ಜಮ್ಮು ಐಎಎಫ್ ಸ್ಟೇಷನ್‌ನಲ್ಲಿ ‘ಡ್ರೋನ್ ಜಾಮರ್’ ಅಳವಡಿಕೆ!
* ಸತತ 4ನೇ ದಿನವೂ 3 ಸೇನಾ ಘಟಕ ಸನಿಹ ಡ್ರೋನ್ ಹಾರಾಟ
* ಜಮ್ಮು ಐಎಎಫ್ ಸ್ಟೇಷನ್‌ನಲ್ಲಿ ‘ಡ್ರೋನ್ ಜಾಮರ್’ ಅಳವಡಿಕೆ
* ಸಂಭಾವ್ಯ ಡ್ರೋನ್ ದಾಳಿ ತಡೆಗೆ ಈ ವ್ಯವಸ್ಥೆ
ಜಮ್ಮು(ಜು.01): ಇಲ್ಲಿನ ವಿಮಾನ ನಿಲ್ದಾಣದ ವಾಯುಪಡೆ ಸ್ಟೇಷನ್ ಡ್ರೋನ್ ದಾಳಿ ನಡೆದ ಘಟನೆಯ ಪರಿಣಾಮ, ಬುಧವಾರ ಈ ಸ್ಟೇಷನ್‌ನಲ್ಲಿ ಡ್ರೋನ್ ನಿರೋಧಕ ವ್ಯವಸ್ಥೆಯ ಜಾಮರ್‌ಗಳನ್ನು ಅಳವಡಿಸಲಾಗಿದೆ.
‘ಸ್ಥಳದಲ್ಲಿ ರೇಡಿಯೋ ತರಂಗಾಂತರ ಪತ್ತೆ ಯಂತ್ರ, ಸಾಫ್ಟ್ ಜಾಮರ್ ಹಾಗೂ ಆ್ಯಂಟಿ ಡ್ರೋನ್ ಗನ್ ಅಳವಡಿಸಲಾಗಿದೆ’ ಎಂದು ಮೂಲಗಳು ಹೇಳಿವೆ.]
ಸತತ 4ನೇ ದಿನವೂ ಡ್ರೋನ್ ಹಾರಾಟ:
ಈ ನಡುವೆ, ಡ್ರೋನ್ ಉಗ್ರ ದಾಳಿ ನಡೆದ ಬಳಿಕ ಸತತ 4ನೇ ದಿನವಾದ ಬುಧವಾರವೂ ಜಮ್ಮುವಿನ 3 ಸೇನಾ ಘಟಕಗಳ ಬಳಿ ಡ್ರೋನ್ಗಳು ಹಾರಾಟ ನಡೆಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಜೊತೆಗೆ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು, ಎನ್ಎಸ್ಜಿಯ ಪ್ರಧಾನ ನಿರ್ದೇಶಕ ಮತ್ತು ಸಿಐಎಸ್ಎಫ್ನ ಪ್ರಧಾನ ನಿರ್ದೇಶಕರನ್ನು ಜಮ್ಮುವಿಗೆ ರವಾನಿಸಲಾಗಿದೆ.