* ಕೋವಿಡ್‌ 19 ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ತೃತೀಯ ದರ್ಜೆ ಅಧಿಕಾರಿ* ಕೋವಿಡ್‌ ಲಸಿಕೆ ನಿರಾಕರಿಸಿದ್ದಕ್ಕೆ ವಾಯುಪಡೆ ಉದ್ಯೋಗಿ ವಜಾ* ದೇಶದಲ್ಲಿ ಒಟ್ಟು 9 ವಾಯುಪಡೆ ಸಿಬ್ಬಂದಿ ಲಸಿಕೆ ನಿರಾಕರಿಸಿದ್ದರು

ಅಹಮದಾಬಾದ್‌(ಆ.13): ಕೋವಿಡ್‌ 19 ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ತೃತೀಯ ದರ್ಜೆ ಅಧಿಕಾರಿಯನ್ನು ಭಾರತೀಯ ವಾಯುಸೇನೆ ಸೇವೆಯಿಂದ ವಜಾಗೊಳಿಸಿದೆ.

ದೇಶದಲ್ಲಿ ಒಟ್ಟು 9 ವಾಯುಪಡೆ ಸಿಬ್ಬಂದಿ ಲಸಿಕೆ ನಿರಾಕರಿಸಿದ್ದರು. ಅವರಿಗೆಲ್ಲಾ ವಾಯುಸೇನೆ ನೋಟಿಸ್‌ ನೀಡಿತ್ತು ನೋಟಿಸ್‌ಗೆ ಉತ್ತರಿಸದ ಒಬ್ಬನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

ಈ ನಿರ್ಧಾರವನ್ನು ಪ್ರಶ್ನಿಸಿ ವಜಾಗೊಂಡ ಅಧಿಕಾರಿ ಯೋಗೇಂದ್ರ ಕುಮಾರ್‌, ಗುಜರಾತ್‌ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಈ ಮನವಿಯನ್ನು ವಜಾಗೊಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರು ಸಾಲಿಸಿಟರ್‌ ಜನರಲ್‌ ದೇವಾಂಗ್‌ ವ್ಯಾಸ್‌, ವಾಯುಸೇನೆ ತನ್ನ ಎಲ್ಲಾ ಉದ್ಯೋಗಿಗಳಿಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಕೋವಿಡ್‌ ವಿರುದ್ದ ಹೋರಾಡಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ವಜಾಗೊಂಡ ಅಧಿಕಾರಿ ಸೇನೆ ನೀಡಿದ ನೋಟಿಸ್‌ಗೂ ಉತ್ತರ ನೀಡಿರಲಿಲ್ಲ ಎಂದು ಹೇಳಿದ್ದಾರೆ.