Asianet Suvarna News Asianet Suvarna News

ತಾಯಿ ಅಂತ್ಯಸಂಸ್ಕಾರಕ್ಕೆ ನನಗೆ ಪರೋಲ್ ನೀಡಲಿಲ್ಲ, ಸರ್ವಾಧಿಕಾರಿ ಯಾರು? ಭಾವುಕರಾದ ರಾಜನಾಥ್!

ಮೋದಿ ಸರ್ವಾಧಿಕಾರಿ, ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಆಡಳಿತ ನಡಸುತ್ತಿದೆ ಅನ್ನೋ ಕಾಂಗ್ರೆಸ್ ಆರೋಪಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಭಾವುಕರಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ನನ್ನ ತಾಯಿ ಅಂತ್ಯಸಂಸ್ಕಾರ ಮಾಡಲು ನನಗೆ ಪರೋಲ್ ನೀಡಲಿಲ್ಲ. ತಾಯಿಯ ಕೊನೆಯ ದಿನಗಳಲ್ಲಿ ಜೊತೆಗಿರಲು ಸಾಧ್ಯವಾಗಿಲ್ಲ, ಸರ್ವಾಧಿಕಾರಿ ಯಾರು ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ. ರಾಜನಾಥ್ ಸಿಂಗ್ ಭಾವುಕ ಮಾತುಗಳು ಇಲ್ಲಿದೆ.
 

I was not given parole to attend my mothers last rites Rajnath Singh slams Congress dictators allegation ckm
Author
First Published Apr 11, 2024, 4:57 PM IST

ನವದೆಹಲಿ(ಏ.11) ತುರ್ತು ಪರಿಸ್ಥಿತಿ ಹೇರಿ ಬಹುತೇಕರನ್ನು ಜೈಲಿಗಟ್ಟಿದರು. ಮೆದುಳಿನ ರಕ್ತಸ್ರಾವದಿಂದ ನನ್ನ ತಾಯಿ 27 ದಿನ ಆಸ್ಪತ್ರೆ ದಾಖಲಾಗಿದ್ದರು. ತಾಯಿಯ ಕೊನೆಯ ದಿನಗಳಲ್ಲಿ ಜೊತೆಗೆ ಇರಲು ಬಿಡಲಿಲ್ಲ. ತಾಯಿ ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ಪರೋಲ್ ನೀಡಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾವುಕರಾಗಿದ್ದಾರೆ. 1975ರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಹಾಗೂ ತಮ್ಮ ಕರಾಳ ಬದುಕಿನ ಅಧ್ಯಾಯ ಹೇಳುತ್ತಾ ರಾಜನಾಥ್ ಸಿಂಗ್ ಭಾವುಕರಾಗಿದ್ದಾರೆ. ತಾಯಿ ಅಂತ್ಯಸಂಸ್ಕಾರಕ್ಕೂ ಪರೋಲ್ ನೀಡಿಲ್ಲ.  ಈಗ ಹೇಳೆ ಯಾರು ಸರ್ವಾಧಿಕಾರಿ ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದ್ದಾರೆ. ಎಎನ್ಐ ನಡೆಸಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಈ ಭಾವುಕರಾಗಿ ತುರ್ತು ಪರಿಸ್ಥಿತಿ ಕುರಿತು ಹೇಳಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಆಡಳಿತವನ್ನು ಮತ್ತೆ ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಎಂದು ಆರೋಪಿಸಿದೆ. ಇಂಡಿಯಾ ಒಕ್ಕೂಟದ ಹಲವು ಪಕ್ಷಗಳ ನಾಯಕರು ಇದೇ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್, ತಾಯಿ ಅಂತ್ಯಸಂಸ್ಕಾರಕ್ಕೆ ಪರೋಲ್ ನೀಡದವರು ಇದೀಗ ನಮ್ಮ ಮೇಲೆ ಸರ್ವಾಧಿಕಾರಿ ಆರೋಪ ಮಾಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಸಂಹಾರ: ರಾಜನಾಥ್ ಸಿಂಗ್ ಹೇಳಿಕೆ ಪ್ರಚೋದನಾಕಾರಿ, ಪಾಕ್‌

ತುರ್ತು ಪರಿಸ್ಥಿತಿ ಹೆಸರಿನಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಗೆ ತಂದವರು ಇದೀಗ ಬಿಜೆಪಿ ಮೇಲೆ ಸರ್ವಾಧಿಕಾರಿ ಆರೋಪ ಮಾಡುತ್ತಿದ್ದಾರೆ. 1975ರಲ್ಲಿ ಹೇರಲಾಗಿದ್ದು ತುರ್ತು ಪರಿಸ್ಥಿತಿ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೆ. ತುರ್ತು ಪರಿಸ್ಥಿತಿ ತಿಳಿಯದ ಜನರಿಗೆ ಈ ಕುರಿತು ಮಾಹಿತಿ ನೀಡುತ್ತಿದ್ದೆ. ಈ ಕಾರಣಕ್ಕೆ ನಾನು ಅರೆಸ್ಟ್ ಆಗಿದ್ದೆ. ಭಾರತದ ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 

 

ಸರ್ವಾಧಿಕಾರಿ ಆಡಳಿತ ನೀಡಿದ ಕಾಂಗ್ರೆಸ್, ಬಹುತೇಕರನ್ನು ಜೈಲಿಗೆ ಕಳುಹಿಸಿತ್ತು. ಮಾಧ್ಯಮ ಸ್ವಾತಂತ್ರ್ಯಕ್ಕೂ ನಿರ್ಬಂಧ ಹೇರಲಾಗಿತ್ತು. ಹಾಡು, ಗೀತೆ, ಪುಸ್ತಕ ಎಲ್ಲವೂ ಬ್ಯಾನ್ ಆಗಿತ್ತು. ಅಪ್ಪಿ ತಪ್ಪಿ ಕಾಂಗ್ರೆಸ್ ವಿರುದ್ದ ಮಾತನಾಡಿದರೂ ಜೈಲಾಗುತ್ತಿತ್ತು. ಇದು ಸರ್ವಾಧಿಕಾರಿ ಆಡಳಿತ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಮಂಗಳೂರಿಗೆ ಬರ್ತಿದ್ದ ಹಡಗು ದಾಳಿಕೋರರು ಸಮುದ್ರದ ಆಳದಲ್ಲಿದ್ರೂ ಪತ್ತೆ ಮಾಡ್ತೇವೆ: ರಾಜನಾಥ್‌ ಸಿಂಗ್ ಎಚ್ಚರಿಕೆ

ಪತ್ರಿಕೆಯ ಹೆಡ್ಲೆನ್ ಸೇರಿದಂತೆ ಎಲ್ಲವೂ ಕಾಂಗ್ರೆಸ್ ಪಕ್ಷದ ಅಣತಿಯಂತೆ ಹೋಗಬೇಕಿತ್ತು. ಒಂದು ಅಕ್ಷರ ಕಾಂಗ್ರೆಸ್ ಅಥವಾ ಇಂದಿರಾ ಗಾಂಧಿ ಸರ್ಕಾರದ ವಿರುದ್ಧಿದ್ದರೆ ಜೈಲೇ ಗತಿಯಾಗಿತ್ತು. ಹಲವು ಪತ್ರಕರ್ತರು, ಸಂಪಾದಕರು ಜೈಲು ಸೇರಿದ್ದರು. ಏನೂ ಅರಿಯದ ಸಾಮಾನ್ಯರು ಕೂಡ ಜೈಲು ಸೇರಿದ್ದರು. ಈ ಆಡಳಿತ ನೀಡಿದ ಕಾಂಗ್ರೆಸ್ ಇದೀಗ ನಮ್ಮ ಮೇಲೆ ಸರ್ವಾಧಿಕಾರಿ ಅನ್ನೋ ಹಣೆಪಟ್ಟ ಕಟ್ಟಲು ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
 

Follow Us:
Download App:
  • android
  • ios