2011 ರಲ್ಲಿ ನಿರ್ಮಾಣವಾದ ಪೆನ್ ಈಗ ವಿಡಿಯೋ ಶೇರ್ ಮಾಡಿದ ಗಿನ್ನೆಸ್ ಸಂಸ್ಥೆ ಹಲವು ವಿಭಿನ್ನ ಪೆನ್‌ಗಳ ವಿವರ ನೀಡಿದ ಗಿನ್ನೆಸ್
ಖಡ್ಗಕ್ಕಿಂತ ಹರಿತವಾದುದು ಲೇಖನಿ ಎಂಬ ಮಾತಿದೆ. ಆದರೆ ಈಗ ಖಡ್ಗಕ್ಕಿಂತಲೂ ಭಾರವಾದುದು ಕೂಡ ಲೇಖನಿಯೇ ಎಂಬುದು ಸಾಬೀತಾಗುವ ಕ್ಷಣ ಬಂದಿದೆ. ಏಕೆ ಗೊತ್ತೆ? ಹೈದರಾಬಾದ್‌ನ ಆಚಾರ್ಯ ಮಕುನೂರಿ ಶ್ರೀನಿವಾಸ್ ಹಾಗೂ ಅವರ ತಂಡ 37 ಕೆಜಿ 23 ಗ್ರಾಂ ತೂಗುವ ಪೆನ್ನೊಂದನ್ನು ನಿರ್ಮಿಸಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಪೆನ್‌ನ ವಿಡಿಯೋವನ್ನು ಪೋಸ್ಟ್ ಮಾಡಿದೆ. ಪೆನ್ನಿನ ಹಿತ್ತಾಳೆಯ ಹೊರ ಕವಚ ಒಂಬತ್ತು ಕಿಲೋಗ್ರಾಂ ತೂಗುತ್ತದೆ. ಈ ಬಾಲ್‌ಪೆನ್ 5.5 ಮೀಟರ್ ಅಗಲವಿದ್ದು, 18 ಅಡಿ ಉದ್ದವಿದೆ. ಏಪ್ರಿಲ್ 24, 2011 ರಂದು ಹೈದರಾಬಾದ್‌ನಲ್ಲಿ ಈ ಪೆನ್‌ನ್ನು ಮೌಲ್ಯಮಾಪನ ಮಾಡಲಾಗಿತ್ತು. ಆದರೆ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಹಂಚಿಕೊಂಡಿರುವ ವಿಡಿಯೋದಲ್ಲಿ ಪುರುಷರ ತಂಡವು ಹೇಗೆ ಪೆನ್ನು ಹಿಡಿದು ದೊಡ್ಡದಾದ ಬಿಳಿ ಕಾಗದದ ಮೇಲೆ ಬರೆಯುತ್ತಿದ್ದಾರೆ ಎಂಬುದನ್ನು ತೋರಿಸಿದೆ.
ಪೆನ್ನುಗಳ ಬಗ್ಗೆ ಮಾತನಾಡುತ್ತಾ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ (Guinness World Records) ಇದುವರೆಗೆ ಜನ ಮಾಡಿದ ವಿಭಿನ್ನ ಪೆನ್‌ಗಳನ್ನು ಬಹಿರಂಗಪಡಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಫಿಶರ್ ಸ್ಪೇಸ್ ಪೆನ್ ಕಂ (USA) ಮಾಡಿದ ಸ್ಪೇಸ್ ಪೆನ್ ಅತ್ಯಂತ ವಿಭಿನ್ನವಾದ ಪೆನ್ ಆಗಿದೆ. ಇದು ವಿಸ್ಕೋ-ಎಲಾಸ್ಟಿಕ್ ಶಾಯಿಯನ್ನು ವಿತರಿಸಲು ವಿಶೇಷ ಸಾರಜನಕ-ಒತ್ತಡದ ಕಾರ್ಟ್ರಿಡ್ಜ್‌ಗಳನ್ನು ಬಳಸುತ್ತದೆ. ಈ ಪೆನ್ನುಗಳು ಸಂಪೂರ್ಣವಾಗಿ ತಲೆಕೆಳಗಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ತೀವ್ರವಾದ ಶಾಖ ಮತ್ತು ಶೀತ, ನೀರೊಳಗಿನ ಮತ್ತು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯನ್ನು ಒಳಗೊಂಡಂತೆ ವ್ಯಾಪಕವಾದ ಪರಿಸರ ಪರಿಸ್ಥಿತಿಗಳ ಅಡಿಯಲ್ಲಿಯೂ ಕಾರ್ಯನಿರ್ವಹಿಸುತ್ತವೆ.
ಅಬ್ಬಾ ಎಷ್ಟೊಂದು ಕೂದಲು ! ಸತತ 3 ವರ್ಷಗಳ ಕಾಲ ಗಿನ್ನಿಸ್ ದಾಖಲೆ
1968 ರಲ್ಲಿ ಅಪೊಲೊ 7 ಮಿಷನ್‌ನಲ್ಲಿ (Apollo 7 mission) ಬಾಹ್ಯಾಕಾಶದಲ್ಲಿ ಸ್ಪೇಸ್ ಪೆನ್ ಅನ್ನು ಮೊದಲು ಬಳಸಲಾಯಿತು ಮತ್ತು ಪ್ರಸ್ತುತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲಸ ಮಾಡುವವರನ್ನು ಒಳಗೊಂಡಂತೆ ಗಗನಯಾತ್ರಿಗಳಿಗೆ (astronauts) ಪ್ರಮಾಣಿತ ಪೆನ್ ಆಗಿ ಮಾರ್ಪಟ್ಟಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವರದಿ ಮಾಡಿದೆ. ನೋಡುವುದಕ್ಕೆ ಕ್ಷಿಪಣಿಯಂತೆ ಕಾಣುವ ಈ ಪೆನ್ ಅನ್ನು ನೋಡುಗರು ತಾವು ಕ್ಷಿಪಣಿಯಂತೆ ಭಾವಿಸಿದೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
Samsung India Guinness Record: ಗಿನ್ನೆಸ್ ರೆಕಾರ್ಡ್ ಸೇರಿದ ಸ್ಯಾಮ್ಸಂಗ್, ಏನದು ದಾಖಲೆ?
2018ರಲ್ಲಿ 3 ವರ್ಷದ ಪುಟ್ಟ ಬಾಲಕಿಯೊಬ್ಬಳು ಅರ್ಚರಿ (ಬಿಲ್ವಿದ್ಯೆ) ಯಲ್ಲಿ ಸಾಧನೆ ಮಾಡಿ ಗಿನ್ನೆಸ್ ಪುಟ ಸೇರಿದ್ದಳು. ಆಗ ತಾನೆ ಹೆಜ್ಜೆ ಇಡಲು ಶುರು ಮಾಡಿದ ಪುಟ್ಟ ಹುಡುಗಿ ತಮಿಳುನಾಡಿನ ಚೆನ್ನೈನ ನಿವಾಸಿ ಸಂಜನಾ ಅರ್ಚರಿಯಲ್ಲಿ ಸಾಧನೆ ಮಾಡಿದ್ದಳು. 8 ಮೀಟರ್ ದೂರದಿಂದ 1111 ಬಾಣಗಳನ್ನ ಯಶಸ್ವಿಯಾಗಿ ಈಕೆ ಗುರಿ ಸೇರಿಸಿದ್ದಳು. ಈ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಿದ್ದಾಳೆ. ಅರ್ಧ ಗಂಟೆಯಲ್ಲಿ ಸಂಜನಾ ಸಾವಿರ ಬಾಣಗಳನ್ನ ಟಾರ್ಗೆಟ್ ಪಾಯಿಂಟ್‌ಗೆ ಹೊಡೆದಿದ್ದಳು. ಈ ಸಾಧನೆಗೂ ಕೆಲ ತಿಂಗಳ ಮೊದಲಷ್ಟೇ ಬಿಲ್ವಿದ್ಯೆ ಕಲಿಯಲು ಆರಂಭಿಸಿದ ಬಾಲಕಿ ಕೆಲ ಸಮಯದಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನ ಪ್ರತಿನಿಧಿಸುವುದು ಇದೀಗ ಸಂಜನಾ ಮುಂದಿನ ಗುರಿ ಎಂದು ಕೋಚ್ ಸಂಜನಾಳ ಕೋಚ್ ಶಿಹಾನ್ ಹುಸ್ಸೈನಿ ಹೇಳಿದ್ದಾರೆ.