ಕಾಶಿಪುರ್(ಜ.22): ಪತಿ-ಪತ್ನಿ ಸಂಬಂಧ ಅದೊಂದು ಅನೋನ್ಯ ಅನುಬಂಧ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪವಿತ್ರ ಸಂಬಂಧಕ್ಕೆ ಮಸಿ ಬಳಿಯವುದು ದೇವರಿಗೆ ಅನ್ಯಾಯ ಮಾಡಿದಂತೆಯೇ ಸರಿ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಉತ್ತರಾಖಂಡ್‌ನ ಕಾಶಿಪುರ್‌ದಲ್ಲಿ ನಡೆದ ವಿಚಿತ್ರ ಘಟನೆ. ಈ ಗಟನೆಯಲ್ಲಿ ನೈಜ ಆರೋಪಿ ಯಾರೂ ಎಂಬುದು ತಿಳಿಯದೇ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪತ್ನಿಯ ನಡೆ ಬಗ್ಗೆ ಅನುಮಾನಗೊಂಡಿದ್ದ ಪತಿಯೋರ್ವ ದಲ್ಲಾಳಿ ಮೂಲಕ ಕಾಲ್‌ಗರ್ಲ್ ಕರೆಸಿಕೊಂಡಿದ್ದ.  ಆದರೆ ಕಾಲ್‌ಗರ್ಲ್ ಆಗಿ ಆತನ ಪತ್ನಿಯೇ ಬಂದಿದ್ದು, ಇದನ್ನು ಕಂಡ ಪತಿ ದಿಗ್ಭ್ರಾಂತಗೊಂಡಿದ್ದಾನೆ.

ವರನ ಅಪ್ಪ, ವಧುವಿನ ಅಮ್ಮ ಪರಾರಿ: ನವಜೋಡಿ ಕುಳಿತಿದೆ ಹೌಹಾರಿ!

ಹೌದು, ಇಲ್ಲಿನ ಕಾಶಿಪುರ್‌ದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದ್ದು, ಪತ್ನಿ  ವೈಶ್ಯಾವಾಟಿಕೆಯಲ್ಲಿ ತೊಡಗಿರುವ ಕುರಿತು ಅನುಮಾನಪಟ್ಟಿದ್ದ ಪತಿ, ಉದ್ದೇಶಪೂರ್ವಕವಾಗಿ ಕಾಲ್‌ಗರ್ಲ್‌ಗಾಗಿ ದಲ್ಲಾಳಿಯನ್ನು ಸಂಪರ್ಕಿಸಿದ್ದ.

ಅದರಂತೆ ದಲ್ಲಾಳಿ ಆತ ತಂಗಿದ್ದ ಹೋಟೆಲ್‌ಗೆ ಕಾಲ್‌ಗರ್ಲ್‌ ಬಂದಾಗ, ಆಕೆ ಆತ ಪತ್ನಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ಭಾರೀ ರಂಪಾಟವೇ ನಡೆದಿದ್ದು, ಕೈ ಕೈ ಮೀಲಾಯಿಸಿ ಕಿತ್ತಾಡಿಕೊಂಡಿದ್ದಾರೆ.

ಮದುವೆಯಾದ ಮೇಲೆ ಗಂಡನ ಜೊತೆಗೆ ಇರುವುದನ್ನು ನಿಲ್ಲಿಸಿದ್ದ ಪತ್ನಿ, ಹೆಚ್ಚಾಗಿ ತವರು ಮನೆಯಲ್ಲೇ ಇರುತ್ತಿದ್ದಳು. ಅಲ್ಲದೇ ಹಣಕ್ಕಾಗಿ ವೈಶ್ಯಾವಾಟಿಕೆ ನಡೆಸುತ್ತಿದ್ದಳು ಎನ್ನಲಾಗಿದೆ. ಈ ಕುರಿತು ಆಕೆಯ ಗೆಳತಿಯೇ ಗಂಡನಿಗೆ ಮಾಹಿತಿ  ನೀಡಿದ್ದಳು.

ಪತ್ನಿಯ ಗೆಳತಿ ಹೇಳಿದ್ದನ್ನು ಕೇಳಿ ದಂಗಾದ ಪತಿ, ತನ್ನ ಪತ್ನಿಯ ಅಸಲಿಯತ್ತು ಅರಿಯಲು ತಾನೇ ಖುದ್ದಾಗಿ ಮಹಿಳಾ ದಲ್ಲಾಳಿಯನ್ನು ಸಂಪರ್ಕಿಸಿ ಕಾಲ್‌ಗರ್ಲ್‌ಗಾಗಿ ಬೇಡಿಕೆ ಇಟ್ಟಿದ್ದ. ಅದರಂತೆ ಹೋಟೆಲ್‌ಗೆ ತನ್ನ ಪತ್ನಿಯೇ ಬಂದ ಮೇಲೆ ಆಕೆಯೊಂದಿಗೆ ಕಿತ್ತಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಬ್ಬಳ ಮೇಲೆ ಇಬ್ಬರಿಗೆ ಲವ್ : ಕೊಲೆಯಲ್ಲಿ ಅಂತ್ಯವಾಯ್ತು ಪ್ರೇಮ ಪ್ರಕರಣ

ಬಳಿಕ ಪೊಲೀಸ್ ಠಾಣೆಗೆ ಇಬ್ಬರೂ ಪರಸ್ಪರರ ವಿರುದ್ಧ ದೂರು ನೀಡಿದ್ದು, ಪತ್ನಿ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಎಂದು ಗಂಡ ಆರೋಪಿಸಿದರೆ, ಪತಿ ವಿವಾಹೇತರ ಸಂಬಂದ ಹೊಂದಿರುವುದನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹೊಟೇಲ್‌ಗೆ ಹೋಗಿದ್ದಾಗಿ ಪತ್ನಿ ವಾದಿಸಿದ್ದಾಳೆ.