Asianet Suvarna News Asianet Suvarna News

ಪ್ರವಾದಿ ಪೈಗಂಬರ್‌ ಕುರಿತಾಗಿ ಹೇಳಿಕೆ, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಬಂಧನ, ಪಕ್ಷದಿಂದ ಅಮಾನತು!

ಪ್ರವಾದಿ ಮೊಹಮದ್‌ ಪೈಗಂಬರ್ ಕುರಿತಾಗಿ ಮಾತನಾಡಿದ ವಿಚಾರವಾಗಿ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಹೈದರಾಬಾದ್‌ ಪೊಲೀಸ್‌ ಮಂಗಳವಾರ ಬಂಧಿಸಿದೆ. ಇದರ ನಡುವೆ ಅವರ ವಿರುದ್ಧವಾಗಿ ಪ್ರತಿಭಟನೆ ನಡೆಸಿರುವ ವ್ಯಕ್ತಿಗಳು, ಆತನ ತಲೆ ಕತ್ತರಿಸುವ ಘೋಷಣೆ ಕೂಗಿದ್ದಾರೆ. ಇದರ ನಡುವೆ ಬಿಜೆಪಿ ಈತನನ್ನು ಪಕ್ಷದಿಂದ ಅಮಾನತು ಮಾಡಿ ನೋಟಿಸ್‌ ನೀಡಿದ್ದು, ತಮ್ಮ ಹೇಳಿಕೆಗೆ 10 ದಿನಗಳ ಒಳಗಾಗಿ ಉತ್ತರಿಸುವಂತೆ ಹೇಳಿದೆ.

Hyderabad Police arrest BJP MLA Raja Singh for his alleged offensive comments against Prophet Muhammad san
Author
Bengaluru, First Published Aug 23, 2022, 12:29 PM IST

ಹೈದರಾಬಾದ್ (ಆ.23): ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್‌ ಅವರನ್ನು ಹೈದರಾಬಾದ್ ಪೊಲೀಸ್‌, ಮಂಗಳವಾರ ಬಂಧನ ಮಾಡಿದೆ. ಗೋಶಾಮಹಲ್‌ನ ಶಾಸಕ ರಾಜಾ ಸಿಂಗ್ ವಿಡಿಯೋ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪ್ರವಾದಿ ಮೊಹಮದ್‌ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ನಂತರ ಅವರು ಅದನ್ನು ತಾವು ಮಾಡಿದ್ದು ತಮಾಷೆಗೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಅವರ ವಿರುದ್ಧ ದೊಡ್ಡ ಸಂಖ್ಯೆಯ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ತಡರಾತ್ರಿಯಿಂದಲೇ ಹೈದರಾಬಾದ್‌ನ ವಿವಿಧೆಡೆ ಪ್ರತಿಭಟನೆಗಳು ಆರಂಭವಾದವು.  "ಗುಸ್ತಾಕ್‌ ಇ ನಬಿ ಕಿ ಏಕ್‌ ಹೀ ಸಜಾ, ಸರ್‌ ತನ್‌ ಸೇ ಜುದಾ' ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ. ಅದರರ್ಥ, ಪ್ರವಾದಿಯನ್ನು ನಿಂದಿಸಿದವರಿಗೆ ಶಿರಚ್ಛೇದನವೇ ಶಿಕ್ಷೆ ಎನ್ನುವುದಾಗಿದೆ.  ಈ ಘೋಷಣೆಗಳನ್ನು ಕೂಗುತ್ತಲೇ ರಾಜಾ ಸಿಂಗ್ ಬಂಧನಕ್ಕೆ ಒತ್ತಾಯ ಮಾಡಿದ್ದರು. ಅದಲ್ಲದೆ, ನೂಪುರ್ ಶರ್ಮ ಅವರು ನೀಡಿದ್ದ ರೀತಿಯದ್ದೇ ಹೇಳಿಕೆಯನ್ನು ರಾಜಾ ಸಿಂಗ್‌ ನೀಡಿದ್ದಾರೆ ಎಂದು ಆಕ್ರೋಶ ವ್ತಕ್ತಪಡಿಸಿದ್ದಾರೆ. ಇದರ ನಡುವೆ ಪ್ರತಿಭಟನೆಯ ವೇಳೆ ಹಿಂಸಾಚಾರ ಮಾಡಿರುವ ವ್ಯಕ್ತಿಗಳನ್ನೂ ಕೂಡ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಿಗಿ ಭದ್ರತೆ: ರಾಜಾ ಸಿಂಗ್‌ ವಿರುದ್ಧ ವಿರುದ್ಧ ಐಪಿಸಿಯ 295 (ಎ), 153 (ಎ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಡಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಲವು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಹೈದರಾಬಾದ್‌ನ ಪೊಲೀಸ್ ಆಯುಕ್ತರ ಕಚೇರಿ, ಪೊಲೀಸ್ ಮಹಾನಿರ್ದೇಶಕರ ಕಚೇರಿ ಮತ್ತು ಹಳೆಯ ಪೊಲೀಸ್ ಆಯುಕ್ತರ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಮುನ್ನಾವರ್‌ ಫಾರೂಕಿ ವಿರುದ್ಧ ಆಕ್ರೋಶ: ಹಿಂದೂಪರ ವಿಚಾರಗಳನ್ನು ಹಾಸ್ಯ ಮಾಡುವ ಮೂಲಕೇ ಪ್ರಸಿದ್ದಿಗೆ ಬಂದಿರುವ ಮುನ್ನಾವರ್‌ ಫಾರೂಕಿ ವಿರುದ್ಧ ಬಿಜೆಪಿ ಶಾಸಕ ವಿಡಿಯೋ ಬಿಡುಗಡೆ ಮಾಡಿದ್ದರು. ಕಳೆದ ವಾರವಷ್ಟೇ ಹೈದರಾಬಾದ್‌ನಲ್ಲಿ ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮುನವ್ವರ್ ಕಾರ್ಯಕ್ರಮ ನೀಡಿದ್ದರು. ಇದಕ್ಕೂ ಮೊದಲು, ರಾಜಾ ಸಿಂಗ್ ಅವರು ಫಾರೂಕಿ ಅವರ ಕಾರ್ಯಕ್ರಮವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದರು ಮತ್ತು ಸೆಟ್‌ಗೆ ಬೆಂಕಿ ಹಚ್ಚಿದರು. ಮುನವ್ವರ್ ಫಾರೂಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ರಾಜಾ ಸಿಂಗ್ ಹೇಳಿದ್ದಾರೆ. ಈ ಬೆದರಿಕೆಯ ನಂತರ, ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

ಪಕ್ಷದಿಂದ ಅಮಾನತು: ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ರಾಜಾ ಸಿಂಗ್‌ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ನೋಟಿಸ್‌ ಕೂಡ ಜಾರಿ ಮಾಡಿದ್ದು, 10 ದಿನಗಳ ಒಳಗಾಗಿ ಉತ್ತರಿಸುವಂತೆ ತಿಳಿಸಿದೆ.

ಮನೆಯಲ್ಲಿ ತೃಪ್ತಿ ಸಿಗ್ತಿಲ್ವಾ: ರಾಜಾ ಸಿಂಗ್‌ಗೆ ಒವೈಸಿ ಪ್ರಶ್ನೆ!

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮೇ 27 ರಂದು ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮದ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ಬಿಜೆಪಿ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ. ನೂಪುರ್ ಹೇಳಿಕೆಯ ವಿರುದ್ಧ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು.

ಪ್ರವಾದಿ ನಿಂದನೆ ವಿರುದ್ಧ ಕರ್ನಾಟಕದಲ್ಲೂ ತೀವ್ರ ಆಕ್ರೋಶ: ಬಿಗು ವಾತಾವರಣ

ಸುಪ್ರೀಂ ಕೋರ್ಟ್‌ನಲ್ಲಿ ನೂಪುರ್‌ ಶರ್ಮ ಪ್ರಕರಣದ ವಿಚಾರಣೆ: ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ನೂಪುರ್ ಶರ್ಮಾಗೆ ಛೀಮಾರಿ ಹಾಕಿತ್ತು. ಟಿವಿಯಲ್ಲಿ ನೂಪುರ್ ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು. ಅವರು ಜನರ ಭಾವನೆಗಳನ್ನು ಕೆರಳಿಸಿದ್ದು, ದೇಶಾದ್ಯಂತ ಏನೇ ನಡೆದರೂ ಅದಕ್ಕೆ ನೂಪುರ್ ಅವರೇ ಹೊಣೆ. ಅವರು ದೇಶದ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ. ಕೊನೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ನೀಡಿದ್ದ ಈ ಹೇಳಿಕೆಗಳ ವಿರುದ್ಧ ಸ್ವತಃ ಮಾಜಿ ನ್ಯಾಯಮೂರ್ತಿಗಳು ಹಾಗೂ ಐಪಿಎಸ್‌, ಹಾಗೂ ಐಎಎಸ್ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ಹೇಳುವ ವೇಳೆ ತನ್ನ ಲಕ್ಷ್ಮಣ ರೇಖೆಯನ್ನು ದಾಟಿದೆ ಎಂದು ಹೇಳಿತ್ತು. ಕೊನೆಗೆ ಸುಪ್ರೀಂ ಕೋರ್ಟ್‌ ಕೂಡ ಪ್ರಕರಣದ ವಿಚಾರಣೆ ನಡೆಸುವ ಮೂಲಕ ನೂಪುರ್‌ ಶರ್ಮ ಅವರಿಗೆ ವಿಚಾರಣೆ ಪೂರ್ಣ ಆಗುವವರೆಗೂ ಬಂಧನ ವಿನಾಯಿತಿ ನೀಡಿತ್ತು. ಅದಲ್ಲದೆ, ಆಕೆಯ ಜೀವಕ್ಕೆ ಅಪಾಯವಿರುವ ಕಾರಣ, ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಆದೇಶ ನೀಡುವ ಮೂಲಕ ರಿಲೀಫ್‌ ನೀಡಿತ್ತು

Follow Us:
Download App:
  • android
  • ios