* ಇದುವರೆಗೆ ಭದ್ರತಾ ಪಡೆಗಳ ಕಣ್ಗಾವಲಿಗೆ ಒಳಪಡದ ಹುಡುಗರಿಗೆ ಹಣ ನೀಡಿ ದಾಳಿ* ಪಾಕ್‌ ಉಗ್ರ ಸಂಘಟನೆಗಳ ಹೊಸ ತಂತ್ರ ಪತ್ತೆ* ಇತ್ತೀಚಿನ ದಾಳಿಗೆ ಇದೇ ತಂತ್ರ ಬಳಕೆ* ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಹೈಬ್ರಿಡ್‌ ಭಯೋತ್ಪಾದಕರ ಬಳಕೆ

ಶ್ರೀನಗರ(ಅ.11): ಕಾಶ್ಮೀರದಲ್ಲಿ(Kashmir) ಹಿಂದೂ(Hindu) ಹಾಗೂ ಸಿಖ್ಖರ(Sikh) ಮೇಲೆ ನಡೆದಿರುವ ಭಯೋತ್ಪಾದಕ ದಾಳಿಗಳ(Terror Attack) ಹಿಂದೆ ಹೊಸದಾಗಿ ಇನ್ನೂ ಉಗ್ರ ಸಂಘಟನೆಗಳಿಗೆ ನಿಯೋಜಿತವಾಬೇಕಾಗಿರುವ ಮತ್ತು ಭದ್ರತಾ ಪಡೆಗಳ ಕಣ್ಗಾವಲಿಗೆ ಒಳಪಡದ ಉಗ್ರರು ಇದ್ದಾರೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಇದು ಪಾಕ್‌ ಉಗ್ರವಾದಿ ಸಂಘಟನೆಗಳ ಹೊಸ ತಂತ್ರ. ಇನ್ನೂ ಉಗ್ರರಾಗದೇ ಇರುವವರ ಮೇಲೆ ಪೊಲೀಸರ ಕಣ್ಣು ಇರುವುದಿಲ್ಲ. ಇಂಥದ್ದೇ ಯುವಕರನ್ನು ಪಾಕ್‌ ಉಗ್ರ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಪಾಕ್‌ನಿಂದ(Pakistan) ಕಾಶ್ಮೀರಕ್ಕೆ ಒಳನುಸುಳಿರುವ ಉಗ್ರ ನಾಯಕರು, ಈ ಯುವಕರನ್ನು ದುಡ್ಡಿನ ಆಮಿಷವೊಡ್ಡಿ ತಮ್ಮ ಬಲೆಗೆ ಕೆಡವಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ರೀತಿ ಬಲೆಗೆ ಬೀಳುವ ಉಗ್ರರಿಗೆ ಸಾಮಾನ್ಯ ಪಿಸ್ತೂಲು ನೀಡಲಾಗುತ್ತದೆ ಹಾಗೂ ಇಂಥವರನ್ನೇ ಸಾಯಿಸಬೇಕು ಎಂಬ ಗುರಿ ನೀಡಲಾಗುತ್ತದೆ. ಈ ಯುವಕರು ತಮ್ಮ ಸೂಚಕರ ಸೂಚನೆಯಂತೆ, ನಿರ್ದಿಷ್ಟಗುರಿಗಳ ಮೇಲೆ ದಾಳಿ ನಡೆಸುತ್ತಾರೆ ಹಾಗೂ ಕೂಡಲೇ ತಮ್ಮ ಉಗ್ರ ನಾಯಕನಿಗೆ ಪಿಸ್ತೂಲು ಮರಳಿಸುತ್ತಾರೆ. ಬಳಿಕ ತಾವು ಏನೂ ಮಾಡೇ ಇಲ್ಲ ಅನ್ನುವ ರೀತಿ ಮನೆ ಸೇರಿಕೊಂಡು ಸಾಮಾನ್ಯರಂತೆ ನಟಿಸುತ್ತಾರೆ. ಅತ್ತ ಪಾಕ್‌ ಉಗ್ರರು ಕೂಡ ತಾವು ಈ ಕೃತ್ಯ ಎಸಗೇ ಇಲ್ಲ ಎಂದು ಜಾರಿಕೊಳ್ಳುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಹೊಸದಾಗಿ ನೇಮಕ ಆದವರು ಈ ರೀತಿ ಅತ್ಯಾಧುನಿಕ ಬಂದೂಕಿನ ಬದಲು ಪಿಸ್ತೂಲು ಬಳಸಿ ದಾಳಿ ನಡೆಸುತ್ತಾರೆ. ಇಂಥ ಪಾರ್ಟ್‌ ಟೈಂ/ಹೈಬ್ರಿಡ್‌ ಉಗ್ರರಿಗೆ ಶೋಧ ನಡೆಸಿದ್ದೇವೆ’ ಎಂದು ಕಾಶ್ಮೀರ ಪೊಲೀಸ್‌ ಮಹಾನಿರೀಕ್ಷಕ ವಿಜಯಕುಮಾರ್‌ ಹೇಳಿದ್ದಾರೆ.

ಪಾರ್ಟ್‌ ಟೈಂ ಉಗ್ರರು

ಹೊಸದಾಗಿ ನೇಮಕ ಆದವರು ಅತ್ಯಾಧುನಿಕ ಬಂದೂಕಿನ ಬದಲು ಪಿಸ್ತೂಲು ಬಳಸಿ ದಾಳಿ ನಡೆಸುತ್ತಾರೆ. ಇಂಥ ಪಾರ್ಟ್‌ ಟೈಂ ಅಥವಾ ಹೈಬ್ರಿಡ್‌ ಉಗ್ರರಿಗೆ ಶೋಧ ನಡೆಸಿದ್ದೇವೆ.

- ವಿಜಯಕುಮಾರ್‌, ಕಾಶ್ಮೀರ ಪೊಲೀಸ್‌ ಮಹಾನಿರೀಕ್ಷಕ

ಹೈಬ್ರಿಡ್‌ ತಂತ್ರ

- ಕಾಶ್ಮೀರದ ಅಮಾಯಕ ಯುವಕರಿಗೆ ಹಣದ ಆಮಿಷವೊಡ್ಡಿ ಮನವೊಲಿಕೆ

- ಇವರ ಮೇಲೆ ಪೊಲೀಸ್‌ ಕಣ್ಣಿರುವುದಿಲ್ಲ, ಹೀಗಾಗಿ ಉಗ್ರರ ಕಾರ‍್ಯ ಸಲೀಸು

- ಈ ಹುಡುಗರಿಗೆ ಆಧುನಿಕ ಬಂದೂಕಿನ ಬದಲು ಸಾಮಾನ್ಯ ಪಿಸ್ತೂಲ್‌ ನೀಡಿಕೆ

- ನಿರ್ದಿಷ್ಟವ್ಯಕ್ತಿಗಳ ಕೊಲ್ಲಲು ಸೂಚನೆ; ಕೃತ್ಯದ ಬಳಿಕ ಪಿಸ್ತೂಲ್‌ ವಾಪಸ್‌

- ಹತ್ಯೆ ನಂತರ ಅಮಾಯಕರಂತೆ ಮನೆ ಸೇರಿಕೊಳ್ಳುವ ಹೈಬ್ರಿಡ್‌ ಉಗ್ರರು

"