ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ರೋಲ್ ಮಾಡೆಲ್ ತೇಜಸ್ವಿ ಸೂರ್ಯ ಭೇಟಿಯಾದ ಖುಷಿಗೆ ಕಣ್ಣೀರಿಟ್ಟಿದ್ದಾರೆ. ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದಾರೆ. ಯುವ ಕಾರ್ಯಕರ್ತನನ್ನು ತೇಜಸ್ವಿ ಸೂರ್ಯ ಆತ್ಮೀಯವಾಗಿ ಮಾತನಾಡಿಸಿ ಹುರಿದುಂಬಿಸಿದ ವಿಡಿಯೋ ವೈರಲ್ ಆಗಿದೆ.
ನವದೆಹಲಿ(ಜು.13) ಸಂಸದ ತೇಜಸ್ವಿ ಸೂರ್ಯ ಪ್ರಖರ ಮಾತು, ನಾಯಕತ್ವ ಹಾಗೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳಿಂದ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ಹಲವು ಯವ ಸಮೂಹಕ್ಕೆ ರೋಲ್ ಮಾಡೆಲ್ ಆಗಿದ್ದಾರೆ. ತೇಜಸ್ವಿ ಸೂರ್ಯ ಕಚೇರಿಗೆ ಪ್ರತಿದಿನ ಹಲವರು ಆಗಮಿಸಿ ತಮ್ಮ ಕೆಲಸ ಕಾರ್ಯಗಳ ಕುರಿತು ಮಾತನಾಡುತ್ತಾರೆ.ಕ್ಷೇತ್ರ ಜನತೆ ತಮ್ಮ ಸಮಸ್ಯೆಗಳ ಅರ್ಜಿ ನೀಡಿ ಪರಿಹಾರಕ್ಕೆ ಮನವಿ ಮಾಡುವುದು ಪ್ರತಿ ದಿನ ನಡೆಯುತ್ತಿದೆ. ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ತೇಜಸ್ವಿ ಸೂರ್ಯ ಭೇಟಿ ಮಾಡಲು ಬಿಜೆಪಿ ಕಾರ್ಯಕರ್ತ ಆಗಮಿಸಿದ್ದ. ಆದರೆ ತೇಜಸ್ವಿ ಸೂರ್ಯ ಭೇಟಿ ಮಾಡಿದ ಖುಷಿಗೆ ಕಾರ್ಯಕರ್ತ ಕಣ್ಣೀರಿಟ್ಟಿದ್ದಾನೆ.ವಿಡಿಯೋ ವೈರಲ್ ಆಗಿದೆ.
ಪ್ರತಿ ದಿನದಂದೆ ಇಂದು ಕೂಡ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹಲವು ಕಾರ್ಯಕರ್ತರು ಭೇಟಿಗಾಗಿ ಕುಳಿತಿದ್ದರು. ಈ ವೇಳೆ ಯುವಕ ಕೂಡ ಆಗಮಿಸಿದ್ದಾನೆ. ಸರದಿ ಸಾಲಿನಲ್ಲಿ ಕುಳಿತಿದ್ದಾನೆ. ಪ್ರತಿಯೊಬ್ಬರು ತಮ್ಮ ತಮ್ಮ ನಾಯಕರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. ಇತ್ತ ಸರದಿ ಸಾಲಿನಲ್ಲಿ ಕುಳಿತಿದ್ದ ಯುವ ಕಾರ್ಯಕರ್ತ ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಬೇಕು ಎಂದಿದ್ದಾನೆ. ಹೀಗಾಗಿ ಯುವಕನ ಕರೆಸಿ ತೇಜಸ್ವಿ ಸೂರ್ಯ ಮಾತನಾಡಿಸಿದ್ದಾರೆ. ಬಿಜೆಪಿ ಯುವ ಕಾರ್ಯಕರ್ತನ ಸರದಿ ಬಂದಾಗ ಕಚೇರಿಯ ಒಳ ಪ್ರವೇಶಿಸಿದ್ದಾನೆ. ತೇಜಸಿ ಸೂರ್ಯ ನೋಡಿ ಕೈಕುಲುಕಿ ತನ್ನ ಹೆಸರು ಪರಿಚಯ ಮಾಡಿಕೊಂಡಿದ್ದಾನೆ. ಹಸ್ತಲಾಘವ ನೀಡಿದ ಬೆನ್ನಲ್ಲೇ ಕಾರ್ಯಕರ್ತ ಭಾವುಕನಾಗಿದ್ದಾನೆ. ಇದೇ ವೇಳೆ ತೇಜಸ್ವಿ ಸೂರ್ಯ ಮಾತುಗಳನ್ನು ಕೇಳಿ ಕಣ್ಮೀರಿಟ್ಟಿದ್ದಾನೆ.
ಸಂಸದ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ: ವಜ್ರ, ಹಣಕ್ಕೆ ಬೇಡಿಕೆ
ಯವ ಕಾರ್ಯಕರ್ತನ ಊರು, ಉದ್ಯೋಗ ಸೇರಿದಂತೆ ಕೆಲ ಮಾಹಿತಿಗಳನ್ನು ತೇಜಸ್ವಿ ಸೂರ್ಯ ಕೇಳಿದ್ದಾರೆ. ತನ್ನ ರೋಲ್ ಮಾಡೆಲ್ ಸಂಸದನ ಭೇಟಿಯಾದ ಖುಷಿಗೆ ಯುವ ಕಾರ್ಯಕರ್ತ ಕಣ್ಣೀರಿಟ್ಟಿದ್ದಾನೆ. ನಿಮ್ಮನ್ನು ಭೇಟಿಯಾಗಿರುವುದು ನನಗೂ ಖುಷಿ ನೀಡಿದೆ ಆರಾಮವಾಗಿ ಕುಳಿತುಕೊಳ್ಳಿ ಎಂದು ಯುವ ಕಾರ್ಯಕರ್ತನಿಗೆ ಹೇಳಿದ್ದಾರೆ. ಇದೇ ವೇಳೆ ಯುವ ಕಾರ್ಯಕರ್ತ ತೇಜಸ್ವಿ ಸೂರ್ಯ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದಾರೆ. ಅರೇ ಈ ರೀತಿ ಯಾಕೆ ಮಾಡುತ್ತೀರಿ ಎಂದು ತೇಜಸ್ವಿ ಸೂರ್ಯ ಯುವಕನ ತಡೆದಿದ್ದಾರೆ. ಬಳಿಕ ಶಿರಬಾಗಿ ನಮಸ್ಕರಿಸಿದ್ದಾರೆ.
ಯುವ ಕಾರ್ಯಕರ್ತನ ಜೊತೆ ಮಾತನಾಡಿದ ಸೂರ್ಯ, ಸಂತೈಸಿದ್ದಾರೆ. ಆತನ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ತೇಜಸ್ವಿ ಸೂರ್ಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕಾಂಗ್ರೆಸ್ ಸುಳ್ಳಿನ ಸರ್ಕಾರ ನಡೆಸುತ್ತಿದ್ದು ‘ಅಕ್ಕಿ ಆರೋಪ’ ಸುಳ್ಳು: ಸಂಸದ ತೇಜಸ್ವಿ ಸೂರ್ಯ
ಇತ್ತೀಚೆಗೆ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕುರಿತು ದೂರು ದಾಖಲಿಸಿದ್ದಾರೆ. ಈ ಪ್ರಕರಣ ಇದೀಗ ಭಾರಿ ಚರ್ಚೆಯಾಗುತ್ತಿದೆ.ಕಾರಣ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಮೊಬೈಲ್ ಕೂಡ ಹ್ಯಾಕ್ ಮಾಡಿ ಕಾಂಗ್ರೆಸ್ ನಾಯಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ತೇಜಸ್ವಿ ಸೂರ್ಯ ಹಾಗೂ ಕಮಲ್ ನಾಥ್ ಪ್ರಕರಣಗಳಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.
