ಹೈದರಾಬಾದ್‌(ನ.27): ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಪ್ರಯತ್ನ ಆರಂಭಿಸಿರುವ ಬಿಜೆಪಿ, ಮತದಾರರಿಗೆ ಭರ್ಜರಿ ಆಫರ್‌ಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ದೆಹಲಿ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಹಾಗೂ ಮೆಟ್ರೋ ಪ್ರಯಾಣ, 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಮುಂತಾದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಬಿಜೆಪಿ ಗೆದ್ದರೆ ಮಹಿಳೆಯರಿಗೆ ಮೆಟ್ರೋ, ಬಸ್‌ ಪ್ರಯಾಣ ಉಚಿತ!

ಅಲ್ಲದೇ ಇತ್ತೀಚಿನ ಪ್ರವಾಹದಲ್ಲಿ ಸಂತ್ರಸ್ತರಾದವರ ಕುಟುಂಬಕ್ಕೆ 25000 ರು. ಸಹಾಯ ಧನ, ಉಚಿತ ಕುಡಿಯುವ ನೀರು, ವರ್ಷಕ್ಕೆ 3 ಮಹಿಳಾ ಪೊಲೀಸ್‌ ಠಾಣೆಗಳ ಸ್ಥಾಪನೆ, ಪ್ರತೀ ಕಿಲೋ ಮೀಟರ್‌ಗೆ ಒಂದು ಶೌಚಾಲಯ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಟ್ಯಾಬ್ಲೆಟ್‌ ಮುಂತಾದ ಭರವಸೆಗಳನ್ನು ಬಿಜೆಪಿ ನೀಡಿದೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

'ಇದು ಗೆಲುವಿನ ಆರಂಭ, ಮೂರು ವರ್ಷದಲ್ಲಿ ಇಡೀ ದಕ್ಷಿಣ ಭಾರತ ಕೇಸರಿಮಯ'

ದಕ್ಷಿಣದ ಸಂಪೂರ್ಣ ಕೇಸರೀಕರಣ ಹೈದ್ರಾಬಾದ್‌ನಿಂದಲೇ ಪ್ರಾರಂಭ: ತೇಜಸ್ವಿ

ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಹೈದಬಾದ್‌ಗೆ ತೆರಳಿದ್ದ ಸಂಸದ ತೇಜಸ್ವಿ ಸೂರ್ಯ  ದಕ್ಷಿಣ ಭಾರತ ಸಂಪೂರ್ಣ ಕೇಸರೀಕರಣಗೊಳ್ಳಲಿದ್ದು, ಅದರ ಪ್ರಾರಂಭ ಹೈದರಾಬಾದ್‌ನಿಂದಲೇ ಆಗಲಿದೆ ಎಂದಿದ್ದರು.