Asianet Suvarna News Asianet Suvarna News

ಮನೆಯಲ್ಲಿ ತೃಪ್ತಿ ಸಿಗ್ತಿಲ್ವಾ: ರಾಜಾ ಸಿಂಗ್‌ಗೆ ಒವೈಸಿ ಪ್ರಶ್ನೆ!

ಮತ್ತೆ ನಾಲಿಗೆ ಹರಿಬಿಟ್ಟ ಅಸದುದ್ದೀನ್ ಒವೈಸಿ! ಬಿಜೆಪಿ ನಾಯಕ ರಾಜಾ ಸಿಂಗ್ ವಿರುದ್ಧ ಕೀಳು ಮಟ್ಟದ ಹೇಳಿಕೆ! ಒವೈಸಿ ತಲೆ ಕಡಿದರೆ ಮಾತ್ರ ತೃಪ್ತಿ ಎಂದಿದ್ದ ರಾಜಾ ಸಿಂಗ್! ಮನೆಯಲ್ಲಿ ತೃಪ್ತಿ ಸಿಗ್ತಿಲ್ವೇ ಎಂದು ಪ್ರಶ್ನಿಸಿದ ಅಸದುದ್ದೀನ್ ಒವೈಸಿ! ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡುವಂತೆ ಒವೈಸಿ ಆಗ್ರಹ

 

Verbal Fight Between Asaduddin Owaisi and  Raja Singh
Author
Bengaluru, First Published Nov 30, 2018, 4:16 PM IST
  • Facebook
  • Twitter
  • Whatsapp

ಹೈದರಾಬಾದ್(ನ.30): ತೆಲಂಗಾಣದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ತಾರಕಕ್ಕೇರಿದೆ.  

ಒವೈಸಿ ತಲೆ ಕಡಿದ ನಂತರವೇ ನನಗೆ ತೃಪ್ತಿ ಸಿಗುತ್ತದೆ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಇತ್ತಿಚೀಗೆ ಹೇಳಿದ್ದರು. ರಾಜಾ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಒವೈಸಿ, 'ಯಾಕೆ ಸಹೋದರ? ಮನೆಯಲ್ಲಿ ನಿನಗೆ ತೃಪ್ತಿ ಸಿಗುತ್ತಿಲ್ಲವೇ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. 

'ಬಿಜೆಪಿ ನಾಯಕರು ನನ್ನ ತಲೆ ಕಡಿದು, ಕಾಲಿನ ಕೆಳಗೆ ಇಟ್ಟುಕೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ಮನೆಯಲ್ಲಿ ನಿಮಗೆ ತೃಪ್ತಿ ಸಿಗುತ್ತಿಲ್ಲ ಎಂದರೆ, ವೈದ್ಯರ ಬಳಿ ಹೋಗಿ. ಇಲ್ಲವೇ ತಜ್ಞರ ಬಳಿ ಹೋಗಿ. ತೃಪ್ತಿ ಪಡೆಯಲು ಸಾಕಷ್ಟು ದಾರಿಗಳಿವೆ' ಎಂದು ಒವೈಸಿ ಮಾತಿನ ಮೂಲಕವೇ ಚುಚ್ಚಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರತ್ತ ತಮ್ಮ ಮಾತಿನ ಬಾಣ ಬಿಟ್ಟಿರುವ ಒವೈಸಿ, ಚುನಾವಣಾ ಪ್ರಚಾರಕ್ಕೆ ನೀವು ಹೈದರಾಬಾದ್‌ಗೆ ಬಂದಾಗ ಸಿಂಗ್ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ನಿಮಗೂ ತೃಪ್ತಿ ಸಿಗುತ್ತಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios