವರ ಪತ್ನಿ ರಿಂಕು ಅವರನ್ನು ಅರುಣಾಚಲ ಪ್ರದೇಶಕ್ಕೆ ಹೋಗಲು ಆದೇಶಿಸಲಾಗಿದೆ. ಆದರೆ, ಇದೆಲ್ಲದರ ನಡುವೆ ಐಎಎಸ್ ಕೀರ್ತಿ ಜಲ್ಲಿಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಒಂದೆಡೆ, ದೆಹಲಿಯ ಪ್ರಧಾನ ಕಾರ್ಯದರ್ಶಿ (ಕಂದಾಯ) ಆಗಿದ್ದ ಸಂಜೀವ್ ಖಿರ್ವಾರ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಅದರಲ್ಲಿ ಅವರು ತಮ್ಮ ಹೆಂಡತಿಯೊಂದಿಗೆ ಖಾಲಿ ಕ್ರೀಡಾಂಗಣದಲ್ಲಿ ನಾಯಿ ಜೊತೆ ವಾಕಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಮತ್ತೊಂದೆಡೆ, ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಕೀರ್ತಿ ಜಲ್ಲಿ ಅವರ ಫೋಟೋ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಕೆಸರಿನಲ್ಲಿ ನಡೆಯುವ ದೃಶ್ಯಗಳಿವೆ. ಇದು ಕೀರ್ತಿಯವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕ್ಷಣದ ಚಿತ್ರವಾಗಿದೆ.
ಇಬ್ಬರ ಫೋಟೋಗಳನ್ನು ಹಂಚಿಕೊಳ್ಳುತ್ತಾ, IFS ಅನುಪಮ್ ಶರ್ಮಾ 'ಎರಡೂ ಫೋಟೋಗಳಲ್ಲಿ ಕಂಡುಬರುವ ಅಧಿಕಾರಿಗಳು UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಂದೇಶ ಬಹಳ ಸರಳವಾಗಿದೆ - ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಲ್ಲ. ಕೆಲಸ ಸಿಕ್ಕ ನಂತರ ಏನು ಮಾಡುತ್ತೀರಿ ಎಂಬುದು ಹೆಚ್ಚು ಮುಖ್ಯ. ನಿಜವಾದ ಘನತೆ ಮಾನವೀಯತೆಯಿಂದ ಸಿಗುತ್ತದೆ ಎಂದು ಬರೆದಿದ್ದಾರೆ.
ಅನುಪಮ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಕೀರ್ತಿ ಜಲ್ಲಿಯನ್ನು ಸಾಕಷ್ಟು ಹೊಗಳುತ್ತಿದ್ದಾರೆ. ಐಎಎಸ್ ಅವ್ನಿಶ್ ಶರಣ್ ಕೂಡ ಕೀರ್ತಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಕೀರ್ತಿ ಜಲ್ಲಿ ಐಎಎಸ್, ಕ್ಯಾಚಾರ್‌ನ ಡೆಪ್ಯುಟಿ ಕಮಿಷನರ್ ಎಂದು ಬರೆದಿದ್ದು, ಕೈ ಜೋಡಿಸುವ ಎಮೋಜಿಯನ್ನು ರಚಿಸಿದ್ದಾರೆ. ಕೀರ್ತಿ ಅವರ ಫೋಟೋವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ.
ಕೀರ್ತಿ ಅವರ ಫೋಟೋವನ್ನು ಡೆಪ್ಯುಟಿ ಕಮಿಷನರ್, ಕ್ಯಾಚಾರ್ ಅವರ ಟ್ವಿಟರ್ ಹ್ಯಾಂಡಲ್‌ನಲ್ಲೂ ಹಂಚಿಕೊಳ್ಳಲಾಗಿದೆ. ಇದರಲ್ಲಿ ಫೋಟೋ ಬಗ್ಗೆ ಮಾಹಿತಿ ನೀಡಲಾಗಿದೆ. ಟ್ವೀಟ್‌ನಲ್ಲಿ ಮೇಡಂ ಡೆಪ್ಯೂಟಿ ಕಮಿಷನರ್ ಅವರು ಚೆಸ್ರಿ ಜಿಪಿ, ಗ್ರಾಮ- ಚುತ್ರಸಂಗನ್ ಪ್ರದೇಶದಲ್ಲಿ ಪ್ರವಾಹ ಮತ್ತು ಸವೆತ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಅವಳು ಬರಿಗಾಲಿನಲ್ಲಿದ್ದರು. ಪ್ರವಾಹ ಮತ್ತು ಕೊರೆತದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸ್ಥಳೀಯ ಜನರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು ಎಂದು ತಿಳಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕ್ಯಾಚಾರ್ ಜಿಲ್ಲೆಯ 291 ಗ್ರಾಮಗಳು ಈ ವರ್ಷ ಪ್ರವಾಹದಿಂದ ಹಾನಿಗೊಳಗಾಗಿವೆ. ಇದರಿಂದ 1,63,000 ಜನರು ಬಾಧಿತರಾಗಿದ್ದಾರೆ. ಈ ದುರಂತದಿಂದ 11,200 ಮನೆಗಳಿಗೆ ಹಾನಿಯಾಗಿದೆ. ಅದೇ ಸಮಯದಲ್ಲಿ, ಕ್ಯಾಚಾರ್‌ನಲ್ಲಿ 5,915 ಹೆಕ್ಟೇರ್ ಬೆಳೆ ಮುಳುಗಿದೆ.