ನವದೆಹಲಿ(ಆ.24): ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಹಾಲಿ ರಾಜ್ಯಸಭಾ ಸದಸ್ಯ ರಂಜನ್‌ ಗೊಗೋಯ್‌ ಅವರು ಮುಂದಿನ ವರ್ಷ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಸಿಎಂ, ಕಾಂಗ್ರೆಸ್‌ನ ತರುಣ್‌ ಗೊಗೋಯ್‌ ಹೇಳಿದ್ದಾರೆ.

'ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಾಗ್ತಾರೆ ಮಾಜಿ CJI ಗೊಗೋಯ್!'

ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿತಯಾರಿಸಿದ್ದು, ಅದರಲ್ಲಿ ರಂಜನ್‌ ಗೊಗೋಯ್‌ ಅವರ ಹೆಸರು ಕೂಡಾ ಇದೆ. ಮೇಲಾಗಿ ರಂಜನ್‌ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಹೀಗಾಗಿಯೇ ಅವರು ಬಿಜೆಪಿ ನೀಡಿದ ರಾಜ್ಯಸಭಾ ಸ್ಥಾನ ಒಪ್ಪಿಕೊಂಡಿದ್ದು ಎಂದು ಹೇಳಿದ್ದಾರೆ.

ಹಲವು ಪ್ರಮುಖ ಕೇಸ್ ಇತ್ಯರ್ಥಗೊಳಿಸಿದ್ದ ರಂಜನ್ ಗೊಗೋಯ್​ ರಾಜ್ಯಸಭೆಗೆ ಎಂಟ್ರಿ..!

ಆದರೆ ತರುಣ್‌ ಗೊಗೋಯ್‌ ಅವರ ಹೇಳಿಕೆಯನ್ನು ಸ್ವತಃ ರಂಜನ್‌ ಗೊಗೋಯ್‌ ಮತ್ತು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿವೆ. ಈ ಕುರಿತು ಹೇಳಿಕೆ ನೀಡಿರುವ ರಂಜನ್‌ ಗೊಗೋಯ್‌, ನಾನು ರಾಜಕೀಯ ವ್ಯಕ್ತಿಯಲ್ಲ. ನನಗೆ ಮುಖ್ಯಮಂತ್ರಿಯಾಗುವ ಉದ್ದೇಶವಾಗಲೀ, ಆಸೆಯಾಗಲಿ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಅಸ್ಸಾಂ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರ ಹೇಳಿಕೆಯನ್ನು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.