ಹೈದರಾಬಾದ್‌ನಲ್ಲಿ ತಾಯಿ ಮೃತಪಟ್ಟ ಬಳಿಕ ಅಂತ್ಯಕ್ರಿಯೆಗೂ ಹಣವಿಲ್ಲದೇ ಇಬ್ಬರು ಹೆಣ್ಣುಮಕ್ಕಳು ಒಂದು ವಾರದ ಕಾಲ ತಾಯಿ ಶವದೊಂದಿಗೆ ಕಾಲ ಕಳೆದಿದ್ದಾರೆ.
ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ತಾಯಿ ವಯಸ್ಸಿಗೂ ಮುನ್ನವೇ ಸಾವನ್ನಪ್ಪಿದ್ದರಿಂದ ಮಕ್ಕಳಿಗೆ ಜವಾಬ್ದಾರಿಯನ್ನೂ ಕಲಿಸಿಲ್ಲ. ಹಣಕಾಸಿನ ವ್ಯವಹಾರವನ್ನೂ ಕಲಿಸಿಲ್ಲ. ಹೀಗಾಗಿ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಸತ್ತ ನಂತರ ಹೇಗೆ ಅಂತ್ಯಕ್ರಿಯೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೇ ಹಾಗೂ ಅಂತ್ಯಕ್ರಿಯೆ ನಡೆಸಲು ಹಣವೂ ಇಲ್ಲದೇ ಇಬ್ಬರು ಹೆಣ್ಣು ಮಕ್ಕಳು ಒಂದು ವಾರದ ಕಾಲ ತಾಯಿಯ ಶವದೊಂದಿಗೆ ದಿನ ಕಳೆದಿದ್ದಾರೆ.
ಈ ಘಟನೆ ಹೈದರಾಬಾದ್ ನಗರದ ಹಿರ ಭಾಗದಲ್ಲಿ ನಡೆದಿದೆ. ಹೈದರಾಬಾದ್ ಹೊರವಲಯದಲ್ಲಿ ಸುತ್ತಮುತ್ತಲೂ ಯಾವುದೇ ಮನೆಗಳ್ಳಿಲ್ಲದೇ ಒಂಟಿಯಾಗಿದ್ದ ಮನೆಯಲ್ಲು ತಾಯಿ ಹಾಗೂ ಇಬ್ಬರು ವಯಸ್ಕ ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಮಕ್ಕಳಿಗೆ ಮನೆ ಜವಾಬ್ದಾರಿ ಹಾಗೂ ಆರ್ಥಿಕ ವ್ಯವಹಾರ ಜ್ಞಾನ ಬಗ್ಗೆ ಏನನ್ನೂ ಕಲಿಸಿಲ್ಲ. ತಾಯಿಯೇ ದುಡಿಯುತ್ತಾ ಮನೆ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಇನ್ನು ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ತಾಯಿ ಅಆರೋಗ್ಯದಿಂದ ಚೇತರಿಕೆ ಕಾಣದೇ ಜ.23ರಂದು ಮಲಗಿದ್ದ ಸ್ಥಳದಲ್ಲಿಯೇ ರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಇದಾದ ನಂತರ ಬೆಳಗ್ಗೆ ಮಕ್ಕಳು ಬಂದು ತಾಯಿಯನ್ನು ಎಬ್ಬಿಸಿದಾಗ ಅಮ್ಮ ಎದ್ದೇಳಲಿಲ್ಲ. ಆಗ ಅಕ್ಕ-ತಂಗಿ ಇಬ್ಬರೂ ಅಮ್ಮನನ್ನು ಪರೀಕ್ಷೆ ಮಾಡಿದಾಗ ಆಕೆಯ ಉಸಿರು ನಿಂತು ಹೋಗಿದ್ದು, ಎದೆಬಡಿತವೂ ನಿಂತು ಹೋಗಿ ದೇಹ ತಣ್ಣಗಾಗಿತ್ತು. ಇದರಿಂದ ಭಯಭೀತರಾದ ಮಕ್ಕಳಿಬ್ಬರೂ ಆತಂಕಕ್ಕೆ ಒಳಗಾಗಿದ್ದಾರೆ. ಅಮ್ಮನನ್ನು ಕಳೆದುಕೊಂಡು ಮುಂದೆ ಏನು ಮಾಡಬೇಕು ಎಂದು ತಿಳಿಯದೇ ಖಿನ್ನತೆಗೆ ಒಳಗಾಗಿದ್ದಾರೆ.
ಇದಾದ ನಂತರ, ತಮ್ಮ ಮನೆಗೆ ಓಟು ಕೇಳಲು ಬಂದಿದ್ದ ಶಾಸಕರ ಮನೆಗೆ ತೆರಳಿ ತಮ್ಮ ತಾಯಿಯ ಅಂತ್ಯಕ್ರಿಯೆ ಹಣವಿಲ್ಲ ಕೊಡಿ ಎಂದು ಕೇಳಿದಾಗ ಈ ಘಟನೆ ಬಯಲಿಗೆ ಬಂದಿದೆ.
ಇದನ್ನೂ ಓದಿ: ದಿವ್ಯಾಂಗ ಮಹಿಳೆಗೆ 40 ರೂಪಾಯಿ ಟೋಲ್ ಚಾರ್ಜ್ ಹಾಕಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭಾರೀ ದಂಡ!
ಹೈದರಾಬಾದ್ ನಗರದ ಒಂಟಿ ಮನೆಯಲ್ಲಿ ವಾಸವಿದ್ದ ತಾಯಿ (45) ಜನವರಿ 23 ರಂದು ತೀರಿಕೊಂಡಿದ್ದಾರೆ. ಬೆಳಿಗ್ಗೆ ತಾಯಿ ನಿದ್ದೆಯಿಂದ ಎದ್ದೇಳದಿದ್ದಾಗ ಹೆಣ್ಣುಮಕ್ಕಳು ಪರಿಶೀಲಿಸಿದಾಗ ನಾಡಿಮಿಡಿತ, ಉಸಿರಾಟ ಅಥವಾ ಹೃದಯ ಬಡಿತ ಇಲ್ಲ ಎಂದು ತಿಳಿದುಬಂದಿದೆ. ಇದರಿಂದ ಮೃತ ಮಹಿಳೆಯ 25 ವರ್ಷ ಮತ್ತು 22 ವರ್ಷದ ಹೆಣ್ಣುಮಕ್ಕಳು ತಾಯಿಯ ಖಿನ್ನತೆಗೆ ಒಳಗಾಗಿದ್ದರು. ತಾಯಿ ತೀರಿಕೊಂಡಿದ್ದಾರೆ ಎಂದು ತಿಳಿದ ನಂತರ ಇಬ್ಬರೂ ಬಾಗಿಲು ಮುಚ್ಚಿಕೊಂಡು ಮನೆಯಲ್ಲೇ ಶವದೊಂದಿಗೆ ಒಂದು ವಾರಕ್ಕೂ ಹೆಚ್ಚು ಕಾಲ ಕಳೆದಿದ್ದಾರೆ. ಜನವರಿ 31 ರಂದು ಪೊಲೀಸರು ಇವರನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲೇ ಮುಕ್ತಿ ಪಡೆದ ಅಘೋರಿ ಬಾಬಾ: ವೀಡಿಯೋ ವೈರಲ್
ತಾಯಿ ಮತ್ತು ಮಕ್ಕಳು ಒಂಟಿ ಮನೆಯಲ್ಲಿ ವಾಸಿಸುತ್ತಿದ್ದರಿಂದ ಒಂದು ವಾರ ಕಳೆದರೂ ಸಹ ನೆರೆಹೊರೆಯವರಿಗೆ ದುರ್ವಾಸನೆ ಬಂದಿರಲಿಲ್ಲ. ಜನವರಿ 31 ರಂದು ಮನೆಯಿಂದ ಹೊರಬಂದ ಇಬ್ಬರೂ ಶಾಸಕರ ಕಚೇರಿಗೆ ತೆರಳಿ, ನಮ್ಮ ತಾಯಿ ತೀರಿಕೊಂಡಿದ್ದಾರೆ. ಅವರ ಅಂತ್ಯಕ್ರಿಯೆಗೆ ನಮ್ಮ ಬಳಿ ಹಣವಿಲ್ಲ ಎಂದು ತಿಳಿಸಿದ್ದಾರೆ. ಶಾಸಕರ ಕಚೇರಿಯಿಂದ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಬಳಿಕ ಪೊಲೀಸರ ನೇತೃತ್ವದಲ್ಲಿ ಇಬ್ಬರೂ ಮಕ್ಕಳನ್ನು ಸಂಪರ್ಕ ಮಾಡಿದಾಗ ಅವರ ತಾಯಿ ಮೃತಪಟ್ಟು ಒಂದು ವಾರವೇ ಕಳೆದಿದ್ದು, ದುರ್ವಾಸನೆ ಬಂದಿದ್ದ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ ನಂತರ ಕಚೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
