ಈ 2 ಗುಣವಿದ್ದ ಹುಡುಗಿ ಒಕೆ, ಬಾಳ ಸಂಗಾತಿ ಕುರಿತು ಮನಬಿಚ್ಚಿ ಮಾತನಾಡಿದ ರಾಹುಲ್ ಗಾಂಧಿ!

ಭಾರತ್ ಜೋಡೋ ಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ರಾಹುಲ್ ಗಾಂಧಿ ಇದೀಗ ಹಲವು ವೈಯುಕ್ತಿ ಮಾಹಿತಿಗಳ ಕುರಿತು ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಾಹುಲ್ ಗಾಂಧಿ ತಮ್ಮ ಬಾಳ ಸಂಗಾತಿ ಕುರಿತು ಕೆಲ ಮಾತುಗಳನ್ನಾಡಿದ್ದಾರೆ. 
 

I would prefer a Life Partner mix between my mother and grandmother qualities says Rahul gandhi during Bharat jodo yatra ckm

ನವದೆಹಲಿ(ಡಿ.28): ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಇದೀಗ ದೆಹಲಿಯಲ್ಲಿ ಸಂಚರಿಸುತ್ತಿದ್ದಾರೆ. ದೆಹಲಿ, ಪಂಜಾಬ್ ಮೂಲಕ ತೆರಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಭಾರತ್ ಜೋಡೋ ಯಾತ್ರೆ ನಡುವಿನ ಸಂದರ್ಶಗಳಲ್ಲಿ ರಾಹುಲ್ ಗಾಂಧಿ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ತಮ್ಮ ಬಾಳಸಂಗಾತಿ ಕುರಿತು ಮಾಹಿತಿಯೂ ಸೇರಿದೆ. ಬಾಳ ಸಂಗಾತಿ ಜೊತೆ ಜೀವನ ನಡೆಸಲು ಇಚ್ಚೀಸುತ್ತೀರಾ? ನಿಮ್ಮ ಸಂಗಾತಿ ಹೇಗಿರಬೇಕು ಎಂದು ಸಂದರ್ಶಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಪ್ರಮುಖವಾಗಿ ಹುಡುಗಿಯಲ್ಲಿ ಎರಡು ಗುಣಗಳಿರಬೇಕು. ಒಂದು ನನ್ನ ತಾಯಿ ಸೋನಿಯಾ ಗಾಂಧಿ ಹಾಗೂ ಮತ್ತೊಂದು ನನ್ನ ಅಜ್ಜಿ ಇಂದಿರಾ ಗಾಂಧಿ ಗುಣಗಳಿರುವ ಹುಡುಗಿಗೆ ಅದ್ಯತೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ನಡುವೆ ಯೂಟ್ಯೂಬ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಇಂದಿರಾ ಗಾಂಧಿ ಕುರಿತು ಮಾತನಾಡಿದ್ದಾರೆ. ಇಂದಿರಾ ಗಾಂಧಿಯನ್ನು ಕರೆಯುತ್ತಿದ್ದ ಐರನ್ ಲೇಡಿ ಹೆಸರಿನ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದಾರೆ. ಇಂದಿರಾ ಗಾಂಧಿಯನ್ನು ಗುಂಗಿ ಗುಡಿಯಾ ಎಂದು ಕರೆದಿದ್ದಾರೆ. ಬಳಿಕ ಅದೇ ಜನ ಐರನ್ ಲೇಡಿ ಎಂದು ಕರೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ತಾಯಿ ಹಾಗೂ ಅಜ್ಜಿ ಜೊತೆಗಿನ ಸಂಬಂಧ ಹೇಗಿತ್ತು ಅನ್ನೋ ಪ್ರಶ್ನೆಗೆ ಲವ್ ಆಫ್ ಮೈ ಲಫ್ ಎಂದು ಉತ್ತರಿಸಿದ್ದಾರೆ. 

 

ಕೇಂದ್ರದ ಕೊರೋನಾ ಎಲ್ಲಿ? ಹುಡುಕಿದರೂ ಕಾಣಿಸುತ್ತಿಲ್ಲ, ಸಚಿವರ ಪತ್ರಕ್ಕೆ ಕಾಂಗ್ರೆಸ್ ನಾಯಕನ ವ್ಯಂಗ್ಯ!

ರಾಹುಲ್ ಗಾಂಧಿ ಉತ್ತರ ಬೆನ್ನಲ್ಲೇ, ನೀವು  ಬಾಳ ಸಂಗಾತಿ ಜೊತೆ ಜೀವನ ನಡೆಸಲು ಇಚ್ಚೀಸುತ್ತೀರಾ, ಅಥವಾ ನಿಮ್ಮ ಸಂಗಾತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದು ಆಸಕ್ತಿಕರ ಪ್ರಶ್ನೆ ಎಂದು ನಗೆಗಡಲಲ್ಲಿ ತೇಲಾಡಿದ ರಾಹುಲ್ ಗಾಂಧಿ, ಹುಡುಗಿಗೆ ಇತರ ಯಾವೆಲ್ಲಾ ಗುಣಗಳಿವೆ ಅನ್ನೋದನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನನ್ನ ತಾಯಿ ಹಾಗೂ ಅಜ್ಜಿಯ ಗುಣಗಳಿರುವ ಹುಡುಗಿಗೆ ಅದ್ಯತೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಇದೇ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಸಂದರ್ಶನವನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ರಾಹುಲ್ ಗಾಂಧಿ ಬಾಳ ಸಂಗಾತಿ ಕುರಿತು ನೀಡಿರುವ ಹೇಳಿಕೆ ವೈರಲ್ ಆಗಿದೆ.

 

 

ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು; ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ: ಪ್ರಲ್ಹಾದ್ ಜೋಶಿ

ಭಾರತ್‌ ಜೋಡೋ ಯಾತ್ರೆಗೆ ಹಲವರಿಗೆ ಆಹ್ವಾನ
ಉತ್ತರಪ್ರದೇಶದಲ್ಲಿ ನಡೆಯುವ ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗುವಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಆರ್‌ಎಲ್‌ಡಿಯ ಜಯಂತ್‌ ಸಿಂಗ್‌ಗೆ ರಾಹುಲ್‌ ಗಾಂಧಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ಮೂವರು ನಾಯಕರು ಒಪ್ಪಿರುವ ಅಥವಾ ತಿರಸ್ಕರಿಸಿರುವ ಮಾಹಿತಿ ಹೊರಬಿದ್ದಿಲ್ಲ. ಡಿ.25 ರಿಂದ ಜ.2 ರವರೆಗಿನ ವಿರಾಮದ ಬಳಿಕ ಜ.3ರಂದು ಉತ್ತರಪ್ರದೇಶದ ಘಾಜಿಯಾಬಾದ್‌ನಿಂದ ಯಾತ್ರೆ ಪುನಾರಂಭಗೊಳ್ಳುತ್ತಿದೆ. ಈ ಆಹ್ವಾನದ ಮೂಲಕ ಸಮಾನಮನಸ್ಕ ಪಕ್ಷಗಳನ್ನು 2024ರ ಲೋಕಸಭಾ ಚುನಾವಣೆ ವೇಳೆಗೆ ಒಂದುಗೂಡಿಸುವ ಉದ್ದೇಶವನ್ನು ರಾಹುಲ್‌ ಹೊಂದಿದ್ದಾರೆ.

Latest Videos
Follow Us:
Download App:
  • android
  • ios