Asianet Suvarna News Asianet Suvarna News

ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಬೃಹತ್ ಮರ: ಗಂಡ ಸಾವು, ಹೆಂಡತಿ ಗಂಭೀರ: ಆಘಾತಕಾರಿ ದೃಶ್ಯ ವೈರಲ್

ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಗಂಡ ಸ್ಥಳದಲ್ಲೇ ಸಾವನ್ನಪ್ಪಿ ಹೆಂಡತಿ ಗಂಭೀರವಾಗಿ ಗಾಯಗೊಂಡ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ನಡೆದಿದೆ

Hyderabad A huge tree fell on a couple who traveling on a scooter husband died, wife seriously injured, tragic incident captured in cctv goes viral akb
Author
First Published May 21, 2024, 3:24 PM IST

ಸಿಕಂದರಬಾದ್‌: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಗಂಡ ಸ್ಥಳದಲ್ಲೇ ಸಾವನ್ನಪ್ಪಿ ಹೆಂಡತಿ ಗಂಭೀರವಾಗಿ ಗಾಯಗೊಂಡ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ನಡೆದಿದೆ. ದಂಪತಿ ಚಿಕಿತ್ಸೆಗಾಗಿ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಆಗಮಿಸುತ್ತಿದ್ದ ವೇಳೆ ಈ ನಿರೀಕ್ಷಿಸದ ಘಟನೆ ನಡೆದಿದ್ದು, ಘಟನೆಯ ಲೈವ್ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

ಹೈದರಾಬಾದ್ ಸಿಕಂದರಬಾದ್‌ನಲ್ಲಿರುವ ಬೊಲ್ಲರಾಮ್ ಕಂಟೋನ್ಮೆಂಟ್ ಆಸ್ಪತ್ರೆ ಆವರಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ದಂಪತಿ ಸ್ಕೂಟರ್‌ನಲ್ಲಿ ಆಸ್ಪತ್ರೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಬೃಹತ್ ಮರವೊಂದು ಅವರ ಮೇಲೆ ಬಿದ್ದಿದೆ. ಇದೇ ವೇಳೆ ಮತ್ತೊಂದು ಸ್ಕೂಟರ್ ಚಾಲಕನ್ನು  ಮತ್ತೊಂದು ದಿಕ್ಕಿನಿಂದ ಬಂದಿದ್ದು, ಆದರೆ ಆತ ಮರ ಬೀಳುತ್ತಿರುವುದನ್ನು ಗಮನಿಸಿ ಸ್ಕೂಟರ್‌ನ್ನು ಅಲ್ಲೇ ನಿಲ್ಲಿಸಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾನೆ. 

ಕಾಫಿನಾಡ ಮಳೆಗೆ ಮೂರನೇ ಬಲಿ; ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಮುರಿದುಬಿದ್ದ ಮರ

ಮರ ಬಿದ್ದ ಕೂಡಲೇ ಸೆಕ್ಯೂರಿಟಿ ಗಾರ್ಡ್ ಒಬ್ಬರು ದಂಪತಿಯ ರಕ್ಷಣೆಗೆ ಓಡಿ ಬರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮತ್ತೊಂದು ವೀಡಿಯೋದಲ್ಲಿ  ಮರಗಳನ್ನು ತೆರವು ಮಾಂಡುವ ವೇಳೆ ಮರದಡಿ ಸ್ಕೂಟರ್ ಅಪ್ಪಚ್ಚಿಯಾಗಿರುವುದನ್ನು ಕಾಣಬಹುದಾಗಿದೆ. 

ಈ ದುರಂತದಲ್ಲಿ ಸಂತ್ರಸ್ತರಾದ ದಂಪತಿಯನ್ನು ರವೀಂದರ್ ಹಾಗೂ ಸರಳಾ ದೇವಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರವೀಂದರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸರಳಾ ದೇವಿ ಅವರನ್ನು ಕೂಡಲೇ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು.  ನಂತರ ಆಸ್ಪತ್ರೆ ಸಿಬ್ಬಂದಿ ಆಗಮಿಸಿ ರವೀಂದರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.  ಒಟ್ಟಿನಲ್ಲಿ ಸಾವು ಹೇಗೆ ಬರುತ್ತದೆ ಎಂದು ಹೇಳಲಾಗದು ಯಾವಾಗ ಬೇಕಾದರೂ ಬರಬಹುದು, ಅದಕ್ಕೆ ಈ ಘಟನೆಯೇ ಸಾಕ್ಷಿ.

ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆ ಮರ ಬಿದ್ದು ಯುವಕ ಸಾವು

ಇಲ್ಲಿದೆ ಸಿಸಿ ಕ್ಯಾಮರಾದಲ್ಲಿ ಸೆರೆ ಆದ ಆಘಾತಕಾರಿ ದೃಶ್ಯದ ವೀಡಿಯೋ

 

Latest Videos
Follow Us:
Download App:
  • android
  • ios