ನಿಮ್ಮ ಮನೆ ಮಂಚದ ಕೆಳಗೆ 8 ಅಡಿ ಕಾಳಿಂಗ ಬಚ್ಚಿಟ್ಟುಕೊಂಡರೆ! ವಿಡಿಯೋ
ಮನೆಯ ಮಂಚದ ಕೆಳಗೆ ಬೆಚ್ಚನೆ ಕುಳಿತಿದ್ದ ಕಾಳಿಂಗ ಸರ್ಪ/ ಕಾಳಿಂಗ ಸರ್ಪ ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ/ ಉತ್ತರಾಖಂಡದ ನೈನಿತಾಲ್ ನ ಮೆಯೊಂದಕ್ಕೆ ನುಗ್ಗಿದ್ದ ಕಾಳಿಂಗ
ನೈನಿತಾಲ್ (ಉತ್ತರಾಖಂಡ)(ಆ. 13) ಆರೆಂಟು ಅಡಿ ಉದ್ದದ ಕಾಳಿಂಗ ಸರ್ಪ ನಿಮ್ಮ ಮನೆಯ ಬೆಡ್ ರೂಂ ಮಂಚದ ಕೆಳಗೆ ಬೆಚ್ಚಗೆ ಬಚ್ಚಿಟ್ಟುಕೊಂಡರೆ! ಹೌದು ಸುದ್ದಿ ಊಹೆ ಮಾಡಿಕೊಂಡರೆ ಮೈಯೆಲ್ಲ ನಡುಕ ಬರುತ್ತದೆ. ಆದರೆ ಇಂಥದ್ದೇ ಒಂದು ಘಟನೆ ನಡೆದುಹೋಗಿದೆ.
ಉತ್ತರಾಖಂಡದ ನೈನಿತಾಲ್‌ನ ಮನೆಯೊಂದಕ್ಕೆ ಪ್ರವೇಶ ಮಾಡಿದ್ದ ಕಾಳಿಂಗ ಸರ್ಪ ಮಂಚದ ಅಡಿಗೆ ಅಡಿ ತೆರಳಿ ಬೆಚ್ಚಗೆ ಕುಳೀತುಕೊಂಡಿದೆ. ಮನೆಯವರ ಕಣ್ಣಿಗೆ ಹೇಗೋ ಬಿದ್ದಿದೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ್..ಕಾರಣ?
ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಇಲಾಖೆ ಕ್ಷಿಪ್ರ ಕಾರ್ಯ ಪಡೆ ಮನೆಗೆ ಆಗಮಿಸಿ ಹಾವನ್ನು ಹಿಡಿದಿದೆ. ಉರಗ ತಜ್ಞರೊಬ್ಬರು ಮನೆಯಲ್ಲಿ ಕಾಳಿಂಗವನ್ನು ಹಿಡಿಯುತ್ತಿರುವ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಟ್ಟು ಬರಲಾಗಿದೆ. ಅರಣ್ಯಾಧಿಕಾರಿ ಅಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಹಾವನ್ನು ಹಿಡಿಯುವುದರಿಂದ ಹಿಡಿದು ಅರಣ್ಯಕ್ಕೆ ಬಿಟ್ಟು ಬರುವಲ್ಲಿವರೆಗಿನ ವಿಡಿಯೋ ಮಾಡಲಾಗಿದ್ದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡುಬರುತ್ತವೆ.