ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಚುರುಮುರಿ ವ್ಯಾಪಾರಿಯೊಬ್ಬರಿಗೆ ನೀಡಿದ 10 ರೂಪಾಯಿ ನೋಟಿಗೆ, ಹರಿಯಾಣದ ವ್ಯಕ್ತಿಯೊಬ್ಬರು 1,11,000 ರೂ. ನೀಡುವುದಾಗಿ ಆಫರ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಮೋದಿ ನೀಡಿದ 10 ರೂ. ನೋಟಿಗೆ ಭಾರಿ ಬೇಡಿಕೆ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಹವಾ ಜೋರಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ವೇಳೆ ಅಲ್ಲಿನ ಚುರುಮುರಿ ಅಂಗಡಿಯೊಂದಕ್ಕೆ ಭೇಟಿ ನೀಡಿ ಅಲ್ಲಿ 10 ರೂಪಾಯಿ ನೀಡಿ ಚುರುಮುರಿ ಕೊಂಡು ತಿಂದಿದ್ದರು. ಈ ವೇಳೆ ಪ್ರಧಾನಿ ಮೋದಿ ನೀಡಿದ 10 ರೂಪಾಯಿಯ ನೋಟಿಗೆ ಈಗ ಭಾರಿ ಬೇಡಿಕೆ ಬಂದಿದೆ.

Add Asianetnews Kannada as a Preferred SourcegooglePreferred

1,11,000 ರೂಪಾಯಿ ನೀಡುವುದಾಗಿ ಹೇಳಿದ ಹರ್ಯಾಣ ವ್ಯಕ್ತಿ

ಹೌದು ಈ ಹತ್ತು ರೂಪಾಯಿಯನ್ನು ತನಗೆ ನೀಡಿದರೆ ಅದರ ಬದಲಾಗಿ 1,11,000 ರೂಪಾಯಿ ನೀಡುವುದಾಗಿ ವ್ಯಕ್ತಿಯೊಬ್ಬರು ಆ ಚುರುಮುರಿ ಮಾಲೀಕನಿಗೆ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ. ಹರ್ಯಾಣ ಮೂಲದ ವ್ಯಕ್ತಿಯೊಬ್ಬರು 1,11,000 ರೂ ನೀಡೋದಾಗಿ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವರದಿಯ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿಲ್ಲ, ಆದರೆ ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಪ್ರಚಾರಕ್ಕೆ ಹೋದಾಗ ಅಲ್ಲಿ ಜನ ಸಾಮಾನ್ಯರು ರೈತರು ಮಕ್ಕಳೊಂದಿಗೆ ಎಂದಿನಂತೆ ಬೆರೆತಿದ್ದರು.

ಇದನ್ನೂ ಓದಿ: ನದಿಯಲ್ಲಿ ಮುಳುಗಿ ತಾಯಿ ಮಗು ಸಾವು: ಮುಳುಗುತ್ತಿದ್ದ ಮಗನ ರಕ್ಷಿಸಲು ಹೋದಾಗ ದುರಂತ

ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಮೋದಿ ಈ ವೇಳೆ ಅನಿರೀಕ್ಷಿತವಾಗಿ, ರಸ್ತೆ ಬದಿಯಲ್ಲಿದ್ದ ಕುರುಕಲು ತಿಂಡಿಯ ಅಂಗಡಿಗೆ ತೆರಳಿ ಮಂಡಕ್ಕಿ ಖರೀದಿಸಿದರು ಹಾಗೂ ಅದನ್ನು ಮಕ್ಕಳಿಗೆ ಹಂಚುವ ಮೂಲಕ ಗಮನ ಸೆಳೆದಿದ್ದರು. ಕಳೆದ ಶನಿವಾರ ಒಂದಾದ ಮೇಲೊಂದರಂತೆ 4 ರ್‍ಯಾಲಿಗಳಲ್ಲಿ ಭಾಗವಹಿಸಿದ ಮೋದಿ, ಝಾರ್‌ಗ್ರಾಂ ಎಂಬಲ್ಲಿರುವ ಪುಟ್ಟ ಅಂಗಡಿಯೊಂದಕ್ಕೆ ತೆರಳಿ, ಒಳ್ಳೆ ಗುಣಮಟ್ಟದ ಝಾಲ್ಮುರಿ (ಚುರುಮುರಿ) ತಯಾರಿಸುವಂತೆ ಕೇಳಿದರು. ಅದಕ್ಕೆ ಪ್ರತಿಯಾಗಿ ಸ್ವಂತ ಜೇಬಿನಿಂದ 10 ರು.ನ ಗರಿಗರಿ ನೋಟನ್ನು ತೆಗೆದು, ಅಂಗಡಿಯಾತ ನಿರಾಕರಿಸಿದರೂ ಕೇಳದೆ ಆತನ ಕೈಗಿಟ್ಟರು.

ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆಗಳ ಬಳಿಕ ಕಾಡುಕೋಣಗಳ ವೈಲ್ಡ್ ರೈಡ್: ಟೀ ಎಸ್ಟೇಟ್‌ನಲ್ಲಿ ದಾಂಧಲೆ: 1 ಕಾಟಿ ಸಾವು

ಇದೇ ವೇಳೆ ಆರೋಗ್ಯ ದೃಷ್ಟಿಯಿಂದ ಮಂಡಕ್ಕಿಗೆ ಉಪ್ಪು ಹಾಕದಂತೆ ಮನವಿ ಮಾಡಿದ ಪ್ರಧಾನಿ ಮೋದಿ, ಬಳಿಕ ಅದನ್ನು ಸುತ್ತಲಿದ್ದ ಮಕ್ಕಳಿಗೆ ಹಂಚಿದರು. ಇದರ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಅಸ್ಸಾಂಗೆ ತೆರಳಿದ್ದ ವೇಳೆ ಪ್ರಧಾನಿ ಅಲ್ಲಿನ ಚಹಾ ತೋಟವೊಂದಕ್ಕೆ ಭೇಟಿ ನೀಡಿ ಅಲ್ಲಿನ ಕೆಲಸಗಾರರೊಂದಿಗೆ ಮಾತನಾಡುತ್ತಾ ಚಹಾ ಎಲೆಗಳನ್ನು ಕಟಾವು ಮಾಡಿದ್ದರು. ಇದಕ್ಕೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

View post on Instagram