ರಸ್ತೆ ಬದಿ ನಿಂತಿದ್ದ ಮಳೆನೀರಿಗೆ ಕಾಲಿಡುತ್ತಿದ್ದಂತೆ ಕರೆಂಟ್ ಶಾಕ್: IAS ಪರೀಕ್ಷೆಗೆ ಸಿದ್ದಗೊಳ್ಳುತ್ತಿದ್ದ ವಿದ್ಯಾರ್ಥಿ ಸಾವು

ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ನಿಂತ ಮಳೆ ನೀರಿನಲ್ಲಿ ವಿದ್ಯುತ್ ಪ್ರವಾಹಿಸಿದ ಪರಿಣಾಮ  ವಿದ್ಯುತ್‌ ಶಾಕ್‌ಗೊಳಗಾಗಿ ಉಸಿರು ಚೆಲ್ಲಿದ ಘಟನೆ ನಡೆದಿದೆ. 

IAS aspirant Electrocuted after he steps into Waterlogged Road in delhi died akb

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ನಿಂತ ಮಳೆ ನೀರಿನಲ್ಲಿ ವಿದ್ಯುತ್ ಪ್ರವಾಹಿಸಿದ ಪರಿಣಾಮ  ವಿದ್ಯುತ್‌ ಶಾಕ್‌ಗೊಳಗಾಗಿ ಉಸಿರು ಚೆಲ್ಲಿದ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಅವಾಂತರ ನಡೆದಿದೆ. ವಿದ್ಯಾರ್ಥಿ ಕರೆಂಟ್ ಶಾಕ್‌ಗೊಳಗಾಗಿ ಬಿದ್ದಿರುವ ಆಘಾತಕಾರಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಹಾಗೂ ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಯ ಸಾವಿಗೆ ಕಾರಣವಾದ ವ್ಯವಸ್ಥೆ ಹಾಗೂ ಸರ್ಕಾರವನ್ನು ಟೀಕೆ ಮಾಡಿದ್ದಾರೆ. 

ವಿದ್ಯುತ್ ಆಘಾತಕ್ಕೀಡಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಯನ್ನು ನಿಲೇಶ್ ರೈ ಎಂದು ಗುರುತಿಸಲಾಗಿದೆ. ದೆಹಲಿಯ ಪಟೇಲ್ ನಗರ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ರಸ್ತೆ ಬದಿ ಹೊಂಡದಲ್ಲಿ ನಿಂತಿದ್ದ ಮಳೆನೀರಿಗೆ ಈತ ಕಾಲಿಟ್ಟ ಕೂಡಲೇ ಆತನಿಗೆ ಕರೆಂಟ್ ಶಾಕ್ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಎರಡು ದೇಹ ಎರಡು ಮುಖ 4 ಕೈಕಾಲುಗಳಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ ತಾಯಿ

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಸ್ವಾತಿ ಮಾಲಿವಾಲ್ ಹೀಗೆ ಬರೆದಿದ್ದಾರೆ, 'ದೆಹಲಿಯ ಪಟೇಲ್ ನಗರದಲ್ಲಿ ಮಳೆಯ ನಿಂತರ ನಿಂತ ನೀರಿನಲ್ಲಿ ಕರೆಂಟ್ ಪ್ರವಹಿಸಿದ್ದರಿಂದ ಯುಪಿಎಸ್‌ಸಿ ಪರೀಕ್ಷಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಇದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ, ಇದು ಸರ್ಕಾರಿ ವ್ಯವಸ್ಥೆಯ ವೈಫಲ್ಯದಿಂದಾಗಿ ನಡೆದ ಕೊಲೆ, ಇಲ್ಲಿ ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲವೇ? ಆ ಮಗುವಿನ ಪೋಷಕರಿಗೆ ಎಂಥಹಾ ಉತ್ತರ ಸಿಗುತ್ತದೆ? ಆತ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸತ್ತ, ಕ್ಷಮಿಸಿ' ಎಂದು ಸ್ವಾತಿ ಮಾಲಿವಾಲ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕು, ಹಾಗೂ ಈ ಘಟನೆಗೆ ಜವಾಬ್ದಾರರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹೀಗೆ ಅಚಾನಕ್ ಆಗಿ ಸಾವನ್ನಪ್ಪಿದ್ದ ನಿಲೇಶ್ ಪಟೇಲ್ ನಗರ ಪ್ರದೇಶದ ಪಿಜಿಯಲ್ಲಿ ವಾಸ ಮಾಡುತ್ತಿದ್ದ, ಸೋಮವಾರ ಮಧ್ಯಾಹ್ನ 2.43ರ ಸುಮಾರಿಗೆ ಕರೆಂಟ್ ಶಾಕ್‌ನಿಂದಾಗಿ ವ್ಯಕ್ತಿಯೊರ್ವ ಕಬ್ಬಿಣದ ಗೇಟ್‌ಗೆ ಸಿಲುಕಿಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ನಿಲೇಶ್ ದೇಹವೂ ಕಬ್ಬಿಣದ ಗೇಟ್‌ಗೆ ಸಿಲುಕಿಕೊಂಡಿತ್ತು. ಬಳಿಕ ಆತನನ್ನು ಪೊಲೀಸರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.  

ಬೆಂಕಿ ಬಿದ್ದು ಐಎನ್‌ಎಸ್ ಬ್ರಹ್ಮಪುತ್ರಕ್ಕೆ ಭಾರಿ ಹಾನಿ : ಸೈಲರ್ ನಾಪತ್ತೆ

ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ದೆಹಲಿಯಲ್ಲಿ ಆಡಳಿತದಲ್ಲಿರುವ ಕೇಜ್ರಿವಾಲ್ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಕೇಜ್ರಿವಾಲ್ ಸರ್ಕಾರದ ನಿರ್ಲಕ್ಷ್ಯ ಹಾಗೂ ಅದಕ್ಷ ಆಡಳಿತವೂ ಮತ್ತೊಂದು ಜೀವವನ್ನು ಬಲಿಪಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಈ ಅನ್ಯಾಯವನ್ನು ನೋಡಿ ನಾವು ಸುಮ್ಮನೇ ಇರಬಾರದು, ನಾವು ನ್ಯಾಯಕ್ಕೆ ಬೇಡಿಕೆ ಇಡುತ್ತೇವೆ ಎಂದು ಮಂಜಿಂದರ್ ಸಿಂಗ್ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios